
ಪ್ರತಿಧ್ವನಿ ಯಲ್ಲಾಪುರ : ನಮ್ಮ ದೇಶದಲ್ಲಿ ಹಿಂದುಗಳು ಬಳಸುವ ಕುಂಕುಮ ಶುದ್ದ ಭಾರತೀಯ ಪ್ರಾಡಕ್ಟ ಆಗಿದೆ. ಆದರೆ, ಬಾರತ ಬಳಸುವ 90% ರಷ್ಟು ಕುಂಕುಮ ಬರುವುದು ಇಸ್ಲಾಮಿಕ್ ದೇಶಗಳಿಂದ ಎಂದು ಸುಳ್ಳು ಹೇಳಿಕೆ ಕೊಟ್ಟಿರುವ ಗ್ರಹ ಸಚಿವ ಪ್ರಿಯಾಂಕ್ ಖರ್ಗೆಯವರು ಮುಸ್ಲಿಂ ರಾಷ್ಟ್ರ ಇರಾನದಿಂದ ಬರುವ ಈ ಕುಂಕುಮವನ್ನು ಹಿಂದುಗಳು ಹಣೆಗೆ ಹಚ್ಚಿಕೊಳ್ಳುವುದಿಲ್ಲವೇ? ಎಂದು ಬೇರೆ ಪ್ರಶ್ನಿಸಿ, ಹಿಂದು ಮುಸ್ಲಿಂ ಮಧ್ಯೆ ಇಲ್ಲಿಯವರೆಗೂ ಇಲ್ಲದ ‘ಕುಂಕುಮ ಕಲಹ’ವನ್ನು ಹೊಸದಾಗಿ ಸೃಷ್ಟಿಸಲು ಹೊರಟಿದ್ದಾರೆ. ಎಂದು ಬಿಜೆಪಿ ಹಿರಿಯ ರಾಮುನಾಯ್ಕ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಈ ಗ್ರಹ ಸಚಿವರಿಗೆ ಕುಂಕುಮವೂ ಗೊತ್ತಿಲ್ಲ, ಕೇಶರವೂ ಗೊತ್ತಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಅಡುಗೆಗೆ, ಸುವಾಸನೆಗೆ ಬಳಸುವ “ಕೇಶರ” ಎನ್ನುವ ಸುಗಂಧಿತ ವಸ್ತುವನ್ನು ಭಾರತ, ಇರಾಣ ದೇಶದಿಂದ ಆಮದು ಮಾಡಿಕೊಳ್ಳುತ್ತದೆಯೇ ಹೊರತು, ಹಣೆಗೆ ಹಚ್ಚಿಕೊಳ್ಳುವ ಕೇಸರಿ ಬಣ್ಣ ಅಥವಾ ಕುಂಕುಮವನ್ನಲ್ಲ. ಕೇಶರವೇ ಬೇರೆ ಕೇಸರಿ ಬಣ್ಣವೇ ಬೇರೆ. ಅಷ್ಟಕ್ಕೂ ನಮಗೆ ಹೊರಗಿನಿಂದ ಕುಂಕುಮ ಅಥವಾ ಕೇಸರಿ ಬಣ್ಣವನ್ನು ತರಿಸಿಕೊಳ್ಳುವ ಅಗತ್ಯತೆಯೂ ಇಲ್ಲ. ಇಲ್ಲಿ ನಮ್ಮ ದೇಶದಲ್ಲಿಯೇ ಹೇರಳವಾಗಿ ಲಭ್ಯವಿರುವ ಅರಿಶಿಣ, ಸುಣ್ಣ, ಅಲಂ, ಲಿಂಬೆರಸ ಇತ್ಯಾದಿ ವಸ್ತುಗಳನ್ನು ಸೇರಿಸಿ ಇಲ್ಲಿಯೇ ಮಿಶ್ರಣ ತಯಾರಾಗುತ್ತದೆ. ಪ್ರಿಯಾಂಕ್ ಖರ್ಗೆಯವರಿಗೆ ಇದೆಲ್ಲ ಗೊತ್ತಿರಬೇಕು. ಅವರು ನಿರ್ವಹಿಸುತ್ತಿರುವ ಗ್ರಹ ಇಲಾಖೆ ಸರಕಾರದ ಅತ್ಯಂತ ಗೌರವಾನ್ವಿತ ಇಲಾಖೆಯಾಗಿದೆ. ಇಲ್ಲಿ ಮಾತು ಕಡಿಮೆ ಕಾರ್ಯ ಹೆಚ್ಚು. ಹೀಗಾಗಿ ಸಚಿವರ ಮಾತಿಗೂ ಒಂದು ತೂಕವಿರಬೇಕು.

ನಮ್ಮ ಹಿಂದಿನ ಗೃಹ ಸಚಿವರಾಗಿದ್ದ ಪರಮೇಶ್ವರರವರು ಸಾಕಷ್ಟು ಪಳಗಿದ ರಾಜಕಾರಿಣಿ ಆಗಿದ್ದರೂ, ಗ್ರಹ ಮಂತ್ರಿಯಂತಹ ಉನ್ನತ ಹುದ್ದೆಯಲ್ಲಿದ್ದಾಗ ಏನು ಮಾತಾಡಬೇಕು, ಎಷ್ಟು ಮಾತನಾಡಬೇಕು ಎನ್ನುವ ಬಗ್ಗೆ ಪರಿಜ್ಞಾನ ಹೊಂದಿ, ಅಷ್ಟನ್ನೇ ಮಾತನಾಡುತ್ತಿದ್ದರು. ಹೀಗಾಗಿ ಮಾಜಿ ಸಚಿವರು, ದಕ್ಷ ಸಚಿವರು ಅನಿಸಿಕೊಳ್ಳದೇ ಇದ್ದರೂ, ವಿವಾದಗಳ ಕೇಂದ್ರಬಿಂದುವೂ ಆಗಿರಲಿಲ್ಲ. ಈಗಿನ ಗೃಹ ಸಚಿವರು ಅದಕ್ಕೆ ತದ್ವಿರುದ್ದ. ಕಲಿತಿದ್ದೂ ಅಷ್ಟೇ, ಅನುಭವವೂ ಅಷ್ಟಕ್ಕಷ್ಟೇ, ಪ್ರದೀಪ ಈಶ್ವರರಂತೆ ಏನು ಗೊತ್ತಿಲ್ಲದಿದ್ದರೂ ಎಲ್ಲವೂ ಗೊತ್ತಿದ್ದವರಂತೆ ಮಾತನಾಡಿ,ಎಲ್ಲ ಇಲಾಖೆಗಳಲ್ಲೂ ತಲೆಹಾಕಿ, ಸಾರ್ವಜನಿಕರಿಂದ ಗೇಲಿಗೆ ಒಳಗಾಗುತ್ತಾರೆ. ಅನಗತ್ಯವಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಚಿತ್ತಾಪುರ ಗಲಭೆ, ಆರ್.ಎಸ್.ಎಸ್.ನೋಂದಣಿ, ಮತಪಟ್ಟಿ ಪರಿಷ್ಕರಣೆ, ಇ-20 ಪೆಟ್ರೋಲಗೆ ವಿರೋಧ, ಪ್ರಸ್ತುತ ಹಿಂದು ಕುಂಕುಮ ವಿವಾದ ಇವೆಲ್ಲ ಇವರ ಇತ್ತೀಚಿನ ಕೆಲವು ಸ್ಯಾಂಪಲ್ಲುಗಳು ಆಗಿವೆ. ರಾಮುನಾಯ್ಕ್










Prathidvani Yellapura