

ಪ್ರತಿಧ್ವನಿ ಯಲ್ಲಾಪುರ : ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿಯ ಹಳಿಯಾಳ್ ಕ್ರಾಸ್ ನಿಂದ ತಾಟವಾಳದ ವರೆಗೆ ರಾಜ್ಯ ರಸ್ತೆಗೆ ಅತ್ಯಂತ ದುರ್ಗತಿ ಬಂದಿದ್ದು ದುರಸ್ತಿ
ಕಾಣದೆ ಗುಂಡಿಯೋಳಗೆ ರಸ್ತೆ ಇರುವುದರಿಂದ ಪ್ರತಿ ನಿತ್ಯ ವಾಹನ ಸವಾರರು ನರಕ ಅನುಭವಿಸುತ್ತಿದ್ದು ಅಪಘಾತಗಳ ಸಂಖ್ಯೆ ಹೆಚ್ಚುತ್ತಲಿದೆ.


ಯಲ್ಲಾಪುರ ಮತ್ತು ಹಳಿಯಾಳ ಸಂಪರ್ಕಿಸುವ ರಸ್ತೆ ಭಾರಿ ಗುಂಡಿಗಳಿಂದ ತುಂಬಿಹೋಗಿದೆ. ಅಪರೂಪಕ್ಕೆ ಈ ಭಾಗದಲ್ಲಿ ವಾಹನ ಚಲಾಯಿಸುವುದು ಯಮಲೋಕಕ್ಕೆ ಪಯಣಿಸುವುದು ಒಂದೇ ಆಗಿದೆ. ವಯೋವೃದ್ದರು,ಗರ್ಭಿಣಿಯರು, ವಿಶೇಷ ಚೇತನರು ಈ ರಸ್ತೆಯಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ.

ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವುದು ಅದೇನು ರಾಕೆಟ್ ಸೈನ್ಸ ಎಂದು ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾತನ್ನೆ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಯಾವ ಸರ್ಕಾರಗಳು ಅಥವ ಅಧಿಕಾರಿಗಳು ತಮ್ಮ ಮನೆಯ ಹಣ ತಂದು ರಸ್ತೆ ಮಾಡುವುದಿಲ್ಲ. ಜನರು ಬೆವರು ಸುರಿಸಿ ಸಂಪಾದನೆಮಾಡಿ ಅದರಲ್ಲಿ ಕಟ್ಟಿದ ತೆರಿಗೆ ಹಣದಲ್ಲಿ ನಿರ್ಮಿಸಿದ ಮತ್ತು ನಿರ್ವಹಿಸುವ ರಸ್ತೆಯಾಗಿದೆ. ಅಂದ ಮೇಲೆ ಹಣ ಹೆಚ್ಚಾದರು ಪರವಾಗಿಲ್ಲ ಹಣ ನಮ್ಮದೇ ಅಲ್ವ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ನಿಮಗೇನು ಎಂಬುದು ತೆರಿಗೆ ಪಾವತಿಸುವ ಈ ರಸ್ತೆ ಯಜಮಾನ ಸಾಮಾನ್ಯ ನಾಗರಿಕನ ಪ್ರಶ್ನೆ ಆಗಿದೆ.


ಇತ್ತೀಚೆಗೆ ಫೆಬ್ರವರಿ ತಿಂಗಳಲ್ಲಿ ನಡೆದ ಯಲ್ಲಾಪುರ ಗ್ರಾಮದೇವಿ ಜಾತ್ರೆ ಸಂದರ್ಭದಲ್ಲಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು ಆದರೆ ಇದೀಗ ಮತ್ತೆ ಆ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ ಇಲ್ಲವಾದಲ್ಲಿ ಸದ್ಯದಲ್ಲೆ ಬಾರಿ ಅವಘಡ ಕಾದಿದೆ. ಎಚ್ಚರ.. ಎಚ್ಚರ.. ಎಚ್ಚರ.


ರಸ್ತೆ ಅತ್ಯಂತ ದುಸ್ತಿತಿ ತಲುಪಿರುವ ಕುರಿತು ನನ್ನ ಗಮನಕ್ಕೆ ತಂದ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ. ಸ್ಥಿತಿ ಗತಿ ಅರಿತಿದ್ದೇನೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಂಡು ದುರಸ್ತಿ ಮಾಡಲಾಗುವುದು. ವಾಹನ ಸವಾರರು ಸಹ ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕಿದೆ. ರಾಮಲಿಂಗ ಎಇಇ,ಲೋಕೋಪಯೋಗಿ ಇಲಾಖೆ,ಯಲ್ಲಾಪುರ











Prathidvani Yellapura