

ಪ್ರತಿಧ್ವನಿ ಯಲ್ಲಾಪುರ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಾಪುದಲ್ಲಿ ಎನ್ ಸಿ ಸಿ ಅಸೋಸಿಯೇಷನ್ ವತಿಯಿಂದ ಸಾಫ್ಟ್ ಸ್ಕಿಲ್ಸ್ ಡೆವಲಪ್ಮೆಂಟ್ ಕಾರ್ಯಕ್ರಮದಡಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ncc ಅಲ್ಯುಮಿನಿ ಅಸೋಸಿಯೇಷನ್ ನ ಅಭ್ಯರ್ಥಿ ಯಮುನಾ ಶ್ರೀನಿಧಿ ( ಅಂತರಾಷ್ಟ್ರೀಯ ಕಲಾವಿದರು ಹಾಗೂ ಖ್ಯಾತ ಅಭಿನೇತ್ರಿ)ಅವರು ಹಾಗೂ ಇನ್ನೋರ್ವ ಅಭ್ಯರ್ಥಿ ಗೌತಮ್ ಎಚ್ ಜಿ (ಸಿವಿಲ್ ಡಿಫೆನ್ಸ್ ಬೆಂಗಳೂರು ಇದರ ಕಮಾಂಡಿಂಗ್ ಆಫೀಸರ್)ಇವರು ಉಪನ್ಯಾಸಕರಾಗಿದ್ದು ಹರಿಪ್ರಸಾದ್ ದೇಸಾಯಿ(ಉಪನ್ಯಾಸಕರು ಜಿಸಿ ಕಾಲೇಜ್ ಅಂಕೋಲಾ) ಇವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಪ್ರಾಂಶುಪಾಲರಾದ ಸಂಜಯ್ ನಾಯಕ್ ಇವರು ಅತಿಥಿಗಳಾಗಿದ್ದು ncc ಘಟಕದ ANO ಆಗಿರುವ ಫಸ್ಟ್ ಆಫೀಸರ್ ಶಿಲ್ಪ ಪ್ರಭು ಇವರು ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










Prathidvani Yellapura