Breaking News

ಶ್ರೀರಾಮನೂ ಮುನಿದನೇ ? ಶಾಂತ ಸ್ವಭಾವದ ದೇವರಾದರು ದುಷ್ಟರಿಗೆ ಶಿಕ್ಷೆ ಗ್ಯಾರಂಟಿ – ಡಿ.ಜಿ‌. ದುಂಡಿ,ವಜ್ರಳ್ಳಿ

ಹಿರಿಯ ಬರಹಗಾರ ಕವಿ ಡಿ.ಜಿ.ದುಂಡಿ,ವಜ್ರಳ್ಳಿ ಲೇಖನಿಯಲ್ಲಿ…🖊

ಹೀಗೊಂದು ಅಚ್ಚರಿ ಪಟ್ಟಿ
ಹಿರಿಯರು ಮಾಡಿದ್ದು, ಹೇಳಿದ್ದು ಕೇಳಿದ್ದೇನೆ.
ಶ್ರೀ ವೀರಭದ್ರ ,ಭದ್ರಕಾಳಿ, ನಾರಸಿಂಹ, ಕಾಳಿಕಾದೇವಿ
ರುದ್ರ ಶಿವ, ಕಾಲಭೈರವ,
ಪ್ರತ್ಯಂಗಿರಾ ದೇವಿ, ದುರ್ಗಾದೇವಿ , ವರಾಹ,
ಮಾರುತಿ, ಧೂಮ್ರವರ್ಣ
(ಗಣೇಶ) ನಾಗದೇವತೆ
ಇತ್ಯಾದಿ ಇತ್ಯಾದಿ.

ಸಾಮಾನ್ಯವಾಗಿ
ಇವರೆಲ್ಲ ಹಿಂದೂ ಧರ್ಮದಲ್ಲಿ ಉಗ್ರ ದೇವತೆಗಳು
ಎಂದು ಹೆಸರು ಪಡೆದ
ದೇವರುಗಳು.
ಶಾಂತ ದೇವತೆಗಳು ಎಂದು ಕರೆಯಲ್ಪಡುವ ದೇವರುಗಳ
ಯಾದಿ ಇಲ್ಲಿದೆ.
ವಿಷ್ಣು, ಬ್ರಹ್ಮ, ಲಕ್ಮಿದೇವಿ,
ಶಾರದಾಂಬೆ,ಶ್ರೀ ರಾಮ,ಶ್ರೀ ಕೃಷ್ಣ ಇತ್ಯಾದಿ ಇತ್ಯಾದಿ.
ನಿಜವಾಗಿಯೂ ಉಗ್ರ ದೇವತೆಗಳು ಧುಷ್ಟರನ್ನು
ದಂಡಿಸಿದ ರೀತಿ ಅವರನ್ನು
ಸಂಹರಿಸಿದ ರೀತಿ ಭಯ
ಹುಟ್ಟಿಸುತ್ತದೆ.
ಹಾಗೇ ಶಾಂತ ದೇವತೆಗಳು
ಹೆಚ್ಚಿನ ಕ್ಷಮಾ ಗುಣ ಹೊಂದಿ
ತಪ್ಪು ಮಾಡಿದವರನ್ನು ಕ್ಷಮಿಸಿ
ತಿದ್ದಿಕೊಳ್ಳುವ ಅವಕಾಶ
ನೀಡಿದ್ದನ್ನು ಪುರಾಣ ಕಥೆಗಳಲ್ಲಿ ಓದಿದ್ದೇವೆ.
ಆಣೆ ಪ್ರಮಾಣ (ಹುಸಿ) ಮಾಡುವವರು ಹೆಚ್ಚಾಗಿ
ಶಾಂತ ದೇವರಲ್ಲಿ ಹೋಗಲು
ಬಯಸುತ್ತಾರೆ.
ಉಗ್ರ ದೇವರೆಂದರೆ ಭಯ.
ಉಗ್ರ ದೇವರ ಶಿಕ್ಷೆ ಉಗ್ರವಾಗಿರುತ್ತದೆ.ಮತ್ತು
ತಕ್ಷಣ ಪರಿಣಾಮ ಬೀರುತ್ತದೆ.
ಇದು ನಮ್ಮ ವೀರಭದ್ರ ದೇವರ ಸನ್ನಿದಾನದಲ್ಲಿ
ನಾನು ನೋಡಿದ ಘಟನೆ
ಆದರಿಸಿ ಹೇಳುತ್ತಿದ್ದೇನೆ.
ಶ್ರೀರಾಮ ಶಾಂತ ದಲ್ಲಿ ಶಾಂತ
ದೇವರು.ಪುರಾಣದ ಪ್ರಕಾರ
ಇನ್ನೊಬ್ಬರಿಗೆ ನೋವು ಎಂದಿಗೂ ಮಾಡದ, ತಪ್ಪು
ಮಾಡಿದವರಿಗೆ ತಿದ್ದಿಕೊಳ್ಳುವ
ಅವಕಾಶ ನೀಡಿ ಕೊನೆಯಲ್ಲಿ
ಅನಿವಾರ್ಯ ಆದಾಗ ಶಿಕ್ಷೆ
ಕೊಡುವ ರಾಮದೇವರು
ಎಂದು ಹೆಸರಾದವನು.

ಈಗ ಅಸಲಿ ಕಿರುಕಥೆ ನಿಮ್ಮ
ಮುಂದೆ ಇಡುತ್ತಿದ್ದೇನೆ.

ಅಯೋಧ್ಯೆಯ ಶ್ರೀರಾಮ ಚಂದ್ರ ಮರ್ಯಾದಾ ಪುರುಷೋತ್ತಮ.ಕೋಟಿ
ಕೋಟಿ ಭಕ್ತರ ,ಹಿಂದುಗಳ
ಭಕ್ತಿ ಕೇಂದ್ರ. ಅದೂ ಶತ ಶತಮಾನದ ಕನಸು ನನಸಾದ
ಸಂದರ್ಭದಲ್ಲಿ ಖುಷಿ ಅಭಿವ್ಯಕ್ತಿ ಮಾಡುತ್ತ ಮಂದಿರ
ನಿರ್ಮಾಣ ಮಾಡಲೆಂದು
ಹಣದ ಹೊಳೆ ಹರಿದು ಬಂತು ದೇಣಿಗೆ ರೂಪದಲ್ಲಿ ಭಕ್ತರು ನೀಡಿದರು.
ಅದರಲ್ಲೊಂದು ಧೃಡ ಸಂಕಲ್ಪ
ಪ್ರತಿ ರೂಪಾಯಿಯಲ್ಲಿ ಅಚಲ
ನಂಬಿಕೆಯ ಶಕ್ತಿ ತುಂಬಿಕೊಂಡು ಇತ್ತು.
ಎಣಿಕೆ ಮಾಡುವ ಕೆಲವರಿಗೆ
ದುರಾಸೆ ಮೂಡಬೇಕೇ?
ಹೇಗೂ ಶ್ರೀ ರಾಮಚಂದ್ರ
ನಮ್ಮನ್ನು ಕ್ಷಮಿಸಿಯಾನು
ಅಂಥಹ ಉಗ್ರ ಶಿಕ್ಷೆ ನೀಡಲಾರ
ಅದೂ ತ್ವರಿತ ಶಿಕ್ಷೆ ನೀಡಿದ
ದಾಖಲೆಯೇ ಇಲ್ಲವೆಂದು
ಮನಸ್ಸಿನಲ್ಲಿ ಧೈರ್ಯ ತುಂಬಿ
ಕೊಂಡು ಆಸೆಗೆ ಅಲ್ಲ ದುರಾಸೆ
ಗೊಳಗಾಗಿ ದೋಚಿಯೇಬಿಟ್ಟರು.
ಮರ್ಯಾದಾ ಪುರುಷೋತ್ತಮನ ಮುಂದು
ಗಡೆ ಕಳ್ಳತನ ದೊಡ್ಡ ಅಪರಾಧ
ನಡೆದೇಹೋಯಿತು.
ಕೋಟ್ಯಂತರ ಭಕ್ತರ ಶುಧ್ಧ
ಮನಸ್ಸಿನ ಕೊಡುಗೆಯ ಶಕ್ತಿ
ಬಹುಶಃ ಶ್ರೀ ರಾಮಚಂದ್ರನ
ಸಹನೆಯನ್ನೂ ಮೀರಿ ಕಳ್ಳರಿಗೆ
ಶಿಕ್ಷೆ ಕೊಡದಿದ್ದರೆ ಭಕ್ತರು ತನ್ನ
ಮೇಲಿಟ್ಟ ನಂಬಿಕೆ ಭರವಸೆಗೆ
ಭಂಗ ಉಂಟಾಗಿ ದುಃಖಕ್ಕೆ
ಒಳಗಾಗಬಹುದು ಎಂದು
ತಕ್ಷಣ ದಂಡಿಸುವ ನಿರ್ಣಯ
ಮಾಡಿದ ಅನಿಸುತ್ತದೆ.
ಅವರೊಳಗೇ ಸಮಪಾಲಾಗದೇ ಬಂದ
ತಕರಾರಿನ ರೂಪದಲ್ಲಿ
ವಿಷಯ ಹೊರಬರುವಂತಾಗಿ
ಇಂದು ಶ್ರೀರಾಮನೂ ಇಷ್ಟು
ತ್ವರಿತ ಶಿಕ್ಷಿಸಲು ಸಾಧ್ಯವೇ
ಎಂದು ಧನ ಗಳ್ಳರು ಸೆರೆಮನೆಯಲ್ಲಿ ಕುಳಿತು ವಿಚಾರ ಮಾಡುತ್ತಿರಬಹುದು.
ಅವರ ಮನದಲ್ಲಿ ಉಂಟಾದ
ತುಮುಲ ಪರಿಹರಿಸಿಕೊಳ್ಳಲು
ಶ್ರೀ ಕೃಷ್ಣನ ಜನ್ಮ ಸ್ಥಾನ ವೂ
ಇದೇ. ನಾವೂ ಇಲ್ಲಗೇ ಬಂದಿದ್ದೇವೆ ಎಂದು ತಮಗೆ
ತಾವೇ ಸಾಂತ್ವನ ಹೇಳಿಕೊಂಡು ದಿನ ಕಳೆಯಬೇಕಷ್ಟೆ.

ಇದರಿಂದ ಯಾವ ಶಾಂತ ಸ್ವಭಾವದ ದೇವರಾದರೂ
ಸಮಯ ಬಂದಾಗ ಉಗ್ರ
ಸ್ವರೂಪ ಪಡೆದು ದುಷ್ಟರಿಗೆ
ಶಿಕ್ಷೆ ಕೊಡುತ್ತಾನೆ ಎಂದು
ಮನುಜ ಕುಲಕ್ಕೆ ಅರಿವು
ಮೂಡಿಸುವ ಮೂಲಕ
ದೇವರ, ಪರರ, ಹಣ ಅಪಹರಣ ಮಾಡಬೇಡಿ
ಇಂದಲ್ಲ ನಾಳೆ ಪ್ರತಿಫಲ
ಅನುಭವಿಸಬೇಕಾಗುತ್ತದೆ
ಎಂಬ ಪಾಠವನ್ನು ಹೇಳಿದಂತೆ
ಅನಿಸುತ್ತದೆ.

ಇದ್ದವನಿಗೇಕಯ್ಯ
ಇನ್ನಷ್ಟು ದುಡ್ಡು
ಕೂಡಿಟ್ಟು ಕೂಡಿಟ್ಟು
ಹೆಚ್ಚುವುದು ಜಡ್ಡು
ಅತಿಯಾದ ಜಲವಿರಲು
ಒಡೆಯುವುದು ಒಡ್ಡು
ಮನದ ದಾಹಕೆ ಎದುರು
ನಿಲು ಹೊಡೆದು ಸಡ್ಡು.

ಹಿರಿಯ ಬರಹಗಾರ ಕವಿ ಡಿ.ಜಿ.ದುಂಡಿ,ವಜ್ರಳ್ಳಿ ಲೇಖನಿಯಲ್ಲಿ…🖊

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *