Breaking News

ಯಲ್ಲಾಪುರ ಬಸ್ ನಿಲ್ದಾಣದ ಎಜುಕೇಶನ್ ಸ್ಪಾಟ್ ನಲ್ಲಿ “ಅಬಾಕಸ್ ಕ್ಲಾಸ್ ಪ್ರಾರಂಭೋತ್ಸವ “


ಪ್ರತಿಧ್ವನಿ ಯಲ್ಲಾಪುರ : ನಿಮ್ಮ ಮಕ್ಕಳ ಬುದ್ದಿ ಚುರುಕಾಗಿಸಲು ಶೈಕ್ಷಣಿಕ ಚಟುವಟಿಕೆಯಲ್ಲಿ ಉನ್ನತ ಸ್ಥಾನಕ್ಕೇರಲು “ಅಬಾಕಸ್” ಸಂಪೂರ್ಣ ಸಹಕಾರಿಯಾಗಿದ್ದು 2026-27 ನೆ ಶೈಕ್ಷಣಿಕ ವರ್ಷದ ಕ್ಲಾಸಸ್ ಪ್ರಾರಂಭಗೊಂಡಿದೆ.


ಕಳೆದ ಹಲವು ವರ್ಷಗಳಿಂದ ಅಬಾಕಸ್ ಕ್ಷೇತ್ರದಲ್ಲಿ ಉತ್ತಮ ಹೆಸರಾಗಿ ನೂರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟು ಹೆಸರಾದ ” ಪ್ರೊಪಾಥ್ ಅಕಾಡೆಮಿ ” ಯಲ್ಲಾಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮಹಡಿಯ ಮೇಲೆ ಶುಭಾರಂಭಗೊಂಡಿದೆ.


“ಪ್ರೊಪಾಥ್ ಅಕಾಡೆಮಿ ಕೋ-ಡೈರೆಕ್ಟರ್ ಮುರಳೀಧರ ಬೋರ್ಕರ್ ಮತ್ತು ಶಿಕ್ಷಕಿ ಸಂಧ್ಯಾ ಭಟ್ ಅಬಾಕಸ್ ಕ್ಲಾಸಸ್ ಪ್ರಾರಂಭದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಕೋರಿದರು ಮತ್ತು ನೆರೆದಿದ್ದ ಪೋಷಕರಿಗೆ ಅಬಾಕಸ್ ಮಕ್ಕಳಿಗೆ ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸೆಂಟರ್ ವ್ಯವಸ್ಥಾಪಕಿ ಜ್ಯೋತಿ ನಾಯ್ಕ್ ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *