
ಪ್ರತಿಧ್ವನಿ ಯಲ್ಲಾಪುರ : ಬಾರಿ ಕುತೂಹಲ ಸೃಷ್ಟಸಿದ್ದ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಚುನಾವಣಾ ಫಲಿತಾಂಶ ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಏಣಿಕೆ ಕಾರ್ಯಕ್ಕೆ ಅಂದು ತಡೆ ನೀಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಸೋಮವಾರ ಮತ ಎಣಿಕೆ ಮಾಡಿದ್ದು ಪ್ರಗತಿಪರ ರೈತ ಕಳೆದಬಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ತಂಡ ಮೇಲುಗೈ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಆರ್.ಎನ್ ಹೆಗಡೆ ಗೊರ್ಸಗದ್ದೆ ಮತ್ತು ಗಣಪತಿ ಮುದ್ದೆಪಾಲ್ ಸಹ ಗೆಲುವಿನ ನಗೆ ಬೀರಿದ್ದಾರೆ.

ಇತಿಹಾಸ ಸೃಷ್ಟಿಸಿದ ಗಣಪತಿ ಮುದ್ದೆಪಾಲ್ ಗೆಲುವು.
ಟಿ.ಎಂ.ಎಸ್ ಇತಿಹಾಸದಲ್ಲಿ ಇದುವರೆಗು ಪಕ್ಷೇತರನಾಗಿ ಸ್ಪರ್ಧಿಸಿ ಯಾರು ಗೆಲುವು ಸಾಧಿಸಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ಗಣಪತಿ ಮುದ್ದೆಪಾಲ್ ಸಂಸ್ಥೆಯ ಸದಸ್ಯ ಮತದಾರರ ಮನಗೆದ್ದು ಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಾರೆ. ವಿಶೇಷ ಎಂದರೆ ಒಟ್ಟು ಹತ್ತು ಸಹಕಾರಿ ಸಂಸ್ಥೆಗಳ ಮತವು ಬೀಳುವುದರೊಂದಿಗೆ ಪ್ರಚಂಡ ಗೆಲುವನ್ನು ದಾಖಲಿಸಿದಂತಾಗಿದೆ.
ಸೌಹಾರ್ದ ಭಾರತಿ ಮತ್ತು ಸಹಕಾರ ಭಾರತಿ ಎಂಬ ಎರಡು ತಂಡಗಳು ಚುನಾವಣ ರಣ ಕಣಕ್ಕೆ ಇಳಿದಿದ್ದವು. ಒಟ್ಟು 14 ನಿರ್ದೇಶಕರನ್ನು ಒಳಗೊಂಡ ಟಿ.ಎಂ.ಎಸ್ ಸಂಸ್ಥೆಗೆ ಈಗಾಗಲೆ ಎರಡು ಸ್ಥಾನಗಳು ಅವಿರೋದವಾಗಿ ಆಯ್ಕೆಯಾಗಿದ್ದವು ಉಳಿದ ಹತ್ತು ಸ್ಥಾನಗಳಿಗೆ ಮತದಾನ ನಡೆದಿತ್ತು. ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಮತ ಎಣಿಕೆ ನಡೆದಿರಲಿಲ್ಲ ಇದೀಗ ನಡೆದಿದ್ದು ಸಹಕಾರಿ ಭಾರತಿ ತಂಡ ಮೇಲುಗೈ ಸಾಧಿಸಿದಂತಾಗಿದೆ.









Prathidvani Yellapura