ಪ್ರತಿಧ್ವನಿ ಯಲ್ಲಾಪುರ : ಸರ್ಕಾರಿ ನೌಕರಿಯಿಂದ ನಿವೃತ್ತಿ ಆದವರೆ ಯಲ್ಲಾಪುರ ಲಯನ್ಸ್ ಕ್ಲಬ್ ಸೇರಿ ಸೇವಾ ಕ್ಷೇತ್ರ ಆಯ್ದುಕೊಂಡ ಲಯನ್,ಸುರೇಶ್ ಬೋರ್ಕರ್ ಅವರಿಗೆ ನೆರೆ ರಾಜ್ಯ ಗೋವಾದಲ್ಲಿ ನಡೆದ ಲಯನ್ಸ್ ಕ್ಲಬ್ ಅದ್ದೂರಿ ಕಾರ್ಯಕ್ರಮ 2025-26 ನೆ ಸಾಲಿನ “ಡಿಸ್ಟಿಕ್ 317 B ನ ಅವಾಡ್೯ ಕಾರ್ಯಕ್ರಮದಲ್ಲಿ “out standing zone chairperson” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿಸ್ಟಿಕ್ ಗೌರ್ನರ್ ಲಯನ್ ಪಿಎಂಜೆಎಫ್,ಜಯಮುಲ್ ನಾಯ್ಕ್ ಹಾಗು ಪಿಎಂಜೆಎಫ್ ಲಯನ್ ಡಾ,ಕೀರ್ತಿ …
Read More »Monthly Archives: July 2026
ತಡೆಹಿಡಿದಿದ್ದ ಟಿ.ಎಂ.ಎಸ್ ಚುನಾವಣ ಪಲಿತಾಂಶ ಪ್ರಕಟ- ಮೇಲುಗೈ ಸಾದಿಸಿದ ಸಹಕಾರ ಭಾರತಿ ತಂಡ.
ಪ್ರತಿಧ್ವನಿ ಯಲ್ಲಾಪುರ : ಬಾರಿ ಕುತೂಹಲ ಸೃಷ್ಟಸಿದ್ದ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಚುನಾವಣಾ ಫಲಿತಾಂಶ ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಏಣಿಕೆ ಕಾರ್ಯಕ್ಕೆ ಅಂದು ತಡೆ ನೀಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಸೋಮವಾರ ಮತ ಎಣಿಕೆ ಮಾಡಿದ್ದು ಪ್ರಗತಿಪರ ರೈತ ಕಳೆದಬಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ತಂಡ ಮೇಲುಗೈ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆರ್.ಎನ್ ಹೆಗಡೆ ಗೊರ್ಸಗದ್ದೆ ಮತ್ತು ಗಣಪತಿ ಮುದ್ದೆಪಾಲ್ ಸಹ ಗೆಲುವಿನ ನಗೆ …
Read More »ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಲೆಕ್ಕಾಚಾರ ಸಭೆ – ವೆಂಕಟ್ರಮಣ ಮಠ ದಲ್ಲಿ ನಡೆಯಿತು.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದಲ್ಲಿ ರವಿವಾರ 2026 ನೆ ಸಾಲಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಲೆಕ್ಕಾಚಾರ ಸಮರ್ಪಣಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿ ವಹಿಸಿದ್ದು ಜಮಾ-ಖರ್ಚಿನ ಮಾಹಿತಿ ನೀಡಿ ಉತ್ಸವದ ಯಶಸ್ಸಿಗೆ ಕಾಣೀಕರ್ತರಾದ ಸರ್ವರನ್ನು ಸ್ಮರಿಸಿ ಧನ್ಯವಾದ ತಿಳಿಸಿದರು. 26 ನೆ ವರ್ಷದ ನಿಮಿತ್ತ ಯುಗಾದಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು …
Read More »ಯಲ್ಲಾಪುರದ ಹಿಟ್ಟಿಬೈಲ್ ಸಮೀಪ ಬಸ್,ಕಾರು,ಸ್ಕೂಟಿ ನಡುವೇ ಭೀಕರ ಅಪಘಾತ ಸವಾರರಿಬ್ಬರ ಸಾವು.
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನ ಹಿಟ್ಟಿಬೈಲ್ ಸಮೀಪ ಭಾನುವಾರ ಮಳೆಯ ನಡುವೆಯೇ ಬಸ್, ಕಾರು ಹಾಗೂ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,ಯಲ್ಲಾಪುರ ತಾಲ್ಲೂಕು ಆಸ್ಪತ್ರೆ ಆಂಬುಲೆನ್ಸ್ ಮೂಲಕ ಮೃತರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಹಾಗೂ ಆಂಬುಲೆನ್ಸ್ ಸಿಬ್ಬಂದಿ ಆಗಮಿಸಿದ್ದು ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಗು ಮೃತ ಯುವಕರ ಬಗ್ಗೆ …
Read More »ಯಲ್ಲಾಪುರದ ಸವಣಗೇರಿಯಲ್ಲಿ ರವಿವಾರ ನಡೆದ ಶಾಲೆಯ ಸ್ವಚ್ಚತಾ ಕಾರ್ಯ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೊರ ವಲಯ ಸವಣಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದ ಸ್ವಚ್ಚತಾ ಕಾರ್ಯ ಸ್ಥಳೀಯ ನಾಗರಿಕರು ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಪ್ರಮುಖರೊಂದಿಗೆ ರವಿವಾರ ನೆರವೇರಿತು. ಶಾಲೆಯ ಆವರಣದಲ್ಲಿ ಬೆಳೆದ ಅನವಶ್ಯಕ ಗಿಡಗಂಟಿಗಳನ್ನು ತೆಗೆದು ಸ್ವಚ್ಚಗೊಳಿಸಲಾಯಿತು. ಶಾಲೆಯ ಸ್ವಚ್ಚತಾ ಕಾರ್ಯದ ಶ್ರಮದಾನದಲ್ಲಿ ಪಾಲ್ಗೊಂಡ ರವಿ ನಾಯ್ಕ, ಮಂಜುನಾಥ ನಾಯ್ಕ,ಜಾಬೀರ್ ಶೇಖ್, ತಿಮ್ಮಣ್ಣ,ರಾಘವೇಂದ್ರ ಹೆಗಡೆ, ಉಮಾಮಹೇಶ್ವರಭಟ್ಟ , ವಿಶ್ವನಾಥ ಭಟ್ಟ, ಯುವರಾಜ ಗೊಂದಳಿ, ಶಶಿಧರ್ ಗೊಂದಳಿ, ವಿಜಯಾ …
Read More »ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ.
ಪ್ರತಿಧ್ವನಿ ಯಲ್ಲಾಪುರ : “ಟೈಲರಿಂಗ್ ಕೇವಲ ಒಂದು ಕೌಶಲವಲ್ಲ, ಅದು ಮಹಿಳೆಯರ ಜೀವನಕ್ಕೆ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉತ್ತಮ ಸ್ವಯಂ ಉದ್ಯೋಗವಾಗಿದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ಉದ್ಯಮವು ಮನೆಯಲ್ಲಿಯೇ ಆದಾಯ ಗಳಿಸಲು ಅವಕಾಶ ಕಲ್ಪಿಸುತ್ತದೆ. ಇಂದಿನ ದಿನಗಳಲ್ಲಿ ಶಾಲಾ ಸಮವಸ್ತ್ರ, ಮಹಿಳೆಯರ ಉಡುಪು, ಬ್ಲೌಸ್ ಹೊಲಿಗೆ, ಫ್ಯಾಷನ್ ಡಿಸೈನಿಂಗ್ ಹಾಗೂ ಬಟ್ಟೆಗಳ ಅಲ್ಟರೇಷನ್‌ಗೆ ನಿರಂತರ ಬೇಡಿಕೆ ಇರುವುದರಿಂದ ಟೈಲರಿಂಗ್ ಕ್ಷೇತ್ರವು ಶಾಶ್ವತ ಆದಾಯದ ಮೂಲವಾಗಿದೆ. …
Read More »ಅನುದಾನಿತ- ಸರ್ಕಾರಿ ಶಾಲಾ ಶಿಕ್ಷಕರೆಂಬ ತಾರತಮ್ಯ ಬಿಡಿ ಸರಿ ಸಮಾನವಾದ ಗೌರವ ಹಕ್ಕುಗಳನ್ನು ಕೊಡಿ – ಎಂ. ರಾಜಶೇಖರ್ ಮನವಿ
ಪ್ರತಿಧ್ವನಿ ಯಲ್ಲಾಪುರ : 30 ವರ್ಷಕ್ಕೂ ಹೆಚ್ಚಿನ ಅವಧಿಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ ಬರಿಗೈಯಲ್ಲಿ ಮನೆಗೆ ಹೋಗುವ ಅನುದಾನಿತ ಶಾಲಾ ಶಿಕ್ಷಕರ ಪಾಡು ಯಾರಿಗೂ ಬರಬಾರದು. ಈ ರೀತಿಯ ಮಲತಾಯಿ ಧೋರಣೆಯಿಂದ ಅನೇಕ ಶಿಕ್ಷಕರು ಇಂದು ಭ್ರಮನೀರಸನಗೊಂಡಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೂಚಿಸಿದಂತೆ ಓಪಿಎಸ್ ಜಾರಿಗೊಳಿಸಿ. ಬಸವರಾಜ ಹೊರಟ್ಟಿ ಅವರ ಕಾಲ್ಪನಿಕ ವೇತನದ ಮೇಲಿನ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುವ ಜ್ಯೋತಿ ಸಂಜೀವಿನಿ(ಸಿರಿ) ಹಾಗೂ …
Read More »ಕೋಳಿಕೇರಿ ವೀರ ಸತ್ಪುರುಷರಾದ ಕಾಳುಘಾಡಿ-ಬಾಳುಘಾಡಿ ಜಾತ್ರಾ ಮಹೋತ್ಸವ ಇಂದು.
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷದಂತೆ ಈ ವರ್ಷವು ಯಲ್ಲಾಪುರ ತಾಲೂಕಿನ ಕೋಳಿಕೇರಿ ಪರಿಸರದಲ್ಲಿ ನೆಲೆಸಿರುವ ವೀರ ಸತ್ಪುರುಷರಾದ ಕಾಳುಘಾಡಿ-ಬಾಳುಘಾಡಿ ಜಾತ್ರಾ ಮಹೋತ್ಸವವು ಮಿರಾಶಿ ಕುಟುಂಬ ಹಾಗು ಸ್ಥಳೀಯ ಪ್ರಮುಖರು ಹಾಗು ಹಿತೈಷಿಗಳ ಸಹಕಾರದಿಂದ ಇಂದು ರವಿವಾರ ಶ್ರದ್ದಾ ಭಕ್ತಿಯಿಂದ ಜರುಗುತ್ತಿದ್ದು ಪವಾಡ ಪುರುಷರ ದರ್ಶನ ಪಡೆಯಲು ರಾಜ್ಯ ಹೊರ ರಾಜ್ಯದಿಂದಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಆಗಮಿಸುತ್ತಿದ್ದು ಸಕಲ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಕ್ಷೇತ್ರ ಮಹಿಮೆ …
Read More »ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಮೊದಲಬಾರಿಗೆ ಜಿಲ್ಲೆಗಾಗಮಿಸಿದ ಯು.ಟಿ. ಖಾದರ್ – ಸ್ವಾಗತಿಸಿದ ಶಾಸಕ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ:: ಕಾರವಾರ ಜಿಲ್ಲಾ ಕೇಂದ್ರದಲ್ಲಿ ಪ್ರಕೃತಿ ವಿಕೋಪದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾದ ಸಭೆಯಲ್ಲಿ ಭಾಗವಹಿಸಲು ಕಾರವಾರಕ್ಕೆ ಆಗಮಿಸಿದ ಆರೋಗ್ಯ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಆತ್ಮೀಯವಾಗಿ ಸನ್ಮಾನಿಸಿ, ಜಿಲ್ಲೆಗೆ ಸ್ವಾಗತ ಕೋರಿದರು. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬೆನ್ನಲ್ಲೆ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯು.ಟಿ.ಖಾದರ್ ಅವರು …
Read More »ಮಳೆಗಾಲದ ಸಂದರ್ಭ ಹಾವು ಕಡಿತದ ಪ್ರಕರಣಗಳು ಹೆಚ್ಚು – ಕೃಷಿ ಚಟುವಟಿಕೆ ಸಂದರ್ಭದಲ್ಲಿ ರೈತರು ಜಾಗೃತಿ ವಹಿಸಿ.
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕೆಲ ದಿನಗಳಿಂದ ಹಾವು ಕಡಿತಕ್ಕೊಳಗಾದ ಪ್ರಕರಣಗಳು ಹೆಚ್ಚಾಗಿ ಬರುತ್ತಿದ್ದು ಸೂಕ್ತ ಚಿಕಿತ್ಸೆ ದೊರೆಯುತ್ತಿದೆ ಮತ್ತು ಅ್ಕ್ಕೆ ಸಂಬಂಧಿಸಿದ ಔಷಧಗಳು ತಾಲೂಕಿನ ಎಲ್ಲಾ ಪಿ.ಹೆಚ್.ಸಿ ಗಳಲ್ಲು ಸಹ ಲಭ್ಯ ಇರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಮಲೆನಾಡಿನಲ್ಲಿ ಕೃಷಿ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ ಅದಾಗಲೆ ತೋಟ,ಗದ್ದೆ,ಜಮೀನುಗಳಲ್ಲಿ ವಿವಿಧ ಜಾತಿ ಹಾವುಗಳ …
Read More »
Prathidvani Yellapura