ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಮಾಡುವ ಸ್ಥಳದಲ್ಲಿ ಹೆಸ್ಕಾಂ ಸಂಬಂಧಿಸಿದ ಟ್ರಾನ್ಸಫಾರ್ಮರ್ ಇದ್ದು ಮಹಿಳೆಯರು ಮಕ್ಕಳು ವಯೋವೃದ್ದರು ಇದೇ ಸ್ಥಳದಲ್ಲಿ ಜಮಾಯಿಸಿ ಬಸ್ ಹತ್ತವುದರಿಂದ ಕೊ.ಚ ನಿರ್ಲಕ್ಷ್ಯ ತೋರಿದರು ವಿದ್ಯುತ್ ಅವಘಡಕ್ಕೆ ಜೀವ ಬಲಿಯಾಗುವುದು ಖಂಡಿತವಾಗಿದ್ದು ಅಧಿಕಾರಿಗಳು ಗಂಭೀರವಾಗಿ ಗಮನಹರಿಸಿ ಭವಿಷ್ಯದಲ್ಲಿ ಆಗಬಹುದಾದ ಅನಾಹುತ ತಪ್ಪಿಸಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ. ಸುರಿಯುತ್ತಿರುವ ಮಳೆಯ ನಡುವೆ ಜನರು ವಿದ್ಯುತ್ ಎಚ್ಚರಿಕೆ ಯನ್ನು ಗಮನಿಸದೆ ಬಸ್ ಹತ್ತುವ …
Read More »Monthly Archives: July 2026
ಹುಣಸಗೇರಿಯಿಂದ-ಯಲ್ಲಾಪುರಕ್ಕೆ ಸಾರಿಗೆ ಸೌಲಭ್ಯ- ಶಾಸಕ ಹೆಬ್ಬಾರ್, ಪ್ರಮುಖ ವಿಜಯ್ ಮಿರಾಶಿಗೆ ಕೃತಜ್ಞತೆ ಸಲ್ಲಿಕೆ.
ಪ್ರತಿಧ್ವನಿ ಯಲ್ಲಾಪುರ : ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಮುಖಂಡರಾದ ವಿಜಯ ಮಿರಾಶಿ ಅವರ ನೇತೃತ್ವದಲ್ಲಿ ಹುಣಸಗೇರಿಯಿಂದ -ಯಲ್ಲಾಪುರಕ್ಕೆ ಸಾರಿಗೆ ಸೌಲಭ್ಯ ಪ್ರಾರಂಭಿಸಿದ್ದು ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ. ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹುಣಸಗೇರಿ ಗೌಳಿವಾಡಾ ಗ್ರಾಮದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಹೊಂದಿದ್ದು ಅನೇಕ ಪ್ರಾಣಿಗಳ ಭಯದಿಂದ ಕೂಡಿದೆ. ಇಂತಹ ದುರ್ಗಮ ಅರಣ್ಯದನಡುವೆ ನಡೆದು ದಾಗುವುದು ದುಸ್ತರದ ಸಂಗತಿಯಾಗಿತ್ತು. ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅಡಚಣೆಯಾಗುತ್ತಿತ್ತು. ಈ ಕುರಿತು ಸಮಸ್ಯೆಯನ್ನು ಈ ಭಾಗದ …
Read More »ಜನರ ಧ್ವನಿಯನ್ನು ಆಡಳಿತದ ಗಮನಕ್ಕೆ ತಲುಪಿಸುವ ಮಹತ್ತರ ಜವಾಬ್ದಾರಿ ಪತ್ರಕರ್ತರು ನಿಭಾಯಿಸುತ್ತಿದ್ದಾರೆ – ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಜನರ ಧ್ವನಿಯನ್ನು ಆಡಳಿತದ ಗಮನಕ್ಕೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಪತ್ರಕರ್ತರು ಸಮರ್ಥವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಮಂಗಳವಾರ ಸವಣಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವೇದಿಕೆ ಕಾರ್ಯಕ್ರಮಕ್ಕು ಮೊದಲು ಸವಣಗೇರಿ …
Read More »ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ – ಶಾಸಕ ದಿನಕರ ಶೆಟ್ಟಿ ಪ್ರಯತ್ನ ಶ್ಲಾಘನೀಯ ರಾಮು ನಾಯ್ಕ್..
ಪ್ರತಿಧ್ವನಿ ಯಲ್ಲಾಪುರ ಛಲ ಬಿಡದ ತ್ರಿವಿಕ್ರಮನಂತೆ, ಸರಕಾರ ಹಾಗೂ ಸಂಬಂಧಿತ ಇಲಾಖೆಗಳ ಬೆನ್ನು ಬಿದ್ದು, ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ ಆರಂಭಿಸಿದ ಶಾಸಕ ದಿನಕರ ಶೆಟ್ಟರಿಗೆ, ನಾಗರಿಕ ವೇದಿಕೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಯಲ್ಲಾಪುರದ ನಾಗರಿಕ ವೇಧಿಕೆ ಅಧ್ಯಕ್ಷ ರಾಮುನಾಯ್ಕ್ ಮಾದ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಇತ್ತೀಚೆಗೆ ಆರತಿ ಬೈಲ್ ಘಟ್ಟದಲ್ಲಿ ನಡೆದ ಭೀಕರ ಅಪಘಾತ ಪ್ರತಿ ದಿನ ಒಂದಿಲ್ಲೊಂದು ವಾಹನ ಅಪಘಾತ, ಸಾವು ನೋವು ಸಂಭವಿಸುವ ಅರಬೈಲ ಘಟ್ಟದಂತಹ …
Read More »ಯಲ್ಲಾಪುರ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಕಾನೂನು ಪಾಠ
ಪ್ರತಿಧ್ವನಿಯಲ್ಲಾಪುರ : ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಅತಿ ಮುಖ್ಯ. ಬೆಳೆಯುತ್ತಿರುವ ಜಗತ್ತಿನ ಜೊತೆಯಲ್ಲಿ ಹೊಸ ಹೊಸ ರೀತಿಯಲ್ಲಿ ಅಪರಾಧಗಳು ಬೆಳೆಯುತ್ತಿವೆ ಅದಕ್ಕೆ ಕಡಿವವಾಣ ಹಾಕಲೇಬೇಕು. ವಿಶೇಷವಾಗಿ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ವಿಶೇಷ ಕಾನೂನು ಜಾರಿಯಲಿದ್ದು ಅವುಗಳ ಮಾಹಿತಿಯನ್ನು ವಿದ್ಯಾರ್ಥಿ ದಿಸೆಯಲ್ಲಿ ತಿಳಿದುಕೊಂಡರೆ ಭವಿಷ್ಯದಲ್ಲಿ ಉಪಯುಕ್ತವಾಗಲಿದೆ ಎಂದು ಯಲ್ಲಾಪುರ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ರೇಖಾ ಹೇಳಿದರು. ಅವರು ಪಟ್ಟಣದ ಮಾಡೆಲ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಂಡು ಕಾನೂನಿನ ಅರಿವು …
Read More »ದೇವರ ದುಡ್ಡು ,ಹೊರೆಕಾಣಿಕೆ,ಉಡಿ ಕಾಣಿಕೆಗೆ ರಕ್ಷಣೆ ಎಲ್ಲಿದೆ ನಿಮ್ಮ ಕಾಣಿಕೆ ಕಳ್ಳರಿದ್ದಾರೆ ಎಚ್ಚರಿಕೆ…!!!
ಪ್ರತಿಧ್ವನಿ ಯಲ್ಲಾಪುರ : ಪ್ರಭು ಶ್ರೀ ರಾಮನ ಹಣ,ಒಡವೆ,ಬೆಳ್ಳಿ ಇಟ್ಟಿಗೆ,ಇತರೆ ಕಾಣಿಕೆಗಳನ್ನೆ ಬಿಡದೆ ಕದ್ದವರು ಸಮಸ್ತ ಹಿಂದು ಕುಲಕೋಟಿ ಬಂಧುಗಳಲ್ಲಿನ ನಂಬಿಕೆಗೆ ಗಾಯಪಡಿಸಿದ್ದಾರೆ ಅಲ್ಲದೆ ದೇವಾಲಯಗಳ ವ್ಯವಸ್ಥೆ ಮೇಲೆ ಅನುಮಾನ ಬರುವಂತೆ ಮಾಡಿರುವುದು ಅತ್ಯಂತ ಶೋಚನೀಯ ಆಗಿದೆ. ಪ್ರಭು ಶ್ರೀ ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಡೆದ ಕಾಣಿಕೆ ಕಳ್ಳತನದ ಹಗರಣ ಭೇದಿಸಲು ಅಲ್ಲಿನ ಸರ್ಕಾರ ಎಸ್‌ಐಟಿ ರಚಿಸಿದ್ದು ತನಿಖೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ದೇಶದ ಜನತೆ ಬೆಚ್ಚಿಬೀಳಿಸು ರೀತಿಯ …
Read More »ಯಲ್ಲಾಪುರ ಸಿಂಗಂ ಖ್ಯಾತಿಯ ಸಿಪಿಐ ವಿಜಯ್ ಬಿರಾದಾರ್ ಅವರಿಗೆ ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಯಾಗಿ ಬಡ್ತಿ ಅಧಿಕಾರ ಸ್ವೀಕಾರ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೆಲ ವರ್ಷಗಳ ಹಿಂದೆ ಸಿಂಹ ಘರ್ಜಿಸುತ್ತಿತ್ತು ಅದುವೆ ಸಿಪಿಐ ವಿಜಯ್ ಬಿರಾದಾರ ಎಂಬುದು ಯಲ್ಲಾಪುರ ತಾಲೂಕಿನ ಪ್ರತಿಯೊಬ್ಬರಿಗೂ ತಿಳಿದಂತಹ ವಿಷಯ ಅಂತಹ ಖಡಕ್ ಪೊಲೀಸ್ ಆಫಿಸರ್ ಅವರನ್ನು ಸರ್ಕಾರ ಕೊಪ್ಪಳ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್ ಪಿ ಯಾಗಿ ಬಡ್ತಿ ನೀಡಿದ್ದು ಅಧಿಕಾರ ಸ್ವೀಕರಿಸಿದ್ದಾರೆ. ವಿಜಯ್ ಬಿರಾದಾರ್ ಅವರು ಸಿಪಿಐ ಆಗಿ ಯಲ್ಲಾಪುರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು ಕೆಲವೇ ವರ್ಷಗಳಾದರು ಜನಮಾನಸದಲ್ಲಿ ಸಿಂಗಂ …
Read More »ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಹಣಕ್ಕೆ ಬರ ಬಂದಿದೆ – ಹೆದ್ದಾರಿಯಲ್ಲಿ ಊರುಗಳ ಮಾಹಿತಿ ಫಲಕ ಅದಕ್ಕೆ ಮಂಕಾಗಿದೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಹಾಕಿರುವ ತಲುಪುವ ಊರುಗಳ ಮಾರ್ಗಸೂಚಿ ಫಲಕಗಳು ಮಸುಕಾಗಿದ್ದು ಪುರಾತನ ಕಾಲದ ಅಳಿದುಳಿದ ಶಾಸನದಂತೆ ಭಾಸವಾಗುತ್ತಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಇಲಾಖೆ ತನ್ನ ಘನತೆ ಉಳಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೆ ಮಾಸಿಹೋದ ಫಲಕಗಳನ್ನು ಬದಲಿಸಬೇಕಿದೆ ಎಂಬುದು ವಾಹನ ಸವಾರರ ಆಗ್ರಹವಾಗಿದೆ. ಪರ ಊರುಗಳಿಂದ ಮತ್ತೊಂದು ಊರಿಗೆ ತೆರಳುವ ಪ್ರವಾಸಿಗರಿಗೆ ಸರಕು …
Read More »ಯಲ್ಲಾಪುರ ಪೊಲೀಸರಿಂದ “ಏರಿಯಾ ಡಾಮಿನೇಷನ್” ಕಾರ್ಯಾಚರಣೆ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಯಲ್ಲಾಪುರ ಪೊಲೀಸರಿಂದ ” ಏರಿಯಾ ಡಾಮಿನೇಷನ್ ” ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ, ಬೀದಿಗಳಲ್ಲಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶನಿವಾರ ಸಂಯುಕ್ತ ಕಾರ್ಯಾಚರಣೆ ನಡೆಸಿ, ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಮತ್ತು ಅಪರಾಧಿಗಳಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡಲಾಯಿತು. ಸಾರ್ವಜನಿಕರಲ್ಲಿ ಕಾನೂನು ಸುರಕ್ಷತೆಯ ವಿಶ್ವಾಸ ಸಮಾಜದಲ್ಲಿ ಶಾಂತಿ ನೆಲೆಸುವ ವಾತಾವರಣ, ನಾಗರಿಕರಲ್ಲಿ ಕಾನೂನಿನ ಪ್ರಜ್ಞಾವಂತಿಕೆ, …
Read More »ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್ ಪ್ರಕ್ರಿಯೆ ಉಸ್ತುವಾರಿಯಾಗಿ ವಿವೇಕ್ ಹೆಬ್ಬಾರ್ ಆಯ್ಕೆ – ಡಿಸಿಸಿ ಯಿಂದ ನೇಮಕ.
ಪ್ರತಿಧ್ವನಿ ಯಲ್ಲಾಪುರ : ದೇಶದಾದ್ಯಂತ ಎಸ್.ಐ.ಆರ್ ಪ್ರಕ್ರಿಯೆ ಅತ್ಯಂತ ವೇಗವಾಗಿ ಜರುಗುತ್ತಿದ್ದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೇಲುಸ್ತುವಾರಿ ಸಮಿತಿ ರಚನೆಮಾಡಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಸ್ತುವಾರಿ ಯಾಗಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರಿಗೆ ಜವಾಬ್ದಾರಿ ನೀಡಿ ಜಿಲ್ಲಾ ಕಾಂಗ್ರೆಸ್ ಆದೇಶ ಪತ್ರ ಹೊರಡಿಸಿದೆ. ಯಲ್ಲಾಪುರ ಬ್ಲಾಕ್ ಗೆ ಎನ್.ಕೆ.ಭಟ್, ಮುಂಡಗೋಡು ಬ್ಲಾಕ್ ಗೆ ಜ್ಞಾನೇಶ್ವರ ಗುಡಿಯಾಳ, ಬನವಾಸಿ ಬ್ಲಾಕ್ ಗೆ …
Read More »
Prathidvani Yellapura