Breaking News

ಸುದೀರ್ಘ 39 ವರ್ಷಗಳ ಅರಣ್ಯ ಇಲಾಖೆಯ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಎಸ್.ಜಿ.ಹೆಗಡೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಗೆ ನನ್ನ ಪ್ರವೇಶ ಆಕಸ್ಮಿಕವಾಗಿತ್ತು 85 ರಲ್ಲಿ ಅರಣ್ಯ, ಬ್ಯಾಂಕ್, ವಿಮಾ ಸಂಸ್ಥೆ ಕೆಲಸಕ್ಕಾಗಿ ಪರೀಕ್ಷೆ ಎದುರಿಸಿದ್ದೆ ಮೊದಲಿಗೆ ಅರಣ್ಯ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕರ್ತವ್ಯಕ್ಕೆ ಸಿದ್ದನಾದೆ ಆಗಲೆ ಬ್ಯಾಂಕ್ ಪರಿಕ್ಷೆಯು ಉತ್ತೀರ್ಣನಾಗಿದ್ದೆ ಆದರು ನನ್ನ ಪಯಣ ಅರಣ್ಯ ಇಲಾಖೆಯಲ್ಲಿ ಪ್ರಾರಂಭವಾಯ್ತು ಇಂತಹ ಸುದೀರ್ಘ ಪಯಣದಲ್ಲಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ನಾಗರಿಕರ ಸಹಕಾರ ಅವಿಸ್ಮರಣೀಯ ವಿಶೇಷವಾಗಿ ಶಾಸಕ ಶಿವರಾಮ್ ಹೆಬ್ಬಾರ್ ಅವರ ಸಹಕಾರ ಸ್ಮರಿಸುತ್ತೇನೆ . ಇಂದು ಗೌರವಿಸಿ ಸಂತಸದಿ ಬೀಳ್ಕೊಡುಗೆ ನೀಡಿದ ತಮಗೆಲ್ಲರಿಗು ನನ್ನ ಅನಂತಾನಂತ ವಂದನೆಗಳು ಎಂದು ಕರ್ತವ್ಯದಿಂದ ನಿವೃತ್ತಿಯಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಹೇಳಿದರು.


ಅವರು ಪಟ್ಟಣದ ಅರಣ್ಯ ಭವನದಲ್ಲಿ ಆಯೋಜಿಸಿದ್ದ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ದಂಪತಿ ಸಹಿತ ಗೌರವ ಸನ್ಮಾನ ನೆನಪಿನ ಕಾಣಿಕೆ ಸ್ವೀಕರಿಸಿ ಮಾತನಾಡಿದರು.


ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಗಮಿಸಿದ ಹರ್ಷಾ ಬಾನು ಮಾತನಾಡಿ 39 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಅಷ್ಟು ಸುಲಭದ ಮಾತಲ್ಲ ಇಂತಹ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ಎಸ್.ಜಿ.ಹೆಗಡೆಯವರ ಶ್ರೀಮತಿಯವರ ತ್ಯಾಗಕ್ಕೆ ಸಂಪೂರ್ಣ ನಮ್ಮ ಅರಣ್ಯ ಇಲಾಖೆ ಋಣಿಯಾಗಿದೆ. ನನ್ನ ಜೀವನದ ಅತ್ಯುನ್ನತ ಆಕಾಂಕ್ಷೆಯಂತೆ ಕೆನರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸಬೇಕೆಂಬ ಆಕಾಂಕ್ಷೆ ನೆರವೇರಿದ್ದು ಮುಂದೆ ನಿಮ್ಮೊಂದಿಗೆ ಸೇರಿ ಕೆಲಸ ನಿರ್ವಹಿಸಲಿದ್ದೇನೆ ಎಂದು ಸೇರಿದ್ದ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಅವರ ಅರಣ್ಯ ಇಲಾಖೆಯಲ್ಲಿನ ಸುದೀರ್ಘ ಸೇವೆಯ ಕುರಿತು ಸಾಮಾಜಿಕ ಕಾರ್ಯಕರ್ತರಾದ ಎಂ.ಆರ್.ಹೆಗಡೆ ಕುಂಬ್ರಿ ಗುಡ್ಡೆ, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ,ಪ್ರಶಾಂತ್ ಕೆ.ಸಿ, ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಇನ್ನಿತರ ಪ್ರಮುಖರು. ಅಧಿಕಾರಿಗಳು, ಸಿಬ್ಬಂದಿಗಳು ಅಭಿಪ್ರಾಯ ಹಂಚಿಕೊಂಡರು.
ಗಜಾನನ ಹೆಗಡೆ ಪ್ರಾರ್ಥಿಸಿದರು , ಎಸಿಎಫ್ ಆನಂದ್ ಹೆಚ್.ಎ, ಸ್ವಾಗತಿಸಿದರು, ಪರಶಿವಮೂರ್ತಿ ಪ್ರಾಸ್ತಾವಿಕ ನುಡಿದರು, ಚೌಹಾಣ್ ವಂದಿಸಿದರು, ಶ್ರೀಶೈಲ ಐನಾಪುರ ನಿರೂಪಿಸಿದರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *