Breaking News

ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು…!!!!


ಪ್ರತಿಧ್ವನಿ ಯಲ್ಲಾಪುರ – ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ  ಡಾಂಬರ್ ಟ್ಯಾಂಕರ್ ಗಾಡಿ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ಗುರುವಾರ ನಡೆದಿದೆ.


      ಮುಂಡಗೋಡು ತಾಲೂಕು ಬಾಚಣಕಿ ಮೂಲದ ಹಾಲಿ ಕಾರವಾರದ ಬಾಡದಲ್ಲಿ ವಾಸವಿದ್ದು ಹೋಂ ಗಾಡ್೯ ವೃತ್ತಿ ಮಾಡುತ್ತಿದ್ದ ಪರಶುರಾಮ ಕಲ್ಲಪ್ಪ ಬಾರಕೇರ ( 39 ) ಎಂಬಾತನೆ ಮೃತ ಬೈಕ್ ಸವಾರನಾಗಿದ್ದು ಕಾರವಾರದಿಂದ ಮುಂಡಗೋಡು ಕಡೆಗೆ ತೆರಳುತ್ತಿದ್ದನ್ನು ಈ ವೇಳೆ ಯಲ್ಲಾಪುರದ ಕಡೆಯಿಂದ ಕಾರವಾರದ ಕಡೆಗೆ ತೆರಳುತ್ತಿದ್ದ ಡಾಂಬರ್ ಸಾಗಿಸುವ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೆ ಬಿದ್ದು ಮೃತಪಟ್ಟಿರುತ್ತಾನೆ.
     ಈ ಸಂಬಂಧ ಡಾಂಬರ್ ಟ್ಯಾಂಕರ್ ಚಾಲಕ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬೊಮ್ಮನಹಳ್ಳಿ ನಿವಾಸಿ ಅಶೋಕ ಮಹದೇವಪ್ಪ ಹರಿಜನ ಎಂಬಾತನ ಮೇಲೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಸಿಲಿನ ಝಳಕ್ಕೆ ತಂಪೆರೆವ ಸ್ವರ್ಗ  ಯಲ್ಲಾಪುರದ “ಸಾತೊಡ್ಡಿ ಜಲಪಾತ” ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ.

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಒಂದೆಡೆ ಸಾಗರ ಮತ್ತೊಂದೆಡೆ ಜಲಪಾತಗಳ ಆಗರ  ಹಚ್ಚಹಸಿರಿನ ಮಡಿಲು ಉತ್ತರ ಕನ್ನಡ …

Leave a Reply

Your email address will not be published. Required fields are marked *