Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಕೈಲಾದ ಸಹಾಯ ಮಾಡಿ ಮಾನವೀಯ ನೆರವು ನೀಡಿ

ಪ್ರತಿಧ್ವನಿ, ಯಲ್ಲಾಪುರ : ದಿನಾಂಕ ಮೇ, 17 ರಂದು ಅರಬೈಲ್ ಘಟ್ಟದಲ್ಲಿ ಬೈಕ್ ಅಪಘಾತದಲ್ಲಿ ಮಲವಳ್ಳಿ( ಮಾವಿನ ಮನೆ) ಗ್ರಾಮದ ನಿವಾಸಿ ಗಣನಾಥ ಗೋಪಾಲ ಗಾಂವ್ಕರ್. ಎಳಮನೆ ಎಂಬಾತ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಹೊಸೂರು ಕ್ರಾಸ್ ಬಳಿ ಇರುವ ಬಾಲಾಜಿ ನರರೋಗ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಇದುವರೆಗೆ 7 ಲಕ್ಷಕ್ಕು ಅಧಿಕ ಮೊತ್ತ ವೆಚ್ಚವಾಗಿದೆ. ಮುಂದಿನ ಚಿಕಿತ್ಸೆಗೆ ಹಣಕಾಸಿನ …

Read More »

” ದೇವರ ಕಾಡು ” ಅರಣ್ಯ ರಕ್ಷಣೆಗೆ ಅರಣ್ಯ ಇಲಾಖೆಯ ವಿನೂತನ ಪ್ರಯತ್ನ- ಎಲ್ಲೆಡೆ ಶ್ಲಾಘನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ: ಭವಿಷ್ಯದ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗಾಗಿ ಸ್ವಚ್ಚ ಹಾಗು ಸುಂದರ ಪರಿಸರವನ್ನು ರಕ್ಷಿಸಿ ವರ್ಗಾಯಿಸುವ ಹೊಣೆ ನಮ್ಮ ಮೇಲಿದೆ ಈ ದಿಸೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ವಿವಿಧ ರೂಪದಲ್ಲಿ ಯೋಜನೆ ರೂಪಿಸಿ ಅರಣ್ಯ ರಕ್ಷಣೆಗೆ ಮುಂದಾಗಿದೆ ಅದರಲ್ಲಿ ಪ್ರಮುಖವಾಗಿ ” ದೇವರ ಕಾಡು ” ನಿರ್ಮಾಣವು ಒಂದಾಗಿದೆ. ಯಲ್ಲಾಪುರ ಪಟ್ಟಣದಿಂದ ಮುಂಡಗೋಡು ಸಾಗುವ ರಸ್ತೆಯಲ್ಲಿ ಕರ್ನಾಟಕ ವಾಯುವ್ಯ ಸಾರಿಗೆ …

Read More »

ತಾಲೂಕಿನ ಮಳೆ ಬೆಳೆ ಸುಭೀಕ್ಷತೆಗೆ “ಗ್ರಾಮದೇವಿ ” ಯರಿಗೆ ಪೂಜೆ ಸಲ್ಲಿಸಿದರೆ ಒಳಿತು-ಪ್ರತಿಧ್ವನಿ ಕೋರಿಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ ಆತ್ಮೀಯ ಯಲ್ಲಾಪುರ ತಾಲೂಕಿನ ನೆಲದ ನಿವಾಸಿ ನಲ್ಮೆಯ ನಾಗರಿಕರೆದೇಶಕ್ಕೆ ಅನ್ನ ನೀಡುವ ರೈತರಿಗೆ ಈ ವರ್ಷದ ಮುಂಗಾರು ಆತಂಕ ತಂದೊಡ್ಡುತ್ತಿದೆ. ಹವಾಮಾನ ಇಲಾಖೆಯು ಸಹ ಮುಂಗಾರು ತಡವಾಗಿ ಪ್ರಾರಂಭವಾಗಲಿದೆ ಎಂದು ಧೈರ್ಯ ತುಂಬುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗುತ್ತಿದ್ದಾರೆ ಇನ್ನೂ ಕೆಲವರು ಕತ್ತೆ,ಕಪ್ಪೆ,ಮದುವೆ ಮಾಡಿಸಿ ವರುಣದೇವನನ್ನು ಒಲಿಸಿಕೊಂಡು ಭುವಿಗೆ ಮಳೆಯಾಗಿ ಸುರಿವಂತೆ ಪ್ರಾರ್ಥಿಸುತ್ತಿದ್ದಾರೆ. ಇವರೆಲ್ಲರ ಸತ್ಪ್ರಯತ್ನಗಳು …

Read More »

ಬಾರೋ ಬಾರೋ ಮಳೆರಾಯ ಯಲ್ಲಾಪುರ ತಾಲೂಕಿಗೆ ನೀರಿಲ್ಲ ಕೃಷಿ ಚಟುವಟಿಕೆ ನಡೀತಿಲ್ಲ…!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜೂನ್ ತಿಂಗಳಿನ ಅರ್ಧ ಭಾಗ ಕಳೆದು; ಈವರೆಗೂ  ಮಳೆಗಾಲ ಆರಂಭವಾಗದೇ; ಮುಂಗಾರಿನ ಮುನ್ಸೂಚನೆಯೂ ಕಾಣಿಸದೇ ರೈತರು ಹಾಗೂ ಜನರು ಕುಡಿಯುವ ನೀರಿನ ಸಮಸ್ಯೆ, ಬಿಸಿಲಿನ ತಾಪ ಮತ್ತು ಕೃಷಿ ಕಾರ್ಯಗಳ ಹಿನ್ನಡೆಯಿಂದ ತೀವ್ರ ಆತಂಕಗೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಗಡಿ ಭಾಗದ ಉಚಗೇರಿಯ ಕದಳಿ ನಂದಿಕೇಶ್ವರ ದೇವಸ್ಥಾನದಲ್ಲಿ ಸೋಮವಾರ ರುದ್ರಾಭಿಷೇಕ ಹಾಗೂ ಪರ್ಜನ್ಯ ಮತ್ತಿತರ ದೇವತಾ …

Read More »

ಜಿದ್ದಾಜಿದ್ದಿನ ಕದನ ಆನಗೋಡು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಚುನಾವಣೆ.

ಯಲ್ಲಾಪುರ ; ತಾಲೂಕಿನ ಆನಗೋಡು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಭಾನುವಾರ ತುರುಸಿನ ಚುನಾವಣೆ ನಡೆಯಿತು. ರಾಜ್ಯ ವಿಧಾನಸಭಾ ಚುನಾವಣೆಗಿಂತಲು ಹೆಚ್ಚು ಕುತೂಹಲ ಕೆರಳಿಸಿದ ಆನಗೋಡು ಸೊಸೈಟಿ ಚುನಾವಣೆಗೆ ಹಿಂದಿನ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಸಿಕುಂಬ್ರಿ ತಂಡ ಹಾಗೂ ಗಣಪತಿ ಭಟ್ಟ ಕರುಮನೆ ತಂಡದ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ಇದೆ.ಸಾಲಗಾರ ಕ್ಷೇತ್ರದ 947 ಮತದಾರರು, ಹಾಗೂ ಸಾಲಗಾರರಲ್ಲದ ಕ್ಷೇತ್ರದ 150 ಮತದಾರರು ಸೇರಿ ಒಟ್ಟೂ 1097 ಮತದಾರರು ಮತ್ತು ಮತದಾರ …

Read More »

ರವಿವಾರದಿಂದ “ಗೃಹಜ್ಯೋತಿ ” ನೊಂದಣಿ ಪ್ರಾರಂಭ ಮೊದಲ ದಿನ ಸರ್ವರ್ ಕೊಂಚ ಸಮಸ್ಯೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಗಳಲ್ಲಿ ಅತ್ಯಂತ ಪ್ರಮುಖವಾದ 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹ ಶಕ್ತಿ ಯೋನೆಗೆ ನೊಂದಯಿಸಿಕೊಳ್ಳೊ ಪ್ರಕ್ರಿಯೆ ರವಿವಾರದಿಂದ ರಾಜ್ಯಾದ್ಯಂತ ಪ್ರಾರಂಭವಾಗಿದ್ದು ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಇದಕ್ಕಾಗಿ ಪ್ರತ್ಯೇಕ ಸಹಾಯ ಕೇಂದ್ರ ತೆರೆಯಲಾಗಿದೆ. ಮೊದಲದಿನ ಸರ್ವರ್ ಸಮಸ್ಯೆಯಾಗಿತ್ತು. ಪಟ್ಟಣದಲ್ಲಿನ ಗ್ರಾಮ ಒನ್ ಕೇಂದ್ರದಲ್ಲಿ ನೊಂದಾವಣೆ ಪ್ರಕ್ರಿಯೆ ನಡೆಯಿತು.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿ …

Read More »

ಗುಡಂದೂರು ಸಿದ್ದಿ ಕಾಲೋನಿಯಲ್ಲಿ ಕಾನೂನು ಅರಿವು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕನು ಕಾನೂನಿನ ಬಗ್ಗೆ ತಿಳಿದುಕೊಂಡಿರಬೇಕು. ಸಮಾಜದಲ್ಲಾಗುವ ದೌರ್ಜನ್ಯ, ದಬ್ಬಾಳಿಕೆ , ಹೆಣ್ಣಿನ ಮೇಲಿನ ಶೋಷಣೆ, ಕುರಿತು ಕಾನೂನು ವ್ಯಾಪ್ತಿಯಲ್ಲಿರುವ ವಿಷಯಗಳನ್ನು ಅರಿತುಕೊಂಡಿರಬೇಕು. ಸಮಸ್ಯೆಗಳು ಬಂದಾಗ ಕಾನೂನಿನ ಸಹಾಯ ಪಡೆಯಲು ಅದರ ಅರಿವು ಮತ್ತು ತಿಳುವಳಿಕೆ ಅತ್ಯಗತ್ಯವಾಗಿದೆ. ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಹ ಕಾನೂನಿನ ಅರಿವು ಕಾರ್ಯಕ್ರಮದೊಂದಿಗೆ ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ ಎಂದು ಸಂವಿಧಾನ ಫೆಲೋ ವಕೀಲ …

Read More »

ಉಚಿತ ವಿದ್ಯುತ್ ಬೆನ್ನಲ್ಲೆ ಬೆಲೆ ಏರಿಸಿದ ನಿಗಮದ ನಿರ್ಧಾರ ಜನವಿರೋದಿ

ಪ್ರತಿಧ್ವನಿ,ಯಲ್ಲಾಪುರ : ಈ ತಿಂಗಳು ಸಾಮಾನ್ಯವಾಗಿ ಎಲ್ಲೆಡೆ ವಿದ್ಯುತ್ ಬಿಲ್ಲಿನ ಮೊತ್ತ ಅಧಿಕವಾಗಿ ಬಂದಿದೆ. ಇದಕ್ಕೆ ಪ್ರತಿ ಮನೆಗಳಲ್ಲೂ ವಿದ್ಯುತ್ ಬಳಕೆ ಅಧಿಕವಾಗಿದ್ದು, ಒಂದು ಕಾರಣವಾದರೆ; ಏಪ್ರೀಲ್-ಮೇ ತಿಂಗಳಿನಿಂದ ಪೂರ್ವಾನ್ವಯದ ಹೆಚ್ಚಿನ ದರ ಸೇರ್ಪಡೆಯಾಗಿದ್ದು, ಮತ್ತೊಂದು ಕಾರಣವಾಗಿದೆ ಎಂದು ಯಲ್ಲಾಪುರದ ಹೆಸ್ಕಾಂ ವಿಭಾಗೀಯ ಅಧಿಕಾರಿ ರಮಾಕಾಂತ ನಾಯ್ಕ ಹೇಳಿದರು. ಅವರು ಪಟ್ಟಣದ ಹೆಸ್ಕಾಂ ಉಪ-ವಿಭಾಗದ ಕಚೇರಿಯಲ್ಲಿ ನಡೆದ ಯಲ್ಲಾಪುರ ಉಪ-ವಿಭಾಗ ಮಟ್ಟದ ವಿದ್ಯುತ್ ಗ್ರಾಹಕರ ಕುಂದು-ಕೊರತೆಗಳ ಸಂವಾದ ಸಭೆಯಲ್ಲಿ ಹೇಳಿದರು.ಇನ್ನು …

Read More »

ಹಂದಿ ಮತ್ತು ಮಂಗಗಳಿಂದ ರೈತರ ಬೆಳೆಗೆ ಸಂಚಕಾರ- ಕಾನೂನು ಸಮರಕ್ಕೆ ಸಿದ್ದರಾದ ರೈತರು..!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಹಿಂದೆಲ್ಲ ಅಡಿಕೆ ಹಣ್ಣಾದಾಗ ಮಂಗಗಳ ಕಾಟ ಇರುತ್ತಿತ್ತು. ಅವು ಹಣ್ಣಡಿಕೆಗಳ ರಸ ಚೀಪಿ ಕೆಡವುತ್ತಿದ್ದವು. ಹಂದಿಗಳ ಹಾವಳಿಯೂ ಅಷ್ಟೇ; ಕೊಯ್ಲಿಗೆ ಮೊದಲು ಭತ್ತದ ಗದ್ದೆಗಳಿಗಷ್ಟೇ ಸೀಮಿತವಾಗಿರುತ್ತಿತ್ತು. ಆದರೆ ಈಗ ಕಾಲ ಬದಲಾದಂತೆ ಅವುಗಳೂ ಬದಲಾಗಿವೆ. ಮಂಗ ಬಾಳೆಕಾಯಿ,ಹಣ್ಣಡಿಕೆಗಳೊಂದಿಗೆ ಅಡಿಕೆಯ ಎಳೆ ಮಿಳ್ಳೆಗಳನ್ನೇ ತಿಂದು ಹಾಳು ಮಾಡುತ್ತಿವೆ. ಹಂದಿಗಳು ಭತ್ತದ ಗದ್ದೆಗಳಿಂದ ತೆಂಗಿನ ತೋಟಗಳಿಗೇ ನುಗ್ಗಿ, ಮರದಿಂದ ಕೆಳಗೆ ಉದುರಿದ ತೆಂಗಿನ ಕಾಯಿಗಳನ್ನು …

Read More »

ಹೇಗಿದೆ ಮುಂಗಾರಿಗೆ ಕೃಷಿ ಇಲಾಖೆ ಸಿದ್ದತೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ದೇಶದ ಸ್ವಾಸ್ಥ್ಯ ಸದೃಡವಾಗಿರಬೇಕೆಂದರೆ ದೇಶಕ್ಕೆ ಅನ್ನ ನೀಡುವ ಅನ್ನದಾತನ ರೈತನ ಭೂಮಿಯೊಂದಿಗಿನ ಕನಸು ನನಸಾಗಬೇಕಿದೆ. ಆ ಕನಸು ನನಸಾಗಲು ಪ್ರಕೃತಿ ಎಲ್ಲಾ ರೀತಿಯ ಕೃಪೆ ತೋರಬೇಕಿದೆ. ಅದು ಮಾತ್ರವಲ್ಲದೆ ಕೃಷಿ ಇಲಾಖೆಯು ರೈತನ ನೆರವಿಗೆ ಧಾವಿಸಿ ಬೆನ್ನಿಗೆ ನಿಲ್ಲಬೇಕಿದೆ. ಆ ನಿಟ್ಟಿನಲ್ಲಿ ಇನ್ನೇನು ಮುಂಗಾರು ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಕೃಷಿ ಇಲಾಖೆಯ ಸಿದ್ದತೆ ಹೇಗಿದೆ ತಿಳಿಯಬೇಕಿದೆ. 2023-24 ನೇ …

Read More »