Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ವಜ್ರಳ್ಳಿಯ ಸಂಜೀವಿನಿ ಒಕ್ಕೂಟಕ್ಕೆ
ಅಧ್ಯಯನ ಪ್ರವಾಸಿ ತಂಡದ ಭೇಟಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಮಟ್ಟದಲ್ಲಿ ” ಉತ್ತಮ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ” ಎಂಬ ಪ್ರಶಸ್ತಿಗೆ ಭಾಜನವಾದ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಮತ್ತು ಹುಣಸೇನಹಳ್ಳಿ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಎರಡು ದಿನಗಳ ಕಾಲ ಅಧ್ಯಯನ ಕಲಿಕಾ ಪ್ರವಾಸವನ್ನು ಕೈಗೊಂಡರು. ಭಾಗ್ಯಶ್ರೀ …

Read More »

ಕನ್ಯೆ ಸಿಗದೆ ಮನನೊಂದ ಯುವಕ ನೇಣಿಗೆ ಶರಣು…!!!

ಯಲ್ಲಾಪುರ : ಮದುವೆಯಾಗಲು ಹೆಣ್ಣು ದೊರೆಯುತ್ತಿಲ್ಲ ಎಂಬ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ೩೫ವರ್ಷದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೆಲಂಗಾರದ ಕಿರಗಾರಿಮನೆ ಎಂಬಲ್ಲಿ ನಡೆದಿದೆ. ಕಿರಗಾರಿಮನೆಯ ನಾಗರಾಜ ಗಣಪತಿ ಗಾಂವ್ಕರ (೩೫) ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ತನಗೆ ಮದುವೆಯಾಗಲು ಇನ್ನೂ ಹೆಣ್ಣು ಸಿಗುತ್ತಿಲ್ಲ ಹಾಗೂ ಮನಸ್ಸಿಗೆ ಇನ್ನಾವುದೋ ವಿಷಯವನ್ನು ಹಚ್ಚಿಕೊಂಡು ಮನನೊಂದು ತಾಲೂಕಿನ ಕಿರಗಾರಕೇರಿ ಬಿದ್ರೇಪಾಲ ಗುಡ್ಡದ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ …

Read More »

ಆರ್ಥಿಕ ಸಬಲೀಕರಣದತ್ತ ಯಲ್ಲಾಪುರದಲ್ಲಿ ಮತ್ತೊಂದು ಹೆಜ್ಜೆ- ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ಅಸ್ತಿತ್ವಕ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ,ಯಲ್ಲಾಪುರ – ಸಂಘಗಳನ್ನು ಸ್ಥಾಪಿಸುವುದು ಕಷ್ಟವಲ್ಲ ಠೇವಣಿ ಸಂಗ್ರಹ ಕೂಡ ಕಷ್ಟವಾಗದು ಆದರೆ ಒಳ್ಳೆಯ ಸಾಲಗಾರರನ್ನು ಹುಡುಕುವುದೆ ಕಷ್ಟವಾಗಿದೆ. ಸಂಘದ ಸ್ಥಾಪನೆ‌ ನಂತರ ಬದ್ದತೆಯಿಂದ ನಡೆಸಿಕೊಂಡು ಹೋಗುವುದು ಸಹ ಒಂದು ಅಗ್ನಿಪರೀಕ್ಷೆಯಂತೆ. ನಿಮ್ಮ ಸಾರ್ಥಕ ಪ್ರಯತ್ನ ಯಶಸ್ವಿಯಾಗಲಿ. ಹಾಗು ನನ್ನ ಸಂಪೂರ್ಣ ಬೆಂಬಲವು ನಿಮಗಿದ್ದು ಜಿಲ್ಲಾ ಮದ್ಯವರ್ತಿ ಬ್ಯಾಂಕ್ ನ ಸಹಕಾರವು ನಿಮಗಿರಲಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ …

Read More »

ಚಿರತೆಯೋ..ಹುಲಿಯೋ..ತಿಳಿಯದು ದಾಳಿಗೆ ಮಾಗೋಡು ಗ್ರಾಮದಲ್ಲಿ ಆಕಳ ಕರುವೊಂದು ಬಲಿಯಾಗಿದೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಅರಣ್ಯ ಇಲಾಖೆಯ ಯಲ್ಲಾಪುರ ವಿಭಾಗದ ಇಡುಗುಂದಿ ವಲಯದ ಮಾಗೋಡು ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಚಿರತೆಯೊಂದು ದನ ಮತ್ತು ನಾಯಿಗಳನ್ನು ಹಿಡಿದು ತಿನ್ನುತ್ತಿದ್ದ ಬಗ್ಗೆ ಪ್ರಕರಣಗಳು ಬಲವಾಗಿ ಕೇಳಿ ಬಂದಿತ್ತು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಲವಾರು ಬಾರಿ ಕೋಂಬಿಂಗ್ ಕಾರ್ಯಚರಣೆ ಮಾಡಿದ್ದರು ಆದರೆ ಚಿರತೆ ಸಿಗಲು ಇಲ್ಲ ಮತ್ತೆ ದಾಳಿ …

Read More »

ಕಾಡಿನ ಕೌತುಕ ಕಾಪಾಡೋಣ- ಆರ್.ಎಫ್.ಒ ಶಿಲ್ಪಾ ನಾಯ್ಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯ ಜೊತೆ ಬದುಕಲು ನಾವು ಕಲಿತರೆ ಉತ್ತಮ ಫಲ ಸಿಗಬಲ್ಲದು.ಪರಿಸರದ ಮೇಲಿನ ಕಾಳಜಿ ನಮ್ಮ ಕಾಳಜಿಯೂ ಹೌದು. ನಮ್ಮ ಸುತ್ತ ಮುತ್ತಲಿನ ಕಾಡಿನ ಜೀವ ವೈವಿಧ್ಯತೆ ಯನ್ನು ಅರಿಯುವ ಮೂಲಕ ಈ ನೆಲದ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿವಂತೆ ಕಾಡಿನ ಕೌತುಕವನು ಕಾಪಿಡೋಣ. ಎಂದು ತಾಲ್ಲೂಕಿನ ಇಡಗುಂದಿ ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ವಜ್ರಳ್ಳಿಯ …

Read More »

ಮುಂಗಾರು ತಡವಾಗಿದೆ ಕೃಷಿ ಚಟುವಟಿಕೆಗೆ ತೊಡಕಾಗಿದೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರವೇಶ ತಡವಾಗಿದೆ ಇದರಿಂದ ರೈತರ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆಯದೆ ತೊಡಕಾಗಿದೆ. ಈ ವೇಳೆಗೆ ಹೊಲ ಗದ್ದೆಗಳೆಲ್ಲ ಹಸಿರು ಸಿಂಗಾರದೊಂದಿಗೆ ಮದುವಣಗಿತ್ತಿಯಂತೆ ನಳನಳಿಸುತ್ತಿರಬೇಕಿತ್ತು. ಆದರೆ ತಾಲೂಕಿನ ಹೊಲಗದ್ದೆಗಳು ಮಳೆರಾಯನ ಆಗಮನಕ್ಕಾಗಿ ಮೊರೆ ಇಟ್ಟಂತಿದೆ.ಸದ್ಯ ಬೀಳುತ್ತಿರುವ ಮಳೆಗೆ ಭೂಮಿ ಕೊಂಚ ತಂಪಾಗಿದೆ ಇಲ್ಲದಿದ್ದರೆ ಮಳೆ ಬೀಳುವುದಕ್ಕು ಮೊದಲು ಉಷ್ಣತೆಯಿಂದ ತೋಟಗಳೆಲ್ಲ ಒಣಗಿದಂತಾಗಿ ಸಿಂಗಾರದ ಅಡಿಕೆ ಮಿಳ್ಳೆಗಳೆಲ್ಲ …

Read More »

ಯಲ್ಲಾಪುರ ಅರಣ್ಯ ಇಲಾಖೆಯ ಹಸಿರು ಕರ್ನಾಟಕ ಅಡಿಯಲ್ಲಿ “ಸಸ್ಯಕ್ಷೇತ್ರ ದರ್ಶನ”

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಮಾದ್ಯಮಗಳಿಗಾಗಿ ” ಸಸ್ಯ ಕ್ಷೇತ್ರ ದರ್ಶನ ” ಎಂಬ ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಬೆಳೆದ ಸಸಿಗಳ ಸಂಪೂರ್ಣ ಮಾಹಿತಿ ನೀಡುವ ವಿನೂತನ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ‌ಹೆಗಡೆ ಮಾತನಾಡಿ ರಾಜ್ಯಾದ್ಯಂತ ಅರಣ್ಯ ಇಲಾಖೆ ಅಡಿಯಲ್ಲಿ 2023-24 ನೆ ಸಾಲಿನಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದ್ದು ಯಲ್ಲಾಪುರ ವಿಭಾಗದಿಂದ 9.95 ಲಕ್ಷ …

Read More »

ಅರಬೈಲ್ ಘಟ್ಟದಲ್ಲಿನ ಅಪಘಾತಗಳನ್ನು ನಿರ್ಲಕ್ಷಿಸದಿರಿ ಅಪಾಯ ಕಾದಿದೆ ಎಚ್ಚರ..!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ನಿಸರ್ಗಸೌಂದರ್ಯಕ್ಕೆ ಹೆಸರಾಗಿದೆ ಬೆಟ್ಟ ಗುಡ್ಡಗಳೆಲ್ಲ ಹಸಿರಾಗಿದೆ. ಜಲಪಾತಗಳ ಒಡಲು ಅರಬೈಲ್ ಘಟ್ಟ ಇಳಿದರೆ ಕರಾವಳಿ ಕಡಲು ಇಷ್ಟೆಲ್ಲಾ ವರ್ಣನೆಯ ನಡುವೆ ಅರಬೈಲ್ ಘಟ್ಟವೆಂಬ ಅಪಘಾತ ವಲಯವು ಸಹ ಇಲ್ಲೆ ಇದೆ ಅತ್ಯಂತ ನಿರ್ಲಕ್ಷಕ್ಕೊಳಗಾದ ಹೆದ್ದಾರಿಯು ಇಲ್ಲೆ ಇದೆ. ಸರ್ಕಾರ ಇದಕ್ಕೊಂದು ಗಂಭೀರ ಪರಿಹಾರ ಕಂಡುಕೊಳ್ಳಬೇಕಿದೆ ಇಲ್ಲವಾದಲ್ಲಿ ಮುಂದೊಂದು ದಿನ ದೇಶವೆ ಬೆಚ್ಚಿಬೀಳುವ …

Read More »

” ಯೋಗಿ ಟಾಪಸ್೯ ಪಾಯಿಂಟ್ ” ಎಂಬ ಯಲ್ಲಾಪುರದ ಇಂಟಲಿಜೆಂಟ್ ಯೂನಿವರ್ಸಿಟಿ…..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದ ಎದುರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳ ಜ್ಞಾನ ದಾಹ ನೀಗಿಸುತ್ತಾ ಗ್ರಾಮೀಣ ಭಾಗದಲ್ಲು ಹೈಟೆಕ್ ಜ್ಞಾನ ಸಂಪಾದನೆ ಸಾದ್ಯ ಎಂಬುದನ್ನು ” ಯೋಗಿ ಟಾಪ್ಪಸ್೯ ಪಾಯಿಂಟ್ ” ಸಾದ್ಯವಾಗಿಸಿ ತೋರುತ್ತ ಬಂದಿದೆ. ಇದೀಗ ಸಾದನೆಯ ಹಾದಿಗೆ ಮತ್ತಷ್ಟು ಸಾದನೆಗಳು ಸೇರ್ಪಡೆಯಾಗಿ ಯಲ್ಲಾಪುರದ ಗೌರವ ಮತ್ತಷ್ಟು ಹೆಚ್ಚಿಸಿದೆ.ಸದ್ಯ ಕೋಚಿಂಗ್ …

Read More »

ಇಡಗುಂದಿ ಸೊಸೈಟಿ ಚುನಾವಣೆಗೆ ಶಾಸಕ ಹೆಬ್ಬಾರ್ ಮತ ಚಲಾವಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ :ತಾಲೂಕಿನ ಇಡಗುಂದಿ ಗ್ರೂಪ್ ಗ್ರಾಮಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಮತ ಚಲಾಯಿಸಿದರು. ವಿಶೇಷವೆಂದರೆ ತಮ್ಮ ರಾಜಕೀಯ ಜೀವನದ ಮೊದಲ ಮೆಟ್ಟಿಲು ಇಟ್ಟಿದ್ದು ಇಲ್ಲಿಂದಲೆ ಎ.ಪಿ.ಎಂ.ಸಿ ಪಯಣಕ್ಕೆ ನಾಂದಿಯಾದದ್ದು.ಸೊಸೈಟಿಯ ಆವರಣದಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Read More »