ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರತಿಯೊಬ್ಬರ ಬದುಕಿನಲ್ಲಿಯೂ ನಿವೃತ್ತಿ ಎಂಬುದು ಅನಿವಾರ್ಯವಾದರೂ, ವೃತ್ತಿಯ ಸಂದರ್ಭದಲ್ಲಿ ಅನುಸರಿಸಿದ ಬಧ್ಧತೆ ಮತ್ತು ಪ್ರಾಮಾಣಿಕತೆಗಳು ಏನೆಂಬುದು ಪ್ರಮುಖವಾಗಿರುತ್ತದೆ. ಪ್ರಸ್ತುತ ಕಾಲೇಜಿನಲ್ಲಿ ಕಳೆದ ೧೬ ವರ್ಷಗಳ ಕಾಲ ಉಪನ್ಯಾಸಕರಾಗಿ ಕರ್ತವ್ಯ ಬಧ್ಧತೆಯಿಂದ ಕಾರ್ಯನಿರ್ವಹಿಸಿದ ಸುಬ್ರಹ್ಮಣ್ಯ ಭಟ್ಟರು ನಿರ್ವತ್ತರಾದುದು ನಮಗೆಲ್ಲರಿಗೂ ಬೇಸರದ ಸಂಗತಿಯಾಗಿದ್ದು, ಇನ್ನು ಮುಂದೆಯೂ ಕ್ರಿಯಾಶೀಲರಾಗಿ ತಮ್ಮನ್ನು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆರ್.ಜಿ.ಹೆಗಡೆ …
Read More »ನಂದಿಬಾವಿಯಲ್ಲಿ ಮನೆ ಕುಸಿದು ಹಾನಿ ಸ್ಥಳಕ್ಕೆ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ಪರಿಶೀಲನೆ.
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ತಾರೆಹಳ್ಳಿ ಗ್ರಾಮದಲ್ಲಿ ಮನೆ ಕುಸಿದು ಅಪಾರ ಪ್ರಮಾಣದ ಹಾನಿಯಾದ ಘಟನೆ ವರದಿಯಾಗಿರುತ್ತದೆ. ನಂದಿಬಾವಿಯ ಗೀತಾ ಪುಟ್ಟ ಸಿದ್ದಿ ಎಂಬುವರ ವಾಸದ ಮನೆ ಕಳೆದ ರಾತ್ರಿ ಸುರಿದ ಮಳೆಗೆ ಗೋಡೆ ಕುಸಿದು ಮನೆಯ ಬಹುತೇಕ ಭಾಗ ನೆಲಸಮವಾಗುವ ಹಂತದಲ್ಲಿದೆ.ಮನೆ ಬೀಳಬಹುದೆಂಬ ಸಂಗತಿ ಕುಟುಂಬದವರ ಗಮನಕ್ಕೆ ಮೊದಲೇ ಬಂದಿರುವುದರಿಂದ ಪಕ್ಕದಲ್ಲಿದ್ದ ತಮ್ಮದೇ ಶೆಡ್‌ನಲ್ಲಿ ಉಳಿದು ರಾತ್ರಿ ಬಚಾವಾಗಿರುತ್ತಾರೆ. ಸುದ್ದಿ ತಿಳಿದ ತಕ್ಷಣ ಘಟನೆ ನಡೆದ …
Read More »ಬಸ್ ಪಲ್ಟಿ – ಚಾಲಕ ಸ್ಥಳದಲ್ಲೆ ಸಾವು 20 ಕ್ಕು ಹೆಚ್ಚು ಪ್ರಯಾಣಿಕರಿಗೆ ಗಾಯ ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ
ಯಲ್ಲಾಪುರ,ಯಲ್ಲಾಪುರ : ಪಟ್ಟಣದ ಹೊರವಲಯದ ಹುಬ್ಬಳ್ಳಿ ಮಾರ್ಗದಲ್ಲಿ ನ್ಯೂ ಮಲಬಾರ್ ಹೋಟೆಲ್ ಸಮೀಪ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಒಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು 20 ಕ್ಕೂ ಅಧಿಕ ಜನರಿಗೆ ಗಾಯಗಳಾದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಇಂಟರ್‌ಸಿಟಿ ಟ್ರಾವೆಲ್ಸ್ ಹೆಸರಿನ ಖಾಸಗಿ ಲಕ್ಸುರಿ ಬಸ್ ಒಂದು ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ನ್ಯೂ ಮಲಬಾರ್ ಹೋಟೆಲ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ವಿದ್ಯುತ್ …
Read More »ಇಳೆಗೆ ಮಳೆಯ ಆಗಮನ ಭೂಮಿಯ ಕಡೆಗೆ ರೈತನ ಗಮನ ಚುರುಕಾದ ಕೃಷಿ ಕಾರ್ಯ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಮಳೆ ಬಂದದ್ದು ತಡವಾಗಿದೆ ಆದರು ಕೆಲ ದಿನಗಳಿಂದ ಉತ್ತಮ ಮಳೆತ ಪ್ರವೇಶವಾಗಿದ್ದು ಮೊದಮೊದಲು ಮಳೆಯೇ ಇಲ್ಲವಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾದಂತಹ ಭಾವ ತಾಲೂಕಿನ ಎಲ್ಲಾ ರೈತರನ್ನು ಕಾಡಿತ್ತು. ಸದ್ಯ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಜು.22ರಂದು 119ಮಿ.ಮೀ ಮಳೆಯಾಗಿದ್ದು ಈವರೆಗೆ ಒಟ್ಟು 1087ಮಿ.ಮೀ ಮಳೆಯಾಗಿದೆ. ಯಲ್ಲಾಪುರ ಸುತ್ತಮುತ್ತ ಭತ್ತದ ನಾಟಿ ಕಾರ್ಯ ಪ್ರತಿವರ್ಷವೂ ತಡವಾಗಿಯೇ ಪ್ರಾರಂಭವಾಗುವುದಾದರೂ ಮಡಿ ಕಟ್ಟುವುದು, …
Read More »ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ – ಇಬ್ಬರಿಗೆ ಗಾಯ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಹಳಿಯಾಳ ಕ್ರಾಸ್ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಗಾಯಗೊಂಡವರು ತಾಲ್ಲೂಕಿನ ಉಮ್ಮಚ್ಚಗಿ ನಿವಾಸಿಗಳಾದ ಸುಬ್ರಹ್ಮಣ್ಯ ಆರ್ ಹೆಗಡೆ ಪರಶುರಾಮ ವಾಲೆಕರ ಎಂಬುವರಾಗಿದ್ದಾರೆ.ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Read More »ಭೂಕುಸಿತದ ಅಪಾಯದ ಹಿನ್ನೆಲೆ ಕೆಲವು ಫಾಲ್ಸ್ ಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆಯ ಸೂಚನೆಯಂತೆ ಕೆಲವು ಫಾಲ್ಸ್ ಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಬಹುದಾದ ಹಿನ್ನೆಲೆಯಲ್ಲಿ ಪ್ರವೇಶ ನಿಷೇದಿಸಲಾಗಿದೆ. ಇಡಗುಂದಿ ವಲಯ ವ್ಯಾಪ್ತಿಯಲ್ಲಿರುವ ಕುಳಿಮಾಗೋಡು ಜಲಪಾತ, ಕಾನೂರು ಜಲಪಾತ, ಹಾಗೂ ಶಿರ್ಲೆ ಜಲಪಾತಗಳ ಮಾರ್ಗಗಳಲ್ಲಿ ಭೂ ಕುಸಿತದ ಭೀತಿ ಇದ್ದು ಆಗಸ್ಟ್ ತಿಂಗಳ ಕೊನೆಯವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. …
Read More »ಯಲ್ಲಾಪುರದ ಹೆಸರಾಂತ ಗುತ್ತಿಗೆದಾರ ಬಿ ಸತ್ಯನ್ ಅವರಿಗೆ ಮಾತೃವಿಯೋಗ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿ ನಿವಾಸಿ ಅಚ್ಚಾ ಕಂಫಟ್೯ ಮಾಲಿಕ ಹೆಸರಾಂತ ಗುತ್ತಿಗೆದಾರ ಸಮಾಜ ಸೇವಕ ಬಿ.ಸತ್ಯನ್ ಅವರಿಗೆ ಮಾತೃವಿಯೋಗವಾಗಿದೆ.ಸತ್ಯನ್ ಅವರ ತಾಯಿ ದೇವಕಿ ವಿ ನಾಯ್ಕ್ ಶುಕ್ರವಾರ ಇಹಲೋಕ ತ್ಯಜಿಸಿದ್ದು ಅವರಿಗೆ 85 ವರ್ಷ ವಯಸ್ಸಾಗಿತ್ತು ವಯೋ ಸಹಜದಿಂದ ನಿಧನರಾಗಿದ್ದು ಎರಡು ಹೆಣ್ಣು ಒಂದು ಗಂಡು ಮಕ್ಕಳನ್ನು ಹಾಗು ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
Read More »ತಾಲೂಕಿನಲ್ಲಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ರಜೆ ಸೂಕ್ತ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯುತ್ತಿದೆ. ತಂಪಾದ ಗಾಳಿ ಎಲ್ಲೆಡೆ ಬೀಸುತ್ತಿದೆ. ಮರದ ರೆಂಬೆ ಕೊಂಬೆಗಳು ಕೆಲವೆಡೆ ಬೃಹತ್ ಗಾತ್ರದ ಮರಗಳು ಧರೆಗುರುಳುತ್ತಿದೆ. ಜೋರಾದ ಗಾಳಿ ಬೀಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಕನಿಷ್ಠ ಎರಡು ಅಥವ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ಬಹುಮುಖ್ಯವಾಗಿ ಅಂಗನವಾಡಿಗಳಿಗೆ ಸರ್ಕಾರ ರಜೆ ಘೋಷಿಸುವುದು ಸೂಕ್ತವಾಗಿದೆ ಎಂಬುದು …
Read More »ಯಲ್ಲಾಪುರದ ಹಾಲ್ನೊರೆಯ ಜಲಪಾತಗಳೆಲ್ಲಾ ಮಳೆಯ ಆರ್ಭಟಕ್ಕೆ ರುದ್ರ ರಮಣೀಯವಾಗಿದೆ..!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿ ಸೊಬಗು, ಕಣ್ಮನ ತಣಿಸುವ ಬೆಡಗು, ಹಚ್ಚಹಸಿರಿನ ಕಾನನ ಜಲಪಾತಗಳ ನರ್ತನ ಮಳೆಗಾಲದಲ್ಲಿ ಉತ್ತರ ಕನ್ನಡ ನೋಡಲು ಬಲು ಸುಂದರ ಅದರಲ್ಲು ಯಲ್ಲಾಪುರ ತಾಲೂಕಿನ ಸಾತೋಡ್ಡಿ, ಮಾಗೋಡು ಶಿರ್ಲೆ, ಗಣೇಶ್ ಪಾಲ್ , ಇನ್ನಿತರ ಜಲಪಾತಗಳು ನೋಡಲು ಮನಮೋಹಕವಾಗಿರುತ್ತದೆ.ತಾಲ್ಲೂಕಿನ ಜಲಪಾತಗಳಲ್ಲಿ ಅತ್ಯಂತ ಜನಪ್ರಿಯವಾದ ಪ್ರವಾಸಿಗರ ನೆಚ್ಚಿನ ಜಲಪಾತಗಳಲ್ಲಿ ಸಾತೊಡ್ಡಿ ಮತ್ತು ಮಾಗೋಡು ಅಗ್ರಸ್ಥಾನ ಪಡೆದ ಜಲಪಾತಗಳಾಗಿವೆ. ಮಾಗೋಡು ಜಲಪಾತ …
Read More »ಪ್ರತಿ ಮಕ್ಕಳ ಹುಟ್ಟು ಸಾರ್ಥಕಗೊಳಿಸಲು ಗಿಡನೆಟ್ಟು ಹುಟ್ಟು ಹಬ್ಬದಾಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಕೇರಿ ಗೌಳಿವಾಡದಲ್ಲಿ ಶಾಲಾ ಮಕ್ಕಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸ ಲಾಗುತ್ತಿದೆ.ಶಾಲೆಯ ಆವರಣದಲ್ಲಿ ಕಳೆದ ವರ್ಷ ವಿಧಾನ ಪರಿಷತ್ತಿನ ಸದಸ್ಯ ಶಾಂತರಾಮ್ ಸಿದ್ದಿ ಹಾಗೂ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಸುಮಾರು ಐವತ್ತರಿಂದ ಅರವತ್ತು ಗಿಡಗಳನ್ನು ನೆಡಲಾಗಿತ್ತು. ಅವುಗಳನ್ನು ಉಳಿಸಿ ಬೆಳೆಸಲು ಶಿಕ್ಷಕರಾದ ಗಂಗಾಧರ್ ಲಮಾಣಿ ಹಾಗು ಶೋಭಾ ಗುನಗಿ, ವಾಣಿ ನಾಯ್ಕ ಸೇರಿ ಶಾಲೆಯಲ್ಲಿ …
Read More »
Prathidvani Yellapura