Breaking News

ಈಶ್ವರ ದೇವಸ್ಥಾನದ ವಿಶೇಷ ಧಾರ್ಮಿಕ ವಿಧಿಯನ್ನೆ ವಾಮಾಚಾರವೆಂದು ತಿಳಿದ ಸ್ಥಳಿಯರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ಯಲ್ಲಾಪುರ ಪಟ್ಟಣದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾದ ಈಶ್ವರ ಗಲ್ಲಿ ಈಶ್ವರ ದೇವಸ್ಥಾನದ ವಿಚಾರ ಯಾವ್ಯಾವುದೊ ‌ವಿಷಯಗಳಿಗೆ ಗುಸುಗುಸು ಸುದ್ದಿಗೆ ಗ್ರಾಸವಾಗಿತ್ತು.


ಈಶ್ವರ ದೇವಸ್ಥಾನದವಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವವರು ತಮ್ಮ ಮನೆಯ ಮುಂಬಾಗದಲ್ಲಿ ವಾಮಾಚಾರ ಮಾಡಿಸಿರುವ ಲಕ್ಷಣವಿರುವಂತೆ ಲಿಂಬು ಅರಿಶಿನ ಕುಂಕುಮ ಎರಚಿರುವುದು ಕಂಡು ಬಂದಿದ್ದು ದೇವಸ್ಥಾನ ಕಮಿಟಿಯವರು ನಮ್ಮ ಗಮನಕ್ಕೆ ಬಾರದಂತೆ ಏನೊ ಮಾಡಿಸುತ್ತಿದ್ದಾರೆಂಬ ಅನುಮಾನದಿಂದ ಯಲ್ಲಾಪುರ ಪೊಲೀಸ್ ಠಾಣೆಯ ಗಮನಕ್ಕೆ ತಂದಿದ್ದರು. ಇದು ಅತ್ಯಂತ ಸೂಕ್ಷ ವಿಚಾರವಾದ್ದರಿಂದ ಯಲ್ಲಾಪುರ ಪೊಲೀಸರು ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದಿದ್ದು ಗುರುವಾರ ತಹಶಿಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಈಶ್ವರ ದೇವಸ್ಥಾನದ ಆಡಳಿತಕಮಿಟಿ ಪದಾಧಿಕಾರಿಗಳು ಮತ್ತು ದೇವಸ್ಥಾನ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳ ಸಭೆ ಕರೆದು ಎರಡು ಬದಿಯ ಅಹಾವಾಲು ಕೇಳಿದರು.


ದೇವಸ್ಥಾನ ಕಮಿಟಿಯವರ ಪ್ರಕಾರ ದೇವಸ್ಥಾನಕ್ಕೆ ಸಂಭಂಧಿಸಿದ ಧಾರ್ಮಿಕ ವಿಧಿಗಳನ್ನು ಮಾಡಿದ್ದೇವೆ ಹೊರತು ಕ್ಷುದ್ರಶಕ್ತಿ ಪೂಜೆ ಅಥವ ವಾಮಾಚಾರ, ಮೋಡಿ ಮಂತ್ರ ಇದಾವುದು ಅಲ್ಲ ಸುತ್ತಮುತ್ತಲಿನ ಕೆಲವರು ಬೇಕೆಂದೆ ನಮ್ಮ ಹೆಸರುಗಳನ್ನು ಸೂಚಿಸಿ ಠಾಣೆಗೆ ದೂರಿದ್ದಲ್ಲದೆ ಸಾಮಾಜಿಕ ಜಾಲತಾಣಗಳಲ್ಲು ಸಹಿತ ನಮ್ಮ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ಅನೇಕ ವರ್ಷಗಳಿಂದ ದೇವಸ್ಥಾನಕ್ಕೆ ಸಂಭಂದಿಸಿದ ಸ್ಥಳವನ್ನು ಸರ್ವೆ ಮಾಡಿಸಿ ದೇವರಿಗೆ ಸಂಭಂದಿಸಿದಷ್ಟು ಜಾಗಕ್ಕೆ ಚಕ್ಕುಬಂದಿ ಮಾಡಿಸಿ ಆವರಣ ಗೋಡೆ ನಿರ್ಮಿಸಿದರೆ ಇಂತಹ ಪ್ರಮೇಯ ಬರುತ್ತಿರಲಿಲ್ಲ ಈ ಸಂಬಂದ ಕಾನೂನಾತ್ಮಕ ಕೆಲಸ ಸಾಗುತ್ತಿದೆ. ತಹಶಿಲ್ದಾರರು ಸಹಿತ ಈ ಕಾರ್ಯಕ್ಕೆ ಸಹಕರಿಸಿ ವೇಗ ನೀಡಬೇಕಿದೆ ಎಂದು ಸಭೆಯಲ್ಲಿ ದೇವಸ್ಥಾನ ಕಮಿಟಿ ಪದಾಧಿಕಾರಿಗಳು ಮತ್ತು ಸದಸ್ಯರು ವಿವರಿಸಿದರು.


ಹಲವು ವರ್ಷಗಳಿಂದ ಇದೇ ದೇವಸ್ಥಾನದ ಆವರಣದಲ್ಲಿ ವಾಸಿಸುತ್ತಿದ್ದು ಇತ್ತೀಚೆಗೆ ವಾಮಾಚಾರದಂತಹ ನಡೆಗಳು ಕಂಡು ಬರುತ್ತಿವೆ ಮನೆಯಲ್ಲಿರುವ ಹಿರಿಯರು ಮತ್ತು ಮಕ್ಕಳು ಭಯದ ವಾತಾವರಣದಲ್ಲಿ ದಿನ ಕಳೆಯುತ್ತಿದ್ದಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಪೂಜೆ ಎಂದಾದಮೇಲೆ ಸ್ಥಳಿಯರ ಗಮನಕ್ಕೆ ಬಾರದಂತೆ ಪೂಜೆಮಾಡಿಸಿದ ಕಾರಣವೇನು. ನಮ್ಮ ಮನೆಯ ಮುಂಭಾಗದಲ್ಲಿ ಇದ್ದಕ್ಕಿದ್ದಂತೆ ಅಷ್ಟೊಂದು ಅರಿಶಿನ ಕುಂಕುಮ ತೆಂಗಿನಕಾಯಿ ಲಿಂಬು ಬಂದು ಬೀಳಲು ಕಾರಣವೇನು. ದೇವಸ್ಥಾನ ಕಮಿಟಿಯಲ್ಲಿ ಸ್ಥಳೀಯ ಸದಸ್ಯರೊಬ್ಬರನ್ನು ಸೇರಿಸಿಕೊಳ್ಳದಿರಲು ಕಾರಣವೇನು ಎಂದು ಸ್ಥಳೀಯ ನಿವಾಸಿಗಳು ಒಕ್ಕೊರಲಿನಿಂದ ಪ್ರಶ್ನಿಸಿದರು.


ಎರಡು ಕಡೆಯವರ ವಿಚಾರ ಆಲಿಸಿದ ತಹಶಿಲ್ದಾರ ಅಶೋಕ್ ಭಟ್ ಮಾತನಾಡಿ ಇಬ್ಬರ ಸಮಸ್ಯೆ ಆಲಿಸಿದ್ದು ಸದ್ಯಕ್ಕೆ ಹಳೆಯ ವಿಚಾರಗಳನ್ನು ಎರಡುಬದಿಯವರು ಮರೆತು ಮುಂದೆ ಸಾಗಿ ದೇವಸ್ಥಾನ ಕಮಿಟಿಯವರ ಸರ್ವೆ ವಿಚಾರ ಸ್ಥಳೀಯ ನಿವಾಸಿಗಳ ಕಮಿಟಿ ಸೇರ್ಪಡೆ  ಎರಡು ವಿಚಾರ ಕಾನೂನಾತ್ಮಕವಾಗಿಯೆ ಬಗೆಹರಿಸಿ ಕೊಳ್ಳಬೇಕಿದೆ.
ನಿತ್ಯ ನಡೆಯುವ ಪೂಜೆ,ವಿಶೇಷ ಆಚರಣೆಯ ಕಾರ್ಯ, ಆಡಳಿತ ಮಂಡಳಿಯ ಹೆಸರುಗಳ ಫಲಕ, ದೇವಸ್ಥಾನಕ್ಕೆಸಂಭದಿಸಿದ ಯಾವುದೆ ವಿಚಾರ ಸಾರ್ವಜನಿಕ ಗಮನಕ್ಕೆ ತರುವಂತೆ ನೋಡಿಕೊಳ್ಳಲು ಆಡಳಿತ ಮಂಡಳಿಗೆ ಸೂಚಿಸಿದರು.

ಧಾರ್ಮಿಕ ಭಾವನೆಗಳ ಸೂಕ್ಷ್ಮ ವಿಚಾರವಾಗಿರುವುದರಿಂದ ಯಾವುದೆ ಗೊಂದಲ ಮುಂದುವರೆಸುವುದು ಸೂಕ್ತವಲ್ಲ ಎಲ್ಲರು ಸಹಕರಿಸುತ್ತ ಮುಂದೆ ಸಾಗಬೇಕಿದೆ ಎಂದು ಯಲ್ಲಾಪುರ ಪಿ.ಐ ರಮೇಶ ಹಾನಾಪುರ ಸಭೆಗೆ ಸೂಕ್ಷ್ಮತೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಗ್ರೇಡ್ 2 ತಹಶಿಲ್ದಾರ್ ಸಿ.ಜಿ.ನಾಯ್ಕ್, ಪಿ.ಎಸ್.ಐ ಸಿದ್ದು ಗುಡ್ಡಿ, ಈಶ್ವರ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಸ್ಥಳೀಯ ನಿವಾಸಿಗಳು ಭಕ್ತರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *