Breaking News

ಯಲ್ಲಾಪುರದಲ್ಲಿ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ಮಕ್ಕಳ ಚಿಲಿಪಿಲಿ ಹಬ್ಬದ ಕಳೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ” ಕಳೆಯಿತು ಆ ಬೇಸಿಗೆ ಹೋಗೋಣ ಶಾಲೆಗೆ ” ಬೇಸಿಗೆ ರಜೆ ಕಳೆದು ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಶುಭ ಶುಕ್ರವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು ಶಾಲೆಗಳೆಲ್ಲ ಶುಭಾರಂಭವಾಗಿದೆ.


     ಪಟ್ಟಣದ ಪ್ರತಿಷ್ಟಿತ ವಿದ್ಯಾಸಂಸ್ಥೆ ವೈಟಿಎಸ್ಎಸ್ ಕನ್ನಡ ಮಾಧ್ಯಮ,ಇಂಗ್ಲಿಷ್ ಮಾದ್ಯಮ, ಸರ್ಕಾರಿ ಮಾದರಿ ಶಾಲೆ, ವಿಶ್ವದರ್ಶನ, ಮದರ್ ಥೆರೆಸ, ಸರ್ಕಾರಿ ಉರ್ದುಶಾಲೆ, ಗ್ರಾಮೀಣ ಭಾಗದ ವಜ್ರಳ್ಳಿಯ ಸರ್ವೋದಯ, ಅಲ್ಕೇರಿ ಗೌಳಿವಾಡದ ಸರ್ಕಾರಿ ಶಾಲೆ, ಅರಬೈಲ್ ಸರ್ಕಾರಿ ಶಾಲೆಯು ಸಹ ಮಕ್ಕಳನ್ನು ವಿಬಿನ್ನ ಶೈಲಿಯಲ್ಲಿ ಸ್ವಾಗತಿಸಿ‌ದರು. ಹೀಗೆ ತಾಲೂಕಿನಾದ್ಯಂತ ವಿಶೇಷ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳವುದರ ಮೂಲಕ ಪ್ರಸಕ್ತ ವರ್ಷದ ಶೈಕ್ಷಣಿಕ ಪಯಣ ಆರಂಭಗೊಂಡಿತು.


    ಮಾದರಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್. ಹೆಗಡೆ, ದೈಹಿಕ ಪರಿವೀಕ್ಷಕ ಪ್ರಕಾಶ್ ತಾರಿಕೊಪ್ಪ, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು ಮಕ್ಕಳನ್ನು ಹೂ ಮಳೆ ಸುರಿಸಿ  ಸ್ವಾಗತಿಸಿದರು. ವೈಟಿಎಸ್ಎಸ್ ಸಂಸ್ಥೆಯಲ್ಲಿ ಎಲ್ಲಾವಿಭಾಗದಲ್ಲಿಯು ಪ್ರಮುಖರು ಮಕ್ಕಳನ್ನು ರಂಗೋಲಿ ತಳಿರು ತೋರಣಗಳಿಂದ ಸ್ವಾಗತಿಸಿದರು. ಪಟ್ಟಣದ ಸಂಕಲ್ಪ ಸರ್ಕಲ್ ನಲ್ಲಿರುವ  ಉರ್ದು ಶಾಲೆಯಲ್ಲಿ ವಿದ್ಯಾಥಿಗಳನ್ನು ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಮಕ್ಕಳ ಕೈ ಕುಲುಕುತ್ತ ಸ್ವಾಗತಿಸಿದರು. ಮದರ್ ಥೆರೆಸ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳನ್ನು  ಫಾದರ್ ರೊಯ್ ಸ್ಟನ್ ಗೊನ್ಸಾಲ್ವಿಸ್ ನೇತೃತ್ವದಲ್ಲಿ ಮಕ್ಕಳನ್ನು ಸ್ವಾಗತಿಸಿದರು.
     ಒಟ್ಟಿನಲ್ಲಿ ಬೆಸಿಗೆ ರಜೆ ಕಳೆದು ಬಿಕೋ ಎನ್ನುತ್ತಿದ್ದ ಪಟ್ಟಣದಲ್ಲಿ ಮಕ್ಕಳ ಕಲರವ ಪ್ರಾರಂಭವಾಗಿದ್ದು ಶಾಲೆಗಳ ಆರಂಭ ಕಳೆ ತುಂಬಿದಂತಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪಟ್ಟಣ ಸಮೀಪದ ಅರಣ್ಯದಲ್ಲಿ ಶ್ರೀಗಂಧ ಚೋರರ ಕರಾಮತ್ತು ಗಂಧದ ಮರ ಕಡಿದ ಕಳ್ಳರು.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಮೀಪದಲ್ಲಿರುವ ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳರು ತಮ್ಮ ಕೈಚಳಕ ತೋರಿದ್ದು ಗುಣಮಟ್ಟದ ಮತ್ತು …

Leave a Reply

Your email address will not be published. Required fields are marked *