Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಯಲ್ಲಾಪುರ ಶಿಕ್ಷಕರ ಪುತ್ರ ಮೂಡಬಿದರೆ ಕಾಲೇಜಿನ ವಿದ್ಯಾರ್ಥಿ ನಿರೀಕ್ಷಿತ್ ನಾಯ್ಕ್ ಚಕ್ರ ಎಸೆತದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಶಿವಮೊಗ್ಗದಲ್ಲಿ ನಡೆದ ೨೬ನೇ ರಾಜ್ಯಮಟ್ಟದ ಅಂತರ್ ಕಾಲೇಜು ಅಥ್ಲೆಟಿಕ್ಸ್ 2024- 25ನೇ ಸಾಲಿನ ಕ್ರೀಡಾಕೂಟದಲ್ಲಿ, ಯಲ್ಲಾಪುರ ಮೂಲದ ಹಾಲಿ ಮೂಡಬಿದರೆ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಒಂದನೇ ವರ್ಷದ ವಿದ್ಯಾರ್ಥಿ ನಿರೀಕ್ಷಿತ ಸಂತೋಷ್ ನಾಯಕ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಹೆತ್ತವರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾನೆ. ಈತ ಮೂಲತಃ ಯಲ್ಲಾಪುರದ ನಿವಾಸಿಯಾಗಿದ್ದು, ಶಿಕ್ಷಕ ದಂಪತಿಗಳಾದ …

Read More »

ರಂಗ ಸಹ್ಯಾದ್ರಿ ಅಡಿಯಲ್ಲಿ 19 ನೆ ವರ್ಷದ ಬೇಸಿಗೆ ಶಿಭಿರ – ಒಂದು ತಿಂಗಳು ಸಂಸ್ಕಾರಯುತ ಜೀವನ ಕಲಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಅಡಿಯಲ್ಲಿ ಕಳೆದ 18 ವರ್ಷಗಳಿಂದ ಸಂಸ್ಕಾರಯುತ ಮತ್ತು ಸಾತ್ವಿಕವಾದ ಬೇಸಿಗೆ ಶಿಭಿರ ನಡೆಸುತ್ತಿದ್ದು ಈ ವರ್ಷವು ಏಪ್ರಿಲ್‌‌11 ರಿಂದ 19 ನೆ ವರ್ಷದ ಒಂದು ತಿಂಗಳ  ಮಕ್ಕಳ  ಬೇಸಿಗೆ ಶಿಭಿರ ನಡೆಸಲಾಗುತ್ತಿದ್ದು ಸರ್ವರು ಸಹಕರಿಸಬೇಕಿದೆ ಎಂದು ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹೇಳಿದರು.     ಅವರು ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಬೇಸಿಗೆ …

Read More »

ಸಿದ್ದಿ ಬುಡಕಟ್ಟು ಸಮುದಾಯದಲ್ಲಿ ಬೆಳೆಯುತ್ತಿರುವ ಭವಿಷ್ಯದ‌ ನಾಯಕ – ಬಾಬು ಸಿದ್ದಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಕಿರವತ್ತಿ ಹಾಗು ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೇಳಿಬರುವ ಸಿದ್ದಿ ಬುಡಕಟ್ಟು ಸಮುದಾಯದ ಪ್ರಾಮುಖ್ಯ ಹೆಸರೆಂದರೆ ಅದು ಬಾಬು ಸಿದ್ದಿಯದು.     ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆಯ ಕಟ್ಟಾ ಅಭಿಮಾನಿಯಾಗಿದ್ದು ಕಾಂಗ್ರೆಸ್ ಪಕ್ಷದ ಇನ್ನುಳಿದ ಹಿರಿಯ ನೇತಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.     ಕಿರವತ್ತಿ …

Read More »

ಯಲ್ಲಾಪುರದಲ್ಲಿ ರಂಗೇರಿಸಿದ “ಬೇಡರ ವೇಷ”ದ ಪ್ರದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ: ಪಟ್ಟಣದಲ್ಲಿ ಶುಕ್ರವಾರ ಸಂಜೆಯ ವೇಳೆ ಎಲ್ಲೆಲ್ಲು ತಮಟೆಯದೆ ಸದ್ದು ಬೇಡರ ವೇಷದಾರಿಗಳ ಕುಣಿತದ ಸೊಬಗು ಎಲ್ಲೆಡೆ ಹರಡಿತ್ತು. ಹೋಳಿ ಹಬ್ಬದ ಹಿನ್ನಲೆಯಲ್ಲಿ ಬೇಡರ ವೇಷದ ಕುಣಿತ ಮಹತ್ವ ಪಡೆದಿದ್ದು ಶಿರಸಿ ಭಾಗದಲ್ಲಿ ಜನ ಜನಿತವಾದ ಕಲೆಯನ್ನು ಕಳೆದ ಕೆಲ ವರ್ಷಗಳಿಂದ ಯಲ್ಲಾಪುರದಲ್ಲೂ ನಡೆಸಿಕೊಂಡು ಬರಲಾಗುತ್ತಿದೆ. ಬೇಡರ ವೇಷದಲ್ಲಿ ಮಿಂಚಿದ ರವೀಂದ್ರ ನಗರದ ಪ್ರಶಾಂತ್ ಜೋಗಳೇಕರ , ಅಂಬೇಡ್ಕರ್ …

Read More »

ಯಲ್ಲಾಪುರದಲ್ಲಿ ರಂಗೇರಿದ ಹೋಳಿ – ಸಾಮಾನ್ಯರಂತೆ ಹೋಳಿ ಸಂಭ್ರಮಿಸಿದ ಶಾಸಕ ಹೆಬ್ಬಾರ್.

ಯಲ್ಲಾಪುರ : ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬದ ರಂಗಿನಾಟ ಎಲ್ಲೆಡೆ ಸಂಭ್ರಮ ತಂದಿತ್ತು. ಮುಂಜಾನೆಯಿಂದಲೆ ಪ್ರತಿ ಗಲ್ಲಿಯಲ್ಲು ಪುಡಿ ಬಣ್ಣದಾಟ ಪ್ರಾರಂಭವಾಗಿ ಮಕ್ಕಳು ಯುವಕ ಯುವತಿಯರು ಬಣ್ಣದಾಟವಾಡಿ ಸಂತಸಗೊಂಡರು.. ಮುಂದಿನ ವರ್ಷ ಗ್ರಾಮದೇವಿ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಹೋಳಿ ಹಬ್ಬದಾಚರಣೆ ನಡೆಯುವುದಿಲ್ಲವಾದ್ದರಿಂದ ಈ ವರ್ಷದ ಹೋಳಿ ಮಹತ್ವ ಪಡೆದಿತ್ತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸಾಮಾನ್ಯರಂತೆ ಹಮ್ಮು ಬಿಮ್ಮು ಇಲ್ಲದಂತೆ ಎಲ್ಲರೊಂದಿಗೆ …

Read More »

ಅನ್ನ ಭಾಗ್ಯದ ಅಕ್ಕಿ 5 kg ಹೆಚ್ಚಾಯ್ತು ಹೊತ್ತುಸಾಗಿಸುವುದು ಸವಾಲಾಯ್ತು.!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಪ್ರೀತಿಯ ಮತ್ತು ಜನಪ್ರಿಯ ಯೋಜನೆಯಲೊಂದಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಹೆಚ್ಚು ಮಾಡಿದ್ದು ಅಕ್ಕಿ ಹೊರುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಕುಟುಂಬದ ಒಬ್ಬ ವ್ಯಕ್ತಿಗೆ 5 kg ಅಕ್ಕಿ ನೀಡಿ ಉಳಿದ5 kg ಅಕ್ಕಿಗೆ ತೆರಬೇಕಾದ ಹಣವನ್ನು ಕುಟುಂಬದ ಯಜಮಾನಿ ಖಾತೆಗೆ ಜಮಾ ಮಾಡಲಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಪ್ರತಿ …

Read More »

ಸದ್ದು, ಗದ್ದಲ ಧರಣಿಯ ನಡುವೆ ನಡೆದ ಯಲ್ಲಾಪುರ ಪಟ್ಟಣ ಪಂಚಾಯತ ಸಾಮಾನ್ಯ ಸಭೆ.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಜಾತ್ರೆಯ ಲೆಕ್ಕಾಚಾರ ಕೇಳುತ್ತಲೇ ಮತ್ತೊಂದು ಜಾತ್ರೆ ಹತ್ತಿರ ಬರುತ್ತಿದೆ. ಆಡಳಿತಾಧಿಕಾರಿ ಅವಧಿಯಲ್ಲಿ ನಡೆದ ಪ.ಪಂ ಲೆಕ್ಕಾಚಾರ ಸಭೆಯಲ್ಲಿ ಇನ್ನೂ ಮಂಡನೆಯಾಗಿಲ್ಲ. ಧಾತ್ರಿ ಬಡಾವಣೆಯನ್ನು ಸುಪರ್ದಿಗೆ ಪಡೆದ ವಿಚಾರವನ್ನೂ ಸದಸ್ಯರಿಗೆ ತಿಳಿಸಿಲ್ಲ. ಕೇವಲ ಅನುಮೋದನೆಗೆ , ಸಹಿಗಾಗಿ ಸದಸ್ಯರನ್ನು ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಯಾವ ಮಾಹಿತಿಯೂ ಸದಸ್ಯರಿಗೆ ದೊರೆಯುತ್ತಿಲ್ಲ. ಯಾವ ಪುರುಷಾರ್ಥಕ್ಕೆ ವಾರ್ಡ್ ಮೆಂಬರ್ ಆಗಿ ಮುಂದುವರೆಯಬೇಕು? ಅಧಿಕಾರದ …

Read More »

ತಂದೆ ಜನರ ಜೀವ ಉಳಿಸುವ ವೈದ್ಯ ವೃತ್ತಿ ; ಮಗನಿಗೆ ಮೂಕ ಪ್ರಾಣಿಗಳ ಸೇವೆಯಲ್ಲಿ ಆತ್ಮ ತೃಪ್ತಿ..

ಯಲ್ಲಾಪುರ : ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ನಿರ್ವಹಿಸುತ್ತಿರುವ ಡಾ.ಮಂಜುನಾಥ ಆರ್ ನಾಯ್ಕ ಅವರ ಪುತ್ರ ಲಿಖಿತ್ ಮಂಜುನಾಥ ನಾಯ್ಕಗೆ ಮೂಕ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಉರಗಗಳನ್ನು ರಕ್ಷಿಸುವ ಪ್ರವೃತ್ತಿ. ಬಿ.ಇ ನಾಲ್ಕನೇ ವರ್ಷದಲ್ಲಿ ಓದುತ್ತಿರುವ 21 ವರ್ಷದ ಲಿಖಿತ್ ಮಂಜುನಾಥ ನಾಯ್ಕ ಬಾಲ್ಯದಿಂದಲೂ ಮೂಕಪ್ರಾಣಿಗಳೊಂದಿಗೆ ಅನ್ಯೋನ್ಯವಾಗಿ ಬೆಳೆದವನು. ಬಾಲ್ಯದಲ್ಲಿ ಅಜ್ಜ ದಿ.ರಾಮಚಂದ್ರ ನಾಯ್ಕರೊಂದಿಗೆ ಸದಾ ಪ್ರಾಣಿಗಳನ್ನು ಆರೈಕೆ ಮಾಡುವುದರಲ್ಲೇ ತೊಡಗಿಕೊಂಡು ತನ್ನಲ್ಲೂ ಪ್ರಾಣಿ ಪ್ರೀತಿಯನ್ನು ಮೈಗೂಡಿಸಿಕೊಂಡವನು. …

Read More »

ಯಲ್ಲಾಪುರದಲ್ಲಿ ಬೇಡರ ವೇಷದ ಸೊಬಗು ; ನಾಳೆ ಸಂಜೆ ತಮಟೆಯ ಸದ್ದು ಬಲು ಜೋರು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಅನಾದಿ ಕಾಲದಿಂದಲು ಆಚರಣೆಯಲ್ಲಿರುವ ಹೋಳಿ ಹಬ್ಬದ ಪೂರ್ವದಲ್ಲಿ ಆಚರಿಸುವ ಜಾನಪದ ಶ್ರೇಷ್ಠತೆಯ ಹಿನ್ನಲೆಯುಳ್ಳ ಬೇಡರ ವೇಷದ ಕುಣಿತ ಶಿರಸಿ ಸೀಮೆಗೆ ಮಾತ್ರವಲ್ಲದೇ ಯಲ್ಲಾಪುರದಲ್ಲೂ ಕೆಲ ವರ್ಷಗಳಿಂದ ನಿಧಾನವಾಗಿ ಗರಿಗೆದರುತ್ತಿದ್ದು ಈ ವರ್ಷ ಎರಡು ತಂಡಗಳು ಬೇಡರ ವೇಷದ ಕುಣಿತದ ಸೊಬಗನ್ನು ತಾಲೂಕಿನ ಜನತೆಗೆ ಉಣಬಡಿಸಲು ಸಿದ್ದಗೊಂಡಿವೆ. ಪಟ್ಟಣದ ಅಂಬೇಡ್ಕರ್ ನಗರ ಮತ್ತು ರವೀಂದ್ರನಗರದಿಂದ ಬೇಡರ ವೇಷ …

Read More »

ಸಾರ್ವಜನಿಕರ ಕೋಟ್ಯಾಂತರ ಹಣ ವ್ಯರ್ಥ ; ಖಾಲಿ ಬಿದ್ದ ಜಲಜೀವನ ಮಿಷನ್ ಟ್ಯಾಂಕುಗಳು.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ವಿವಿದೆಡೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ “ಮನೆ ಮನೆಗೆ ಗಂಗೆ” ಎಂಬ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಆದರೆ ದೂರದೃಷ್ಠಿ ಇಲ್ಲದೇ ಮತ್ತು ಯೋಜನೆಯ ಸಾಧಕ ಬಾಧಕಗಳನ್ನು ಅರಿಯದೇ ಕೆಲವೆಡೆ ಯೋಜನೆ ಅನುಷ್ಠಾನಗೊಳಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕಾ …

Read More »