
ಪ್ರತಿಧ್ವನಿ ಯಲ್ಲಾಪುರ : ಅಡಿಕೆ ಬೆಳೆಯ ಎಲೆಚುಕ್ಕೆ ರೋಗ ಮತ್ತು ಕೊಳೆ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ವಿತರಿಸಲಾಗುತ್ತಿದೆ.

2026-27 ಸಾಲಿನಲ್ಲಿ ಅಡಿಕೆ ಬೆಳೆಗಾರರಿಗೆ ಎಲೆಚುಕ್ಕೆ ರೋಗ ಮತ್ತು ಕೊಳೆ ರೋಗ ನಿರ್ವಹಣೆಗಾಗಿ ಈಗಾಗಲೇ ಕೇಂದ್ರ ನೆರವಿನ ಯೋಜನೆಯಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಘಟಕವಾದ ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ/ಕೀಟ ನಿಯಂತ್ರಣ ಕಾರ್ಯಕ್ರಮದಡಿ ಸಸ್ಯ ಸಂರಕ್ಷಣಾ ಔಷಧಿ ಖರೀದಿಗಾಗಿ ರೂ. 5೦೦೦ ಘಟಕ ವೆಚ್ಚಕ್ಕೆ ಶೇ.3೦ ರಂತೆ ಪ್ರತಿ ಹೆ. ಗೆ ರೂ.15೦೦ ಗಳಂತೆ ಫಲಾನುಭವಿಗೆ ಗರಿಷ್ಠ 2 ಹೆ. ವರೆಗೆ ಸಹಾಯಧನ ನೀಡುವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಸದರಿ ಫಲಾನುಭವಿಗಳಿಗೆ ರಾಜ್ಯ ವಲಯ ಯೋಜನೆಯಾದ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಹೆಚ್ಚುವರಿ ಸಹಾಯಧನವನ್ನು ಪ್ರತಿ ಹೆಕ್ಟೇರಿಗೆ ರೂ.15೦೦ ರುಪಾಯಿ ನೀಡಲು ಅವಕಾಶವಿದ್ದು, ಒಟ್ಟಾರೆ ಫಲಾನುಭವಿಗೆ ಸಸ್ಯ ಸಂರಕ್ಷಣಾ ಔಷಧಿ ಖರೀದಿಗಾಗಿ ರೂ. 5೦೦೦ ಘಟಕ ವೆಚ್ಚಕ್ಕೆ ಶೇ.6೦ ರಂತೆ ಪ್ರತಿ ಹೆ. ಗೆ ರೂ.3೦೦೦/- ಗಳಂತೆ ಗರಿಷ್ಠ 2 ಹೆ. ವರೆಗೆ ಸಹಾಯಧನ ನೀಡಲಾಗುವುದು. ರೈತರು ತಾವು ಖರೀದಿಸಿದ ಸಸ್ಯ ಸಂರಕ್ಷಣಾ ಔಷಧಿಯ (Tax invoice ) ರಶೀದಿ ಹಾಗೂ ಅರ್ಜಿ ಯನ್ನು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಯಲ್ಲಾಪುರ ರವರ ಕಛೇರಿಗೆ ಸಲ್ಲಿಸಿ ಈ ಯೋಜನೆಯಡಿ ಸಹಾಯಧನ ಪಡೆದುಕೊಳ್ಳಬಹುದಾಗಿದೆ ಎಂದು ಇಲಾಖೆವಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ರೈತರು ಕಾರ್ಯಪ್ರವೃತ್ತರಾಗಬೇಕಿದ್ದು ಸರ್ಕಾರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.









Prathidvani Yellapura