
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ Integrated CET classes ಯಶಸ್ವಿಯಾಗಿ ಪ್ರಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಜಗನ್ನಾಥ ರೇವಣಕರ, ರಾಘವೇಂದ್ರ ದೇವಾಡಿಗ, ಪುಷ್ಪಾ ಜೋಗಾರಶೆಟ್ಟರ ಹಾಗೂ ವಿಜ್ಞಾನ ಬೋಧಿಸುವ ಉಪನ್ಯಾಸಕರು, ಪಾಲಕ/ಪೋಷಕರೂ ಉಪಸ್ಥಿತರಿದ್ದರು.

ಜೀವಶಾಸ್ತ್ರ ಉಪನ್ಯಾಸಕರಾದ ವಿಕಾಸ ಮೊಕಾಶಿ ಅವರು ಸಿಇಟಿ ಪರೀಕ್ಷೆಯ ಪರಿಚಯ ಹಾಗೂ ಅದರ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮನವರಿಕೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುಬ್ರಾಯ ಟಿ ವೈದ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಿಇಟಿ ತರಗತಿಗಳು, ವೇಳೆ, ಪರೀಕ್ಷೆಗಳ ಕುರಿತಾಗಿ ಪಾಲಕರಿಗೆ ತಿಳಿಸಿದರು. ಸಿಇಟಿ ತರಗತಿಗಳು ಈ ದಿನ ಮಧ್ಯಾಹ್ನ 3:30 ಯಿಂದ 5 ಗಂಟೆಯವರೆಗೆ ನಡೆಯಲಿದ್ದು, ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಗನ್ನಾಥ ರೇವಣಕರ ಕಾರ್ಯಕ್ರಮದ ಯಶಸ್ಸಿಗಾಗಿ ಶುಭ ಹಾರೈಸಿದರು. ರಸಾಯನಶಾಸ್ತ್ರ ಉಪನ್ಯಾಸಕರಾದ ಧೂಳೇಶ ಕೊಕರೆ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.










Prathidvani Yellapura