Breaking News

ತಿಲಕ್ ಚೌಕ್ ಸಮಿತಿಗೆ ಭೇಟಿ ನೀಡಿದ ಉತ್ತರ ಕನ್ನಡ ಎಸ್.ಪಿ ದೀಪನ್ ಎಂ.ಎನ್ – ಗಣೇಶೋತ್ಸವ ಸಂಭ್ರಮಾಚರಣೆ ಶಾಂತಿ  ಸುವ್ಯವಸ್ಥೆ ಕುರಿತು ಸಲಹೆ ನೀಡಿದರು


ಪ್ರತಿಧ್ವನಿ ಯಲ್ಲಾಪುರ : ಚೌತಿ ಗಣೇಶೋತ್ಸವದ ಸಂಭ್ರಮಾಚರಣೆಗೆ ದಿನಗಣನೆ ಆರಂಭಗೊಂಡ ಹಿನ್ನೆಲೆಯಲ್ಲಿ ಯಲ್ಲಾಪುರದ ಅತ್ಯಂತ ಹಳೆಯ ಗಣೇಶೋತ್ಸವ ಆಚರಣೆ ಸಮಿತಿಯಾದ ತಿಲಕ್ ಚೌಕ್ ಸಭಾ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಎನ್.ದೀಪನ್ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.


ಪಟ್ಟಣದ ಅತ್ಯಂತ ಹಳೆಯ ಸಮಿತಿ ಎಂದೇ ಹೆಸರಾದ ಮತ್ತು ಪ್ರತಿ ವರ್ಷ ವಿಶಿಷ್ಟ ಆಚರಣೆಗೆ ಹೆಸರಾದ ತಿಲಕ್ ಚೌಕ್ ಗಜಾನನೋತ್ಸವ ಸಮಿತಿ ಆವಾರದಲ್ಲಿ ಪ್ರಸಕ್ತ ವರ್ಷದ ಗಜಾನನೋತ್ಸವ ಆಚರಣೆಯ ಕುರಿತು ಸಭೆ ನಡೆಯಿತು. ವಿಶೇಷವಾಗಿ ಸಭೆಯಲ್ಲಿ ಎಸ್.ಪಿ.ದೀಪನ್ ಉಪಸ್ಥಿತರಿದ್ದು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಸಭೆಯಲ್ಲಿ ಮಾಹಿತಿ ಹಂಚಿಕೊಂಡರು.

ಆಚರಣೆಯ ಸಂಭ್ರಮದಲ್ಲಿ ಯಾವುದೆ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು, ಸಮಿತಿ ಪ್ರಮುಖರು ಆಚರಣೆ ಸಂದರ್ಭದಲ್ಲಿ ಎಲ್ಲಾ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಬೇಕು, ಸರ್ಕಾರದ ನಿಯಮಾವಳಿಗಳನ್ನು ಮೀರುವಂತಿಲ್ಲ,ಕಾಲಕಾಲಕ್ಕೆ ಪೊಲೀಸ್ ಇಲಾಖೆ ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು ಒಟ್ಟಾರೆ ಹಬ್ಬ ಸಂಭ್ರಮ ಸಡಗರದೊಂದಿಗೆ ಶಿಸ್ತು ಮತ್ತು ಶಾಂತಿಯುತವಾಗಿ ಆಚರಣೆಯಾಗಬೇಕು ಎಂದು ಸಲಹೆ ನೀಡಿದರು.


ಸಭೆಯಲ್ಲಿ ತಿಲಕ್ ಚೌಕ್ ಗಜಾನನೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ್ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ಥಾಪಿಸಿದರು.

ಪ್ರಮುಖರಾದ ರವಿ ಲಕ್ಷ್ಮಣ್ ಶಾನಬಾಗ್ ಆಚರಣೆಗಳ ಬಗ್ಗೆ ಸಮಿತಿಯ ಸಿದ್ದತೆಯ ಕುರಿತು ಸಭೆಗೆ ವಿವರಿಸಿದರು.

ಪ್ರಥಮಬಾರಿಗೆ ತಿಲಕ್ ಚೌಕ್ ಸಾರ್ವಜನಿಕ ಗಜಾನನೋತ್ಸವ ಸಮಿತಿ ಆವಾರಕ್ಕೆ ಆಗಮಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ‌.ಎನ್‌ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯಲ್ಲಾಪುರ ನೂತನ ಪಿಐ ಸುರೇಶ್ ಕುಂಬಾರ್, ಪಿಎಸ್ಐ ರಾಜಶೇಖರ ವಂದಲಿ ಸ್ಥಳೀಯ ಪ್ರಮುಖರಾದ ರಾಜೇಂದ್ರ ಬದ್ದಿ, ಮಾದವ ನಾಯಕ್, ಶಂಕರ ಬದ್ದಿ, ಗಜು ನಾಯಕ್, ರಜತ್ ಬದ್ದಿ, ಗೌತಮ್ ಬಿಡೀಕರ್, ಪವನ್ ಕಾಮತ್, ಗಿರೀಶ್ ಪೈ, ರಮಣ್ ಅಸೂಕರ್, ಸಿದ್ದಾಥ್೯ ನಂದೊಳ್ಳಿ ಮಠ, ನಮಿತಾ ಬಿಡೀಕರ್, ಭವ್ಯ ಬಾಲಕೃಷ್ಣ ನಾಯಕ್,ತನುಜ ರಾಜೇಂದ್ರ ಬದ್ದಿ, ರಾಧಾ ಗುಡಿಗಾರ್, ಇನ್ನಿತರರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *