
ಪ್ರತಿಧ್ವನಿ ಯಲ್ಲಾಪುರ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನೂತನ ಯೋಜನೆಯಾದ ” ಪ್ರಜಾಸೇವೆ ” ಆಂದೋಲನ ಸಭೆ ತಾಲ್ಲೂಕಿನ ಮಂಚಿಕೇರಿಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಜನತೆ ಮತ್ತು ಸರ್ಕಾರ ಪರಸ್ಪರರಾಗುವ ನಿಟ್ಟಿನಲ್ಲಿ ಪ್ರಜಾಸೇವೆ ಅತ್ಯಂತ ಪರಿಣಾಮಕಾರಿಯಾಗಲಿದೆ ಮತ್ತು ಆಡಳಿತ ಯಂತ್ರ ಮತ್ತಷ್ಟು ಚುರುಕಾಗಲಿದೆ. ಪ್ರಜೆಗಳ ಸೇವೆಗಾಗಿಯೆ ಆಯ್ಕೆಯಾದ ನಾವು ಪ್ರಜೆಗಳ ಸೇವೆ ಇನ್ನಷ್ಟು ಚುರುಕಾಗಿ ಮಾಡಲು ಅವಕಾಶವಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಸಭೆಯನ್ನು ಉದ್ದೇಶಿಸಿ ಹೇಳಿದರು.

ಬಳಿಕ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ವಿಧವ ವೇತನ,ಅಂಗವಿಕಲ ವೃಧ್ದಾಪ್ಯ ವೇತನ, ಕುಡಿಯುವ ನೀರು,ರಸ್ತೆ, ಮನೆ,ಕಾಲು ಸಂಕ ಸೇರಿದಂತೆ ಹತ್ತು ಹಲವು ವಿಚಾರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿ ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಿದರು ಮತ್ತು ಕೆಲವನ್ನು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಬಗೆಹರಿಸುವಂತೆ ಆದೇಶಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಎಂ.ಆರ್.ಕುಲಕರ್ಣಿ, ತಾಲೂಕು ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್ ಧನವಾಡಕರ್, ಎಸಿಎಫ್ ಗಳಾದ ವೀರೇಶ್ ಕಬ್ಬಿನ್,ಸಂಗಮೇಶ್, ಪಿ.ಐ.ಸುರೇಶ್ ಕುಂಬಾರ್, ಪಂಚ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಉಲ್ಲಾಸ್ ಶಾನಭಾಗ್, ಹಾಗು ಇತರೆ ಅಧಿಕಾರಿಗಳು, ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.



















Prathidvani Yellapura