
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚಿಕೇರಿ – ಯಲ್ಲಾಪುರ ಓಡಾಟ ನಡೆಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಯಲ್ಲಾಪುರ ಬಸ್ ಡಿಪೋದಿಂದದಲೆ ಪ್ರತೇಕ ಬಸ್ ಒಂದನ್ನು ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅಹಿಂದ ವೇದಿಕೆ ಚಂದಗುಳಿ ಘಟಕದ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.

ಪ್ರತಿನಿತ್ಯ ಮಂಚಿಕೇರಿ ಯಿಂದ ಯಲ್ಲಾಪುರದ ಶಾಲಾ ಕಾಲೇಜುಗಳಿಗೆ ಓಡಾಟ ನಡೆಸುವ ವಿದ್ಯಾರ್ಥಿಗಳಿಗೆ ಶಿರಸಿ ಮಾರ್ಗವಾಗಿ ಬರುವ ಎಲ್ಲಾ ಬಸ್ ಗಳು ನಿಲ್ಲಲು ಸಹ ಸ್ಥಳಾವಕಾಶ ಇಲ್ಲದಂತಿದ್ದು ಅದರಲ್ಲೆ ಹರಸಾಹಸ ಮಾಡಿ ಸಂಚರಿಸುವ ದುಸ್ತಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಹೇಳಿಕೊಳ್ಳಲಾರದಷ್ಟು ಮುಜುಗರದ ಸನ್ನಿವೇಶಗಳು ಎದುರಾಗುತ್ತಿದ್ದು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಮಂಚಿಕೇರಿ ಪರಿಸ್ಥಿತಿಯೆ ಈ ರೀತಿ ಆದಮೇಲೆ ಅದೇ ಮಾರ್ಗದಲ್ಲಿ ಬರುವ ತೂಕದಬೈಲ್,ಹೊಂಡಗದ್ದೆ,ಮಳಲಗಾಂವ,ಜಂಬೆಸಾಲ್,ಉಪಳೇಶ್ವರ, ಹುತ್ಕಂಡ ಹಾಗು ಸವಣಗೇರಿ ಮಕ್ಕಳ ಪರಿಸ್ಥಿತಿ ಹೇಗಿರಬೇಡ. ಇದನ್ನೆಲ್ಲಾ ಪರಿಗಣಿಸಿ ಮಂಚಿಕೇರಿ ಯಿಂದ ಯಲ್ಲಾಪುರಕ್ಕೆ ಬೆಳಗ್ಗೆ 8-30 ಹೊರಡುವಂತೆ ಮತ್ತು ಸಂಜೆ ಯಲ್ಲಾಪುರದಿಂದ ಮಂಚಿಕೇರಿ ತಲುಪುವಂತೆ ಸಂಜೆ 4-30 ಕ್ಕೆ ಬಿಡುತ್ತಿರುವ ಶಿರಸಿ ಮಾರ್ಗದ ಬಸ್ 4-45 ಕ್ಕೆ ಯಲ್ಲಾಪುರ ನಿಲ್ದಾಣ ಬಿಡುವಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಲಿಸಬೇಕೆಂದು ಅಖಿಲ ಕರ್ನಾಟಕ ಅಹಿಂದ ವೇದಿಕೆ ಮುಖಾಂತರ ಸಂಘಟನೆಯ ಸ್ಥಾಪಕಾಧ್ಯಕ್ಷ ನೇತೃತ್ವದಲ್ಲಿ ಚಂದಗುಳಿ ಘಟಕದ ಅಡಿಯಲ್ಲಿ ಬರೆದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಒಂದು ವೇಳೆ ನೀಡಿದ ಮನವಿಯನ್ನು ಗಣನೆಗೆ ಪರಿಗಣಿಸದೆ ನಿರ್ಲಕ್ಷಿಸಿದಲ್ಲಿ ಸಂಘಟನೆ ಅಡಿಯಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ. ಮನವಿ ಪತ್ರವನ್ನು ಯಲ್ಲಾಪುರ ಬಸ್ ಡಿಪೋ ವ್ಯವಸ್ಥಾಪಕ ಸಂತೋಷ್‌ವರ್ಣೇಕರ್ ಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಹಿಂದ ಚಂದಗುಳಿ ಘಟಕದ ಅಧ್ಯಕ್ಷ ಈಶ್ವರ ಪಟಗಾರ್, ಉಪಾಧ್ಯಕ್ಷರುಗಳಾದ ಸಂತೋಷ ಹೆಗಡೆ, ನರಸಿಂಹ ಸಿದ್ದಿ, ಈರಪ್ಪ ಬೊವಿ ವಡ್ಡರ್, ಕಾರ್ಯದರ್ಶಿ ಯೋಗೇಶ್ ನಾಯ್ಕ್ ಮತ್ತು ತಾಲೂಕು ಅಹಿಂದ ಪ್ರಮುಖ ಕೃಷ್ಣಾ ನಾಯ್ಕ್ ಉಪಸ್ಥಿತರಿದ್ದರು.

ಮಂಚಿಕೇರಿ ಯಿಂದ ಅದೇ ಮಾರ್ಗದಲ್ಲಿ ಬರುವ ಹಲವು ಮಜರೆಗಳಿಂದ ವಿದ್ಯಾರ್ಥಿಗಳು ಯಲ್ಲಾಪುರ ಶಾಲಾ ಕಾಲೇಜುಗಳಿಗೆ ನಿತ್ಯ ಇಕ್ಕಟ್ಟಿನಲ್ಲಿ ಸಂಚರಿಸುತ್ತಿದ್ದು ನೋವು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು ಪೊಷಕರ ಬಳಿ ಹೇಳಿಕೊಂಡರೆ ಎಲ್ಲಿ ವಿದ್ಯಾಬ್ಯಾಸಕ್ಕೆ ಅಡ್ಡಿಯಾಗುತ್ತಾರೊ ಎಂಬ ಭಯದಿಂದ ಮನೆಯಲ್ಲಿ ಹೇಳಿಕೊಳ್ಳದೆ ಒಳಗೊಳಗೆ ನೋವು ಅನುಭವಿಸುತ್ತಿದ್ದಾರೆ. ಸಮಸ್ಯೆಯ ಗಂಭೀರತೆ ಅರಿತು ಸಾರಿಗೆ ಅಧಿಕಾರಿಗಳು ತಕ್ಷಣ ಬೇರೊಂದು ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ. ದ್ಯಾಮಣ್ಣ ಬೊವಿ ವಡ್ಡರ್, ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ.











Prathidvani Yellapura