Breaking News

ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ – ಶಾಸಕ  ದಿನಕರ ಶೆಟ್ಟಿ ಪ್ರಯತ್ನ ಶ್ಲಾಘನೀಯ ರಾಮು ನಾಯ್ಕ್..

ಪ್ರತಿಧ್ವನಿ ಯಲ್ಲಾಪುರ ಛಲ ಬಿಡದ ತ್ರಿವಿಕ್ರಮನಂತೆ, ಸರಕಾರ ಹಾಗೂ ಸಂಬಂಧಿತ ಇಲಾಖೆಗಳ ಬೆನ್ನು ಬಿದ್ದು, ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ ಆರಂಭಿಸಿದ ಶಾಸಕ  ದಿನಕರ ಶೆಟ್ಟರಿಗೆ, ನಾಗರಿಕ ವೇದಿಕೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಯಲ್ಲಾಪುರದ ನಾಗರಿಕ ವೇಧಿಕೆ ಅಧ್ಯಕ್ಷ ರಾಮುನಾಯ್ಕ್ ಮಾದ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಇತ್ತೀಚೆಗೆ ಆರತಿ ಬೈಲ್ ಘಟ್ಟದಲ್ಲಿ ನಡೆದ ಭೀಕರ ಅಪಘಾತ

ಪ್ರತಿ ದಿನ ಒಂದಿಲ್ಲೊಂದು ವಾಹನ ಅಪಘಾತ, ಸಾವು ನೋವು ಸಂಭವಿಸುವ ಅರಬೈಲ ಘಟ್ಟದಂತಹ ಪ್ರದೇಶ ಹೊಂದಿರುವ ಯಲ್ಲಾಪುರ ತಾಲೂಕಿಗೂ ಇಂತಹ ಟ್ರೋಮಾ ಸೆಂಟರಿನ ಅವಶ್ಯಕತೆಯಿದೆ. ಇದು ನಮ್ಮ ಈಗಿನ ಬೇಡಿಕೆಯಲ್ಲ, ಯಲ್ಲಾಪುರ ನಾಗರಿಕರ ದಶಕಗಳ ಬೇಡಿಕೆಯಾಗಿದೆ.

ಟ್ರೋಮಾ ಸೆಂಟರ್ ಆಸ್ಪತ್ರೆ ಮಹತ್ವ

ಟ್ರೋಮಾ ಸೆಂಟರ್ ಅಂದರೆ, ಭೀಕರ ರಸ್ತೆ ಅಪಘಾತಗಳು, ಮರಗಿಡಗಳು, ಗುಡ್ಡ ಕುಸಿತ, ಆನೆ, ಹುಲಿ, ಕರಡಿ, ಹಾವು ಇತ್ಯಾದಿಗಳಿಂದ ತೊಂದರೆಯಾದವರಿಗೆ, 24×7 ಸೇವೆ ಸಲ್ಲಿಸುವ ಆಸ್ಪತ್ರೆಯಾಗಿದೆ. ಇಲ್ಲಿ ನುರಿತ ವೈಧ್ಯರು, ಸಿಬ್ಬಂಧಿ, ಅಂಬುಲೆನ್ಸ್, ಸಿ.ಟಿ.ಸ್ಕ್ಯಾನ್, ಎಂ.ಆರ್.ಐ. ಸ್ಕ್ಯಾನ್, ಐ.ಸಿ.ಯು.ಘಟಕ ಎಲ್ಲವೂ ಇರುತ್ತದೆ. ಸರಕಾರ ಅಪಘಾತ ವಲಯದವರಿಗೆಂದೇ ಈ ವಿಶೇಷ ಯೋಜನೆ ಜಾರಿಗೆ ತಂದಿದೆ.
ಈ ಭಾಗದಲ್ಲಿ ತೊಂದರೆಗೆ ಒಳಗಾದವರಿಗೆ 80-100 ಕಿ.ಮಿ.ದೂರದ ಹುಬ್ಬಳ್ಳಿ, ಕಾರವಾರ, ಕುಮಟಾ ಇತ್ಯಾದಿ ದೊಡ್ಡಾಸ್ಪತ್ರೆಗಳಿಗೆ ಒಯ್ಯಬೇಕಾಗುತ್ತದೆ.‌ ಯಲ್ಲಾಪುರದಲ್ಲಿಯೇ ಟ್ರೋಮಾ ಆಸ್ಪತ್ರೆಯಾದರೆ, ಕೇವಲ 20 ಕಿ.ಮಿ.ಅಂತರದಲ್ಲಿಯೇ ನುರಿತ ವೈಧ್ಯಕೀಯ ಸೌಲಭ್ಯ ದೊರಕುತ್ತದೆ.


ಜಿಲ್ಲಾ ಆಸ್ಪತ್ರೆ ಬೇರೆಕಡೆಗೆ, ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇರೆ ಕಡೆಗೆ, ಮೆಡಿಕಲ್ ಕಾಲೇಜು ಬೇರೆಕಡೆಗೆ, ಈ ಅಪಘಾತ ವಲಯ ಯಲ್ಲಾಪುರಕ್ಕೆ ಕನಿಷ್ಠ ಒಂದು ಟ್ರೋಮಾ ಸೆಂಟರ್ ಆಸ್ಪತ್ರೆಯೂ ಬೇಡವೇ?. ಈಗಿನ ಸರಕಾರಿ ಆಸ್ಪತ್ರೆ ಚನ್ನಾಗಿ ಕೆಲಸ ಮಾಡುತ್ತಿದೆ. ಆದರೆ, 24×7 ವ್ಯವಸ್ಥೆ ಇರುವ ಟ್ರೋಮಾ ಸೆಂಟರ್ ಆದರೆ ಇನ್ನೂ ಅನುಕೂಲವಲ್ಲವೇ?.
ರಾಜ್ಯದ ನೂತನ ಮುಖ್ಯಮಂತ್ರಿಗಳ ಮೇಲೆ, ನೂತನ ಆರೋಗ್ಯ ಸಚಿವರು ಹಾಗೂ ನಮ್ಮ ಜಿಲ್ಲೆಯ ಉಸ್ತುವಾರಿಗಳೂ ಆಗಿರುವ ಯು.ಟಿ.ಖಾದರ್ ರವರ ಮೇಲೆ ಒತ್ತಡ ಹಾಕಿ, ನಮ್ಮ ಕ್ಷೇತ್ರದ ಜನಪ್ರತಿನಿಧಿಗಳೂ ತ್ರಿವಿಕ್ರಮರಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *