
ಪ್ರತಿಧ್ವನಿ ಯಲ್ಲಾಪುರ : ದೇಶದಾದ್ಯಂತ ಎಸ್.ಐ.ಆರ್ ಪ್ರಕ್ರಿಯೆ ಅತ್ಯಂತ ವೇಗವಾಗಿ ಜರುಗುತ್ತಿದ್ದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೇಲುಸ್ತುವಾರಿ ಸಮಿತಿ ರಚನೆಮಾಡಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್ ಪ್ರಕ್ರಿಯೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಸ್ತುವಾರಿ ಯಾಗಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರಿಗೆ ಜವಾಬ್ದಾರಿ ನೀಡಿ ಜಿಲ್ಲಾ ಕಾಂಗ್ರೆಸ್ ಆದೇಶ ಪತ್ರ ಹೊರಡಿಸಿದೆ.

ಯಲ್ಲಾಪುರ ಬ್ಲಾಕ್ ಗೆ ಎನ್.ಕೆ.ಭಟ್, ಮುಂಡಗೋಡು ಬ್ಲಾಕ್ ಗೆ ಜ್ಞಾನೇಶ್ವರ ಗುಡಿಯಾಳ, ಬನವಾಸಿ ಬ್ಲಾಕ್ ಗೆ ದ್ಯಾಮಣ ದೊಡ್ಡಮನಿ ಅವರಿಗು ಎಸ್‌ಐಆರ್ ಪ್ರಕ್ರಿಯೆ ಪರಿಣಾಮವಾಗಿ ಅನುಷ್ಠಾನಗೊಳ್ಳಲು ಆಯಾ ಭಾಗದ ಉಸ್ತುವಾರಿಯಾಗಿ ನೇಮಿಸಲಾಗಿದ್ದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಆದೇಶ ಪತ್ರ ಹೊರಡಿಸಿದೆ.











Prathidvani Yellapura