Breaking News

ನಂದೊಳ್ಳಿ ಯಲ್ಲಿ ಇಂದು ” ಪಾಪದ ಪಿಂಡ ಹೊತ್ತ ಪತಿವ್ರತೆ ” ಸುಂದರ ಸಾಮಾಜಿಕ ನಾಟಕ ಪ್ರದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ನಂದೊಳ್ಳಿಯ ಶ್ರೀ ರಾಮಲಿಂಗೇಶ್ವರ (ನಾಟ್ಯ) ನಾಟಕ ಕಲಾ ಬಳಗದ ದಶಮಾನೋತ್ಸವ ಪ್ರಯುಕ್ತ ನಂದೊಳ್ಳಿ ಸ.ಹಿ.ಪ್ರಾ ಶಾಲೆಯ ಆವಾರದಲ್ಲಿ ಏ.5 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಗ್ಗೆ 10 ಕ್ಕೆ ಗಣಹವನ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8 ಕ್ಕೆ ಶಾಲಾ‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದಶಮಾನೋತ್ಸವವನ್ನು ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಲಿದ್ದು, ಕಲಾ ಬಳಗದ ಅಧ್ಯಕ್ಷ ನಾಗರಾಜ ಕವಡಿಕೆರೆ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಮುಖಂಡರು, ಗಣ್ಯರು ಭಾಗವಹಿಸಲಿದ್ದಾರೆ. ನಾಟಕ ಕಲಾವಿದರಾದ ಆರ್.ಜಿ.ಭಟ್ಟ ಬೆಳಸೂರು, ಟಿ.ವಿ.ಭಾಗ್ವತ, ಭಾಸ್ಕರ ಭಟ್ಟ ಗುಂಡ್ಕಲ್, ನಂದೊಳ್ಳಿ ಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ, ನಾಟಿ ವೈದ್ಯ ನರಸಿಂಹ ಭಟ್ಟ ದರ್ಬೆಮನೆ, ಜಾನಪದ ಕಲಾವಿದ ನರಸಿಂಹ ಸಿದ್ದಿ ಬಕ್ಕಳತಗ್ಗು, ಕುಶಲಕರ್ಮಿ ಶಂಕರ ಆಚಾರಿ ಅವರನ್ನು ಸನ್ಮಾನಿಸಲಾಗುವುದು.
ನಂತರ ಬಳಗದ ಕಲಾವಿದರಿಂದ ಪಾಪದ ಪಿಂಡ ಹೊತ್ತ ಪತಿವ್ರತೆ ನಾಟಕ ಪ್ರದರ್ಶನ ನಡೆಯಲಿದೆ. ಮಂಜುನಾಥ ನಾಯ್ಕ, ನರಸಿಂಹ ಭಟ್ಟ ಚಂದಗುಳಿ, ಶಿವಾನಂದ ನಾಯ್ಕ, ಸುಬ್ಬಣ್ಣ ಕೋಡ್ನಗುಡ್ಡೆ, ಶ್ರೀಧರ ಅಣಲಗಾರ, ಸುಬ್ಬಣ್ಣ ಕಂಚಗಲ್, ಸುದರ್ಶನ ಭಾಗ್ವತ, ಸುದರ್ಶನ ದೇವಿತಗ್ಗು, ಗಜಾನನ ಬೆಳಖಂಡ, ಗೋಪಾಲ ಕುಂಟೆಮನೆ, ದತ್ತಾತ್ರೇಯ ಪಟಗಾರ, ಮಾದೇವ ನಾಯ್ಕ, ತಿಮ್ಮಣ್ಣ ಸೂಳಗಾರ, ಶಿವ ಕಂಬದಬೈಲ್, ಗಣಪತಿ ಭಂಡಾರಿ, ತಿಮ್ಮಪ್ಪ ಪಟಗಾರ, ವಿನಾಯಕ ಉದಾತಗ್ಗು, ನೇತ್ರಾ ಹುಬ್ಬಳ್ಳಿ, ಕಾವ್ಯಾ ದಾವಣಗೆರೆ, ಶಿಲ್ಪಾ ಭದ್ರಾವತಿ ಅಭಿನಯಿಸಲಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *