Breaking News

ಯಲ್ಲಾಪುರದಲ್ಲಿ ನಡೆದ ಭಾವೈಕ್ಯತೆಯ ಸಂದೇಶ ಸಾರಿದ ಮೊಹರಂ ಆಚರಣೆ


ಯಲ್ಲಾಪುರ : ಮುಸ್ಲಿಂ ಭಾಂಧವರ ಶ್ರೇಷ್ಠ ಹಬ್ಬಗಳಲ್ಲೊಂದಾದ ಮೊಹರಂ ಆಚರಣೆಯು ತಾಲೂಕಿನಾದ್ಯಂತ ವಿಜೃಂಬಣೆಯಿಂದ ಜರುಗಿತು. ಕಳೆದೆರಡು ದಿನಗಳಿಂದ ಮಳೆಯೂ ಕಡಿಮೆಯಾಗಿದ್ದು ಮೊಹರಂ ಮೆರವಣಿಗೆಗೆ ಅಡಚಣೆ ಇಲ್ಲದಂತಾಗಿತ್ತು.


ಸುಮಾರು 23 ಮೊಹರಂ ಕಮಿಟಿಗಳು ತಾಲೂಕಿನಲ್ಲಿದ್ದು ಆಯಾ ವ್ಯಾಪ್ತಿಯಲ್ಲಿ ಪಂಜದ ಮೆರವಣಿಗೆಯೊಂದಿಗೆ ನಿಯಮಾನುಸಾರ ಧಾರ್ಮಿಕ ಆಚರಣೆಯನ್ನು ಆಚರಿಸಲಾಯಿತು.


ಪಟ್ಟಣದ ತಿಲಕಚೌಕದಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲಾ ಪಂಜಾಗಳು ಮೆರವಣಿಗೆ ನಡೆಸಿದವು. ಈ ಸಂದರ್ಭದಲ್ಲಿ ಮೊಹರಂ ಕುರಿತಾದ ಗೀತೆಯನ್ನು ಹಾಡುವ ತಂಡದ ಗಾನಸುಧೆ ಮೆರವಣಿಗೆಯ ಉದ್ದಕ್ಕೂ ನಡೆಯಿತು. ಮುಸ್ಲಿಂ ಧರ್ಮೀಯರು ಮಾತ್ರವಲ್ಲದೇ ಇತರೆ ಧರ್ಮದವರೂ ಸಹ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದರು.ನಂತರ ಪದ್ಧತಿಯಂತೆ ಪಂಜಾಗಳ ಮೆರವಣಿಗೆ ಜೋಡುಕೆರೆಯ ತಟಕ್ಕೆ ತಲುಪಿ ಮುಂದಿನ ಪ್ರಕ್ರಿಯೆ ಮಾಡಲಾಯಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *