Breaking News

ವನವಾಸಿ ಮಕ್ಕಳಿಗೆ ನಿತ್ಯಾವಶ್ಯಕ ವಸ್ತುಗಳನ್ನು ವಿತರಿಸಿದ ಯಲ್ಲಾಪುರ ಲಯನ್ಸ್ ಕ್ಲಬ್,,,

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಲಯನ್ಸ್ ಕ್ಲಬ್ ಯಲ್ಲಾಪುರದ ವತಿಯಿಂದ ವನವಾಸಿ ಮಕ್ಕಳ ನಿತ್ಯಾವಶ್ಯಕ ವಸ್ತುಗಳನ್ನು ಅತ್ಯಂತ ಸಂತಸದಿಂದ ವಿತರಿಸಿದ್ದೇವೆ.

ಬದುಕಿನಲ್ಲಿ ಸಾಧನೆಯ ಛಲವಿದ್ದು ಆ ಪ್ರಯತ್ನದಲ್ಲಿ ಸಾಗುವಾಗ ಬರುವ ಎಡರು-ತೊಡರುಗಳನ್ನು ಮೀರಿ ಒಂದು ನಿರ್ಧಿಷ್ಟ ಗುರಿ ಹೊಂದಿ ಗೆಲುವನ್ನು ನಿಮ್ಮದಾಗಿಸಿಕೊಳ್ಳಬೇಕು. ಆಗ ನಿಮ್ಮ ವಿದ್ಯೆ ಮತ್ತು ವಸತಿ ನೀಡಿದ ವಿಠ್ಠಲ ವನವಾಸಿ ಕಲ್ಯಾಣದ ಧ್ಯೇಯೋದ್ದೇಶ ಸಾಕಾರಗೊಳ್ಳಲಿದೆ ಎಂದು ಯಲ್ಲಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಬೋರ್ಕರ್ ಹೇಳಿದರು.


ಅವರು ಪಟ್ಟಣದ ವಿಠ್ಠಲ ವನವಾಸಿ ಕಲ್ಯಾಣ ವಸತಿ ನಿಲಯಕ್ಕೆ ಅಗತ್ಯ ವಸ್ತುಗಳಿರುವ ಆಹಾರ ಕಿಟ್ ವಿತರಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕರು, ಸಿಬ್ಬಂದಿಗಳು, ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ವನವಾಸಿ ಕಲ್ಯಾಣ ಕೇಂದ್ರದ ಹಿತೈಷಿಗಳು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *