Breaking News

ಯಲ್ಲಾಪುರದಲ್ಲಿ ನಡೆದ ” ಅಡಿಕೆ ಎಲೆ ಚುಕ್ಕಿ ರೋಗದ ವಿಚಾರ ಸಂಕೀರಣ “

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ತತಿಧ್ವನಿ,ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆ ಅಡಿಕೆಯಾಗಿದ್ದು ಅದರಲ್ಲು ಘಟ್ಟದ ಮೇಲಿನ ಪ್ರದೇಶಗಳ ಕೃಷಿಕರ ಜೀವಾಳ ಮಾರುಕಟ್ಟೆಯ ಆರ್ಥಿಕ ಲವಲವಿಕೆ ಅಡಗಿರುವುದೆ ಅಡಿಕೆ ಬೆಳೆಯಿಂದಾ‌ಅಂತಹ ಅಡಿಕೆ ಬೆಳೆಗೆ ಗಂಡಾಂತರವಾಗಬಲ್ಲ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಹಮ್ಮಿಕೊಂಡ ವಿಚಾರಸಂಕೀರಣ ಮತ್ತು ಸಂವಾದ ಅತ್ಯಂತ ಸ್ವಾಗತಾರ್ಹ ವಿಷಯವಾಗಿದೆ. ಹಾಗೆಂದು ಆತಂಕ ಪಡುವ ಪ್ರಶ್ನೆಯೆ ಇಲ್ಲ ಯಾವುದೆ ರೈತರು ದೃತಿಗೆಡದೆ ರೋಗದ ನಿಯಂತ್ರಣಕ್ಕೆ ಗಮನಹರಿಸಿ ತಜ್ಞರ ಸಲಹೆ, ಹಿರಿಯರ ಮಾರ್ಗದರ್ಶನ ಮತ್ತು ಭಗವಂತನಲ್ಲಿ ಮೊರೆ ಇಡುವುದರೊಂದಿಗೆ ಬರುವ ಗಂಡಾಂತರವನ್ನು ಹತೋಟಿಗೆ ತರಬಹುದಾಗಿದೆ ಎಂದು ಪ್ರಗತಿಪರ ರೈತ ಟಿ.ಎಮ್.ಎಸ್ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿ ಕುಂಬ್ರಿ ಹೇಳಿದರು.


ಅವರು ಪಟ್ಟಣದ ಅಡಿಕದ ಭವನದಲ್ಲಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತೋಟಗಾರಿಕ ಇಲಾಖೆ ಯಲ್ಲಾಪುರ ತಾಲೂಕ ಮತ್ತು ಕೇಂದ್ರೀಯ ತೋಟಗಾರಿಕ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ” ಎಲೆಚುಕ್ಕಿ ರೋಗದ” ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಭಯ ಬೀಳುವ ಅಗತ್ಯವಿಲ್ಲದಿದ್ದರು ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ ಮತ್ತು ನುರಿತ ತಜ್ಞರಿಂದ ಮಾಹಿತಿ ಪಡೆದು ಬಂದಿರುವ ರೈತರು ತಮ್ಮ ಪಕ್ಕದ ತೋಟದ ಮಾಲಿಕರಿಗೆ ತಿಳಿಸಿ ಹೇಳಬೇಕಿದೆ. ಪ್ರಮುಖವಾಗಿ ಇಂತಹ ಗಂಭೀರ ಸಮಸ್ಯೆಗಳು ಎಲ್ಲಿ ಉದ್ಬವಿಸಿದೆಯೊ ಅಲ್ಲಿಗೆ ಇಲಾಖೆ ಕಡೆಯಿಂದ ರೈತರಿಗೆ ಪ್ರವಾಸ ಏರ್ಪಡಿಸಿ ತೋರಿಸಬೇಕಿದೆ ಎಂದು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರೈತ ಹೋರಾಟಗಾರ ಪಿ.ಜಿ.ಭಟ್ ವಡ್ಡರಮನೆ ಹೇಳಿದರು.


ತಾಲೂಕು ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ನಾಯ್ಕ್ ಉಪಸ್ಥಿತರಿದ್ದು ಶುಭಕೋರಿದರು.


ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ಡಾ, ವಿನಾಯಕ ಹೆಗಡೆ ಮತ್ತು ಅಗ್ರಿಕಲ್ಚರ್ ಡೆವಲಪ್‌ಮೆಂಟ್ ಸೊಸೈಟಿ ಶಿರಸಿಯ ವಿಷಯ ತಜ್ಞರು ವಿಜಯೇಂದ್ರ ಎಮ್ ಹೆಗಡೆ ಎಲೆಚುಕ್ಕಿ ರೋಗದ ಕುರಿತ ವಿಶ್ಲೇಷಣೆ ಸಂವಾದ ನಡೆಸಿದರು.


ತಾಲೂಕಿನ ವಿವಿಧ ಪಂಚಾಯತಗಳ ಪ್ರಮುಖರು ಜನಪ್ರತಿನಿಧಿಗಳು ತೋಟಿಗರು ಉಪಸ್ಥಿತರಿದ್ದು ಪ್ರಯೋಜನ ಪಡೆದರು.
ತೋಟಗಾರಿಕ ಇಲಾಖೆ ಉಪನಿರ್ದೇಶಕ ಡಾ,ಬಿ.ಪಿ ಸತೀಶ್ ಪ್ರಾಸ್ತಾವಿಕ ನುಡಿದರು.ಕೃಷಿ ಇಲಾಖೆಯ ಎಮ್.ಜಿ.ಭಟ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *