
ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ತಾಮೀರ್-ಕೋ-ಆಪ್-ಸೊಸೈಟಿ ಚುನಾವಣೆ ನಡೆದಿದ್ದು ಫಲಿತಾಂಶ ರವಿವಾರ ಘೋಷಣೆಯಾಗಿದ್ದು ಯಲ್ಲಾಪುರ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಮಾಜ ಸೇವಕ ದಿವಂಗತ ಮೊಹ್ಮದ್ ಎ ಶೇಖ್ ಅವರ ಪುತ್ರ ಅಕ್ತರ್ ಅಲಿ ಮೊಹ್ಮದ್ ಶೇಖ್ ಪ್ರಚಂಡ ಬಹುಮತಗಳಿಂದ ಗೆಲುವು ಸಾಧಿಸಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಭೇಟಿಯಾಗಿ ಸಂತಸ ಹಂಚಿಕೊಂಡರು. ಈ ವೇಳೆಯಲ್ಲಿ ಸಂಸ್ಥೆಯ ಪ್ರಗತಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಿದರು.

ಇದೇ ಸಂದರ್ಭದಲ್ಲಿ ಯಲ್ಲಾಪುರ ಕ್ಷೇತ್ರದಿಂದ ತಾಮೀರ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ ಅಕ್ತರ್ ಅಲಿ ಎಂ.ಎ.ಶೇಖ್ ಅವರನ್ನು ಶಾಸಕ ಶಿವರಾಮ ಹೆಬ್ಬಾರ್ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿದರು.

ಚುನಾವಣೆಯಲ್ಲಿ ನನಗೆ ಮತ ಚಲಾಯಿಸಿ ಸಂಸ್ಥೆಯ ಸೇವೆಗೆ ಅವಕಾಶ ಕಲ್ಪಿಸಿದ ಸರ್ವರಿಗು ಧನ್ಯವಾದಗಳು. ಮುಂದೆ ಸಂಸ್ಥೆಯ ಬೆಳವಣಿಗೆಗೆ ಹಿರಿಯ ಸಲಹೆ ಸೂಚನೆಗಳನ್ನು ಪಡೆದು ಮುಂದೆ ಸಾಗುವೆನು. ಹಿಂದೆ ನನ್ನ ತಂದೆಯವರು ಸಹ ಇದೇ ಸಂಸ್ಥೆಯ ಬೆಳವಣಿಗೆಗೆ ನಿಸ್ವಾರ್ಥ ಮನಸ್ಸಿನಿಂದ ಶ್ರಮಿಸಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲೆ ನಡೆದು ಸಂಸ್ಥೆಗೆ ಉತ್ತಮ ಹೆಸರು ತರುವೆನು ತಮ್ಮೆಲ್ಲರ ಸಹಕಾರ ಸದಾ ಹೀಗೆ ನನ್ನ ಮೇಲಿರಲಿ ಮತ್ತೊಮ್ಮೆ ತಮ್ಮೆಲ್ಲರಿಗು ಧನ್ಯವಾದಗಳು.
ಅಕ್ತರ್ ಅಲಿ ಮೊಹ್ಮದ್ ಎ ಶೇಖ್
ನಿರ್ದೇಶಕರು, ತಾಮಿರ್-ಕೋ-ಆಪ್-ಸೊಸೈಟಿ.


Prathidvani Yellapura