
ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ತಾಮಿರ_ ಕೊ_ ಆಪ್ ಸೊಸೈಟಿ ಅಂಕೋಲಾ ಇದರ ಆಢಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಕ್ತರ್ ಅಲಿ ಮಹಮ್ಮದ್ ಗೌಸ್ ಎ ಶೇಖ್ ಪ್ರಚಂಡ ಗೆಲುವು ದಾಖಲಿಸುವ ಮೂಲಕ ಜಯಭೇರಿ ಭಾರಿಸಿದ್ದಾರೆ.

ಕಳೆದ 16/02/2025 ರಂದು ಅಂಕೋಲಾದಲ್ಲಿ ಚುನಾವಣೆ ನಡೆಸಲಾಗಿತ್ತು. ಕೆಲವು ಶಾಖೆಗಳ ಪಲಿತಾಂಶದ ಬಗ್ಗೆ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ ಪ್ರಕರಣ ನಡೆಯುತ್ತಿದ್ದುದರಿಂದ ಪಲಿತಾಂಶ ಪ್ರಕಟವಾಗಿರಲಿಲ್ಲ. ಈಗ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಆದೇಶದಂತೆ ಮತ ಎಣಿಕ ಮಾಡಲಾಗಿ.ತಾಮಿರ_ ಕೊ_ ಆಪ್ ಸೊಸೈಟಿ ಅಂಕೋಲಾ ಇದರ ಯಲ್ಲಾಪುರ ಶಾಖೆಯ ನಿರ್ದೇಶಕರಾಗಿ. ಅಖ್ತರ ಅಲಿ ಮಹ್ಮದ ಗೌಸ ಇವರು ಆಯ್ಕೆಯಾಗಿದ್ದು ಇವರು ಒಟ್ಟೂ 98 ಮತಗಳನ್ನು ಪಡೆದರೆ. ಇವರ ಪ್ರತಿಸ್ಪರ್ದಿ ಅಕ್ಬರ ಅಲಿ .ಎಂ.ಶೇಖ ಇವರು ಕೇವಲ 9 ಮತಗಳನ್ನು ಪಡೆದಿದ್ದಾರೆ.

ತಾಮೀರ್ ಬ್ಯಾಂಕ್ ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಸಮಾಜ ಸೇವಕ ಮತ್ತು ಯಲ್ಲಾಪುರದ ಜನಪ್ರಿಯ ವ್ಯಕ್ತಿಯಾಗಿದ್ದ ದಿವಂಗತ ಮಹಮ್ಮದ್ ಗೌಸ್ ಅವರು ಸಹ ಇದೇ ಸಂಸ್ಥೆಯ ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಮಗನಾದ ಅಕ್ತರ್ ಅಲಿ ಶೇಖ್ ಸಮಾಜ ಮುಖಿ ವ್ಯಕ್ತಿತ್ವ ಹೊಂದಿದವರಾಗಿದ್ದು ಸ್ನೇಹ ಜೀವಿ. ಪ್ರತಿಷ್ಠಿತ ಯಲ್ಲಾಪುರ ಲಯನ್ಸ್ ಕ್ಲಬ್ ಕ್ರಿಯಾಶೀಲ ಸಂಘಟಕರಾಗಿದ್ದಾರೆ.
ಒಟ್ಟಿನಲ್ಲಿ ಉತ್ತಮ ಆರ್ಥಿಕ ಪ್ರಜ್ಞೆ ಮತ್ತು ಸಂಘಟನ ಶಕ್ತಿ ಇರುವ ಉತ್ತಮ ವ್ಯಕ್ತಿ ಸಂಸ್ಥೆಯ ನಿರ್ದೇಶಕನಾಗಿ ಆಯ್ಕೆಯಾಗಿರುವುದು ಸಮುದಾಯದಲ್ಲಿ ಸಂತಸ ತಂದಿದೆ.
ಅಕ್ತರ್ ಆಯ್ಕೆಗೆ ಹಲವು ಸಂಘ ಸಂಸ್ಥೆಗಳು, ಪ್ರಮುಖರು, ಲಯನ್ಸ್ ಕ್ಲಬ್ ಸಂಸ್ಥೆ ಅಭಿನಂದಿಸಿದ್ದಾರೆ.



Prathidvani Yellapura