
ಪ್ರತಿಧ್ವನಿ ಯಲ್ಲಾಪುರ : 2014 ಮೇ 26 ರಂದು ದೇಶದ ಪ್ರಧಾನಮಂತ್ರಿ ಪದ ಸ್ವೀಕರಿಸಿದ ಮೋದಿಜೀ, ಇಂದು 4399 ದಿನಗಳನ್ನು ಪೂರೈಸಿ, ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ದಾಖಲೆ ಮುರಿದು ಮುಂದೆ ಹೆಜ್ಜೆ ಇಟ್ಟಿದ್ದಾರೆ. ಈ ಹನ್ನೆರಡು ವರ್ಷಗಳ ಅವಧಿಯಲ್ಲಿ ದೇಶ ಅಪರಿಮಿತ ಅಭಿವೃದ್ಧಿ ಸಾಧಿಸಿದೆ.

ಗಡಿಗಳು ಸಧ್ರಡಗೊಂಡಿವೆ. ಸೈನ್ಯದ ವಿಶ್ವಾಸ ಇಮ್ಮಡಿಯಾಗಿದೆ. ಮೋದಿ ಭಾರತ ಈಗ ಮೊದಲಿನಂತಿಲ್ಲ. “ಘುಸಕೆ ಮಾರೇಂಗೆ” ಕೇವಲ ಸ್ಲೋಗನ್ನಲ್ಲ, ಶತ್ರು ರಾಷ್ಟ್ರಗಳಿಗೆ ಮುಟ್ಟಿ ನೋಡಿಕೊಳ್ಳುವಂತ ಏಟು ಬೀಳುತ್ತಿದೆ. ಇಲ್ಲಿಯವರೆಗೆ ನಮ್ಮನ್ನು ಆಟ ಆಡಿಸುತ್ತಿದ್ದ ಅಮೇರಿಕಾ, ರಷ್ಯಾ, ಚೀನಾ, ಜಪಾನ ಮುಂತಾದ ವಿಶ್ವದ ಬಲಾಢ್ಯ ರಾಷ್ಟ್ರಗಳು ಈಗ ಅನವರತ ಮೋದಿ ಸಂಗ ಬಯಸುತ್ತಿವೆ

ಆರ್ಥಿಕವಾಗಿಯೂ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇಂತಹ ಭಾರತವನ್ನು ಸ್ವಾತಂತ್ರ್ಯದ ಶತಾಬ್ದಿ ವರ್ಷ 2047 ರ ವೇಳೆಗೆ, “ವಿಶ್ವಗುರು” ಪಟ್ಟಕ್ಕೆ ಏರಿಸಲು ಗಟ್ಟಿಯಾದ ಅಡಿಪಾಯ ಹಾಕುತ್ತಿರುವ ಮೋದಿಯವರಿಗೆ ಈ ಸಂದರ್ಭದಲ್ಲಿ ಯಶಸ್ಸನ್ನು ಕೋರೋಣ. ಬೆಂಬಲವನ್ನೂ ನೀಡೋಣ ಎಂದು ಹಿರಿಯ ಬಿಜೆಪಿ ಪ್ರಮುಖ ರಾಮುನಾಯ್ಕ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.


Prathidvani Yellapura