Breaking News

ಯಲ್ಲಾಪುರದ ಕಣ್ಣೀಗೆರೆಯಲ್ಲಿ ಯಶಸ್ವಿಯಾದ ” ಆಲೆಮನೆ ಹಬ್ಬ” ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟನೆ..

.

ಪ್ರತಿಧ್ವನಿ ಯಲ್ಲಾಪುರ :  ಅಂದು ಆಲೆಮನೆ ಹೆಸರಿನಲ್ಲಿ ಅಕ್ಕಪಕ್ಕದ ಮನೆಗಳ ರೈತಾಪಿ ವರ್ಗದವರು ಒಂದೆಡೆ ಸೇರಿ ಬೆಲ್ಲ ಮಾಡುವ ಕಾಯಕದಲ್ಲಿ ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕರಿಸುತ್ತಾ ಕಬ್ಬಿನ ಹಾಲನ್ನು ಸವಿಯುತ್ತಿದ್ದರು. ಸಂಭ್ರಮಿಸುತ್ತಿದ್ದರು.  ಗ್ರಾಮೀಣ ಭಾಗದಲ್ಲಿ  ಹಿಂದಿನಕಾಲದ ಸಾಂಪ್ರದಾಯಿಕ ಪದ್ದತಿಗಳು ಇಂದಿಗು ಜೀವಂತವಾಗಿದೆ. ಅದರಲ್ಲಿ ಆಲೆಮನೆ ಹಬ್ಬ ಎಲ್ಲರನ್ನು ಒಂದೆಡೆಗೆ ಸೇರಿಸುತ್ತಾ ರೈತ ಬಾಂಧವ್ಯವನ್ನು ಗಟ್ಟಿಯಾಗಿಸುತ್ತಿದೆ ಇಂತಹ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅಭಿನಂದನಾ‌ನುಡಿಗಳನ್ನಾಡಿದರು.

ಅವರು ಭಾನುವಾರ ಕಣ್ಣಿಗೇರಿಯಲ್ಲಿ ಆಯೋಜಿಸಿದ್ದ ” ಆಲೆಮನೆ ಹಬ್ಬದಲ್ಲಿ ” ಪಾಲ್ಗೊಂಡು ಕಾರ್ಯಕ್ರಮ ವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಈ ಭಾಗದ ಮುಖಂಡ ವಿಜಯ್ ಮಿರಾಶಿ, ಸಾಮಾಜಿಕ ಕಾರ್ಯಕರ್ತ ಗಣಪತಿ ಮುದ್ದೇಪಾಲ್, ಕೈಗಾರಿಕಾ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ದೇಸಾಯಿ ಪ್ರಮುಖರಾದ ಲಾರೆನ್ಸ್ ಸಿದ್ದಿ, ಅಣ್ಣಪ್ಪ ನಾಯ್ಕ, ವಾಸುದೇವ ಮಾಪ್ಸೇಕರ್, ಎಂ.ಡಿ.ಮುಲ್ಲಾ ಇನ್ನಿತರ ಪ್ರಮುಖರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಊರ ನಾಗರಿಕರು ಉಪಸ್ಥಿತರಿದ್ದರು. ಕಬ್ಬಿನ ಹಾಲು ಮತ್ತು ತಿನಿಸುಗಳನ್ನು ಸವಿದು ಶುಭಕೋರಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಬಸ್ ನಿಲ್ದಾಣದ ಎಜುಕೇಶನ್ ಸ್ಪಾಟ್ ನಲ್ಲಿ “ಅಬಾಕಸ್ ಕ್ಲಾಸ್ ಪ್ರಾರಂಭೋತ್ಸವ “

ಪ್ರತಿಧ್ವನಿ ಯಲ್ಲಾಪುರ : ನಿಮ್ಮ ಮಕ್ಕಳ ಬುದ್ದಿ ಚುರುಕಾಗಿಸಲು ಶೈಕ್ಷಣಿಕ ಚಟುವಟಿಕೆಯಲ್ಲಿ ಉನ್ನತ ಸ್ಥಾನಕ್ಕೇರಲು “ಅಬಾಕಸ್” ಸಂಪೂರ್ಣ ಸಹಕಾರಿಯಾಗಿದ್ದು 2026-27 …

Leave a Reply

Your email address will not be published. Required fields are marked *