ಪ್ರತಿಧ್ವನಿ ಯಲ್ಲಾಪುರ (ಬೆಂಗಳೂರು) : ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ನಡೆಯುತ್ತಿರುವ ವಿಧಾನಸಭೆಯ ವಿಶೇಷ ಕಲಾಪದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಮಾತನಾಡಿದರು. ಕಸ್ತೂರಿರಂಗನ್ ವರದಿ ಜಾರಿಯಿಂದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಹಾಗೂ ಜನವಸತಿ ಪ್ರದೇಶಗಳ ಮೇಲೆ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಶಾಸಕರು ಸದನದಲ್ಲಿ ವಿಸ್ತೃತವಾಗಿ ಪ್ರಸ್ತಾಪಿಸಿದರು. ಜಿಲ್ಲೆಯ ಜನರ ಹಿತಾಸಕ್ತಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದರು. ಇದೇ …
Read More »Monthly Archives: September 2026
ಯಲ್ಲಾಪುರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ವಿಶ್ವದರ್ಶನ ಶಿಕ್ಷಣ ಸಮೂಹ, ಯಲ್ಲಾಪುರ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್
ಮನೆಯ ಜವಾಬ್ದಾರಿಗಳ ನಡುವೆ ನಿಮ್ಮ ಕನಸುಗಳು ಮತ್ತು ಕಲಿಕೆಯ ಆಸೆಗಳನ್ನು ಮರೆತುಬಿಡಬೇಕಿಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಹೊಸ ಕೌಶಲ್ಯ ಕಲಿತು ನಿಮ್ಮದೇ ವೃತ್ತಿಯನ್ನು ಮನೆಯಲ್ಲೇ ಕುಳಿತು ರೂಪಿಸಿಕೊಳ್ಳಬಹುದು. 📰 ಸುದ್ದಿ ಬರವಣಿಗೆ✍️ ಲೇಖನ ಮತ್ತು ವಿಷಯ ಬರವಣಿಗೆ🎙️ ವೈಸ್ ಓವರ್ ಆರ್ಟಿಸ್ಟ್🎥 ವಿಡಿಯೊ ಮತ್ತು ಸಂದರ್ಶನ📱 ಸೋಷಿಯಲ್ ಮೀಡಿಯಾ ಮ್ಯಾನೆಜ್ಮೆಂಟ್📝 ಕಂಟೆಂಟ್ & ಸ್ಕ್ರಿಪ್ಟ್ ರೈಟಿಂಗ್🔎 ಸುದ್ದಿ ಸಂಶೋಧನೆ🌐 ಅನುವಾದ📢 ಪತ್ರಿಕಾ ಪ್ರಕಟಣೆ🎬 ವಿಡಿಯೊ ಎಡಿಟಿಂಗ್ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ …
Read More »ಯಲ್ಲಾಪುರ ಬಿಜೆಪಿಯಿಂದ ಪಂಚಾಯತಿ ಚಲೋ ಸರಣಿ ಹೋರಾಟಕ್ಕೆ ಚಾಲನೆ.
ಪ್ರತಿಧ್ವನಿ ಯಲ್ಲಾಪುರ : ಕಳೆದ ಮೂರೂವರೆ ವರ್ಷಗಳಲ್ಲಿ ಭ್ರಷ್ಟ,ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಬಡವರಿಗೆ ಒಂದೇ ಒಂದು ಮನೆ ನಿರ್ಮಿಸಿಕೊಡಲಾಗಲಿಲ್ಲ. ಈಗ ಅದೇ ಸರಕಾರ ಬಡವರು ಅನಿವಾರ್ಯವಾಗಿ ನಿರ್ಮಿಸಿಕೊಂಡ ಮನೆಗಳನ್ನು ನೆಲಸಮ ಮಾಡುವ ಉದ್ದೇಶದಿಂದ ಅರಣ್ಯ,ಸರಕಾರಿ ಮತ್ತು ಗಾಂವಠಾಣ ದಲ್ಲಿ ನಿರ್ಮಿಸಿಕೊಂಡ ಮನೆಗಳಿಂದ ಕರ ವಸೂಲಿ ಸ್ಥಗಿತಗೊಳಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ಸಂಘಟಿತ ಹೋರಾಟ ಮಾಡಿ ನಿಮ್ಮ ಹಕ್ಕಿನ …
Read More »ಯಲ್ಲಾಪುರದ ಮಂಜುನಾಥ ನಗರ ಗಣಪತಿ ದರ್ಶನ ಪಡೆದು ಗೌರವ ಸ್ವೀಕರಿಸಿದ ಶಾಸಕ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮಂಜುನಾಥ ನಗರ ಶ್ರೀ ಸಾರ್ವಜನಿಕ ಗಜಾನನೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗುತ್ತಿದ್ದು ಸೋಮವಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಗಜಮುಖನ ದರ್ಶನ ಪಡೆದು ಸಮಿತಿಯವರು ನೀಡಿದ ಗೌರವ ಸ್ವೀಕರಿಸಿದರು. ವಿಜ್ರಂಭಣೆಯಿಂದ ಜರುಗುತ್ತಿರುವ ಗಣೇಶೋತ್ಸವ ಆಚರಣೆಯಲ್ಲಿ ಹೋಮ, ಹವನ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡೆ ಮತ್ತು ಅನ್ನ ಪ್ರಸಾದ ಸೇವೆಯು ಪ್ರತಿ ವರ್ಷದಂತೆ ಈ ವರ್ಷವು ನಡೆಸಿದ್ದು …
Read More »ಯಲ್ಲಾಪುರ ಉದ್ಯಮನಗರ ಗಣಪನ ದರ್ಶಿಸಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಾಮರ್ಶಿಸಿದ ಶಾಸಕ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಯಲ್ಲಾಪುರದ ಉದ್ಯಮ ನಗರದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ದರ್ಶನ ಪಡೆದು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಭರವಸೆ ನೀಡಿದ್ದಾರೆ. ಯಲ್ಲಾಪುರದ ಉದ್ಯಮ ನಗರದಲ್ಲಿ ಕಳೆದ ಮೂರು ದಶಕಗಳಿಂದ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದೆ. ಉದ್ಯಮ ನಗರದ ಯುವಕರೆಲ್ಲರೂ ಸೇರಿ ಒಗ್ಗಟ್ಟಿನಿಂದ ಇಲ್ಲಿ ಗಣೇಶ ಉತ್ಸವ ನಡೆಸುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಪ್ರತಿ ವರ್ಷದ ಹಾಗೇ …
Read More »ದಲಿತ ಸಂಘಟನೆಗಳ ಪ್ರತಿಭಟನೆ, ಹೋರಾಟವನ್ನೆ ಅಪಹಾಸ್ಯ ಮಾಡಿ ನಾಲಿಗೆ ಹರಿಬಿಟ್ಟ ಮಾಜಿ ಸಂಸದ ಅ,ಪ್ರತಾಪ ಸಿಂಹ – ಪ್ರತಿಕ್ರಿಯಿಸದ ಯಲ್ಲಾಪುರ ದಲಿತ ಸಂಘಟನೆಗಳು!!!
ಪ್ರತಿಧ್ವನಿ ಯಲ್ಲಾಪುರ : ಇತ್ತೀಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ನಾಲಿಗೆ ಹರಿ ಬಿಟ್ಟು. ದಲಿತ ಸಂಘಟನೆಗಳ ಪ್ರತಿಭಟನೆ ಮತ್ತು ಹೋರಾಟಗಳನ್ನು ಅಪಹಾಸ್ಯ ಮಾಡಿದ್ದು ನೀಲಿ ಶಾಲುಗಳನ್ನು ಹಾಕಿಕೊಂಡು ಬೇರೆಬೇರೆ ಉದ್ದೇಶಕ್ಕೆ ಬರುತ್ತೀರ ಎಂಬ ಅಸಂಬದ್ದ ಮಾತುಗಳನ್ನು ಮಾದ್ಯಮಗಳ ಮುಂದೆ ಹೇಳಿದ್ದು ಮಾಜಿ ಸಂಸದರಾದವರಿಗೆ ಶೋಭೆ ತರುವಂತದ್ದಲ್ಲ. ಅ,ಪ್ರತಾಪ ಸಿಂಹ ಮೊದಲು ಅಂಬೇಡ್ಕರ್ ಅವರನ್ನು ಸಂಪೂರ್ಣ ಓದಲಿ ಕೆಸರಿ ತ್ಯಾಗ ಮತ್ತು ಶೌರ್ಯದ ಸಂಕೇತವಾದರೆ ನೀಲಿ ಸಮಾನತೆಯ ಸಂಕೇತವಾಗಿದೆ. ಯಾವುದೆ …
Read More »ಭಕ್ತಿಯೊಂದಿಗೆ ಜಾಗೃತಿ ಅರಣ್ಯ ಇಲಾಖೆ ಆವರಣದ ಗಣಪನ ಅರ್ಥಪೂರ್ಣ ಆಚರಣೆ..
ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷದಂತೆ ಈ ವರ್ಷವು ಅರಣ್ಯ ಇಲಾಖೆ ಆವರಣದಲ್ಲಿ ಪರಿಸರ ಸ್ನೇಹಿ ಮತ್ತು ಪರಿಸರ ಜಾಗೃತಿ ಗಣಪನನ್ನು ಪ್ರತಿಷ್ಟಾಪಿಸಿ ಆರಾಧಿಸುತ್ತಿದ್ದು ಭಕ್ತಿಯೊಂದಿಗೆ ಜಾಗೃತಿ ಮೂಡಿಸುತ್ತಿರುವ ಗಣಪನನ್ನು ಕಾಣಲು ಯಲ್ಲಾಪುರ ಪಟ್ಟಣ ಮತ್ತು ಅಕ್ಕಪಕ್ಕದ ಹಳ್ಳಿಗಳಿಂದಲು ಭಕ್ತರು ಆಗಮಿಸಿ ಗಣಪನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಗಜಾನನೋತ್ಸವ ಸಮಿತಿ ಯಲ್ಲಾಪುರ ವತಿಯಿಂದ ಸತತವಾಗಿ ಐದು ದಿನಗಳ ಕಾಲ” ಮಾನವ-ವನ್ಯಜೀವಿ ಸಂಘರ್ಷ ತಡೆಯೋಣ,ಸಹಬಾಳ್ವೆಯ ಭವಿಷ್ಯ ಬಾಳೋಣ “ -ಎಂಬ ಧ್ಯೇಯ …
Read More »ಸಿದ್ದಿ ಜನಾಂಗದ ಹಿತರಕ್ಷಣೆಗೆ ಸರ್ಕಾರದ ಐತಿಹಾಸಿಕ ನಿರ್ಧಾರ – ಸಮುದಾಯದ ಪರವಾಗಿ ಕೃತಜ್ಞತೆಗಳು – ರಾಮನಾಥ ಸಿದ್ದಿ,
ಪ್ರತಿಧ್ವನಿ ಯಲ್ಲಾಪುರ : ಬಹು ದೀರ್ಘಕಾಲದಿಂದ ಬೇಡಿಕೆ ಇಡುತ್ತಲೆ ಬಂದಿದ್ದ ಅರಣ್ಯ ಇಲಾಖೆಯಲ್ಲಿನ ಗಸ್ತು ಅರಣ್ಯ ಪಾಲಕ ಮತ್ತು ಅರಣ್ಯ ವೀಕ್ಷಕ ಹುದ್ದೆಗಳಲ್ಲಿ ಸಿದ್ದಿ ಬುಡಕಟ್ಟು ಜನಾಂಗದ ಯುವಕರಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಕುರಿತು ರಾಜ್ಯದ ಕಾಂಗ್ರೆಸ್ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತಂದು ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ದಿಟ್ಟ ನಿರ್ಧಾರಕ್ಕೆ ಸಿದ್ದಿ ಸಮುದಾಯದವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ದಕ್ಷಿಣ …
Read More »ತಾಲೂಕು ಮಟ್ಟದ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುವ ಮೂಲಕ ಅವರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ, ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವ ಮನೋಭಾವ, ಶಿಸ್ತು, ಸಮಯಪಾಲನೆ ಹಾಗೂ ತಂಡದ ಸ್ಫೂರ್ತಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಶನಿವಾರ ಪಟ್ಟಣದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ …
Read More »ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ತಾಲೂಕಾ ಘಟಕದ ವತಿಯಿಂದ ನಾಲ್ಕನೇಯ ವರ್ಷದ ಜಿಲ್ಲಾ ಮಟ್ಟದ ಓಪನ್ ರ್ಯಾಪಿಡ್ ಚೆಸ್ ಪಂದ್ಯಾವಳಿ.
ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ತಾಲೂಕಾ ಘಟಕದ ವತಿಯಿಂದ ನಾಲ್ಕನೇಯ ವರ್ಷದ ಜಿಲ್ಲಾ ಮಟ್ಟದ ಓಪನ್ ರ್ಯಾಪಿಡ್ ಜೆಸ್ ಪಂದ್ಯಾವಳಿಯನ್ನು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಅಕ್ಟೋಬರ್ 4ರಂದು ಹಮ್ಮಿಕೊಂಡಿದೆ ಎಂದು ಸಂಘದ ತಾಲೂಕಾ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ತಿಳಿಸಿದ್ದಾರೆ. ಪಂದ್ಯಾವಳಿಯ ಮಾಹಿತಿ :- 12 ವರ್ಷದ ಒಳಗೆ,16 ವರ್ಷದ ಒಳಗೆ, ಹಾಗೂ16 ವರ್ಷದ ಮೇಲ್ಪಟ್ಟು ಹೀಗೆ ಮೂರು ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದ್ದು,53 …
Read More »
Prathidvani Yellapura