
ಪ್ರತಿಧ್ವನಿ ಯಲ್ಲಾಪುರ : ಇತ್ತೀಚೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ನಾಲಿಗೆ ಹರಿ ಬಿಟ್ಟು. ದಲಿತ ಸಂಘಟನೆಗಳ ಪ್ರತಿಭಟನೆ ಮತ್ತು ಹೋರಾಟಗಳನ್ನು ಅಪಹಾಸ್ಯ ಮಾಡಿದ್ದು ನೀಲಿ ಶಾಲುಗಳನ್ನು ಹಾಕಿಕೊಂಡು ಬೇರೆಬೇರೆ ಉದ್ದೇಶಕ್ಕೆ ಬರುತ್ತೀರ ಎಂಬ ಅಸಂಬದ್ದ ಮಾತುಗಳನ್ನು ಮಾದ್ಯಮಗಳ ಮುಂದೆ ಹೇಳಿದ್ದು ಮಾಜಿ ಸಂಸದರಾದವರಿಗೆ ಶೋಭೆ ತರುವಂತದ್ದಲ್ಲ.

ಅ,ಪ್ರತಾಪ ಸಿಂಹ ಮೊದಲು ಅಂಬೇಡ್ಕರ್ ಅವರನ್ನು ಸಂಪೂರ್ಣ ಓದಲಿ
ಕೆಸರಿ ತ್ಯಾಗ ಮತ್ತು ಶೌರ್ಯದ ಸಂಕೇತವಾದರೆ ನೀಲಿ ಸಮಾನತೆಯ ಸಂಕೇತವಾಗಿದೆ. ಯಾವುದೆ ಪ್ರತಿಭಟನೆ ಹೋರಾಟಗಳು ಟೈಮ್ ಪಾಸ್ ಗಾಗಿ ಅಥವ ದುರುದ್ದೇಶಕ್ಕಾಗಿ ಮಾಡುವುದಲ್ಲ ಅದು ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕು, ಹೋರಾಟ ಪ್ರತಿಭಟನೆ ಮುಖೇನ ತಮ್ಮ ಸದುದ್ದೇಶ ಈಡೇರಿಸಿ ಕೊಳ್ಳುವ ಸಾತ್ವಿಕ ನಡೆಯಾಗಿದೆ. ಇದು ಸಹ ಪ್ರಜೆಗಳ ಸಂವಿದಾನಬದ್ದ ಸ್ವಾತಂತ್ರ್ಯ ಆಗಿದೆ, ದಲಿತ ಹೋರಾಟಗಳನ್ನು ಮತ್ತು ನೀಲಿ ಶಲ್ಯಗಳ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಸದ ಅ,ಪ್ರತಾಪ ಸಿಂಹ ಮೊದಲು ಅಂಬೇಡ್ಕರ್ ಅವರನ್ನು ಸಂಪೂರ್ಣ ಓದಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ಭಾರತದಲ್ಲಿ ಸಂವಿಧಾನ ಮೀರಿದ್ದು ಯಾವುದು ಇಲ್ಲ ಅದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ.
ಅ,ಪ್ರತಾಪ ಸಿಂಹ ಹೇಳಿಕೆಗೆ ಯಾವ ಪ್ರತಿಕ್ರಿಯೆ ನೀಡದ ಯಲ್ಲಾಪುರ ದಲಿತ ಸಂಘಟನೆಗಳು
ರಾಜ್ಯದಾದ್ಯಂತ ಪ್ರತಾಪ್ ಸಿಂಹನ ವಿರುದ್ದ ವಿವಿಧ ಸಂಘಟನೆಗಳು ಮುಖಂಡರು ಬುಗಿಲೆದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಯಲ್ಲಾಪುರ ತಾಲೂಕಿನಲ್ಲಿ ಮಾತ್ರ ದಲಿತ ಸಂಘಟನೆಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಕನಿಷ್ಟ ಆತನ ಹೇಳಿಕೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ,ತಾಲೂಕು ಆಡಳಿತದ ಮುಖಾಂತರ ಮನವಿ ಸಲ್ಲಿಸಿ ಕ್ಷಮೆ ಯಾಚಿಸುವಂತೆ ಕೋರಬಹುದಾಗಿತ್ತು ಎಂಬುದು ಹಲವರ ಅನಿಸಿಕೆಯಾಗಿದೆ.
ಅ,ಪ್ರತಾಪ ಸಿಂಹ ಹೇಳಿದ್ದನ್ನು ಕೇಳಿಕೊಂಡು,ನೋಡಿಕೊಂಡು ಕುಳಿತುಕೊಂಡಿರುವ ದಲಿತ ಸಂಘಟನೆಗಳ ನಡೆ ಸಮಾಜಕ್ಕೆ ಆತ ನೀಡಿದ ಹೇಳಿಕೆ ದಿಟವೆಂದೇ ಭಾವಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಎಲ್ಲಾ ದಲಿತ ಸಂಘಟನೆಗಳು ತಮ್ಮ ತಮ್ಮ ನಡುವಿನ ಬಿನ್ನಾಭಿಪ್ರಾಯ ಬಿಟ್ಟು ಅ ಪ್ರತಾಪ ಸಿಂಹ ನ ಹೇಳಿಕೆಗೆ ತಕ್ಕ ಉತ್ತರ ಕೊಡಬೇಕಿದೆ ಎಂಬುದು ಹಲವು ದಲಿತರ ಅಭಿಪ್ರಾಯವಾಗಿದೆ.
ಇದೊಂದು ದಲಿತರ ವಿರುದ್ಧದ ಟೂಲ್ ಕಿಟ್ ಹುನ್ನಾರ!!
ಒಂದು ಹಂತದಲ್ಲಿ ಇತ್ತೀಚೆಗೆ ದಲಿತ ಸಂಘಟನೆಗಳ ಒಳಜಗಳ ಒಳಮೀಸಲಾತಿ ಸಮಸ್ಯೆ ಎಲ್ಲವನ್ನು ಬಂಡವಾಳ ಮಾಡಿಕೊಂಡ ಕೆಲ ಪಟ್ಟಭದ್ರರು ದಲಿತ ಸಂಘಟನೆಗಳ ಬಲವನ್ನು ಕುಗ್ಗಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆ. ತಾಜಾ ಉದಾಹರಣೆ ಎಂಬಂತೆ ರಾಜ್ಯಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸುವ.ರೀತಿ ಕೆಟ್ಟದಾಗಿ ಸಂವಿದಾನ ಶಿಲ್ಪಿ ಡಾ,ಬಾಬಾ ಸಾಹೆಬ್ ಅಂಬೇಡ್ಕರ್ ವಿರುದ್ದ ಕೆ.ಆರ್.ಪೇಟೆಯ ಅತಿ ಬುದ್ದಿವಂತ ವಿದ್ಯಾವಂತ ವೇದಮೂರ್ತಿ ಎಂಬಾತ ಬಾಯಿಗೆ ಬಂದಂತೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಬುದ್ದ,ಬಸವ,ಅಂಬೇಡ್ಕರ್ ಅವರ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾನೆ, ಇನ್ನಾದರು ದಲಿತ ಸಂಘಟನೆಗಳು ಎಚ್ಚೆತ್ತು ಸಮಾಜಕ್ಕೆ ಸರಿಯಾದ ಮಾಹಿತಿ ರವಾನಿಸುವ ಕಾರ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ದಲಿತ ಪ್ರಮುಖರು ಎಲ್ಲಾ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕಿದೆ. ಇಲ್ಲವಾದಲಿ ಇಂತಹ ನೂರಾರು ಅ,ಪ್ರತಾಪ ಸಿಂಹ, ವೇದಮೂರ್ತಿ ಗಳ ವಾಗ್ದಾಳಿ ಹೆಚ್ಚಾಗಲಿದೆ. ಎಚ್ಚರ.. ಎಚ್ಚರ.. ಎಚ್ಚರ













Prathidvani Yellapura