Breaking News

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ತಾಲೂಕಾ ಘಟಕದ ವತಿಯಿಂದ ನಾಲ್ಕನೇಯ ವರ್ಷದ ಜಿಲ್ಲಾ ಮಟ್ಟದ ಓಪನ್ ರ‍್ಯಾಪಿಡ್ ಚೆಸ್ ಪಂದ್ಯಾವಳಿ.


ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ತಾಲೂಕಾ ಘಟಕದ ವತಿಯಿಂದ ನಾಲ್ಕನೇಯ ವರ್ಷದ ಜಿಲ್ಲಾ ಮಟ್ಟದ ಓಪನ್ ರ್ಯಾಪಿಡ್ ಜೆಸ್ ಪಂದ್ಯಾವಳಿಯನ್ನು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಅಕ್ಟೋಬರ್ 4ರಂದು ಹಮ್ಮಿಕೊಂಡಿದೆ ಎಂದು ಸಂಘದ ತಾಲೂಕಾ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ತಿಳಿಸಿದ್ದಾರೆ.

ಪಂದ್ಯಾವಳಿಯ ಮಾಹಿತಿ :-  

12 ವರ್ಷದ ಒಳಗೆ,16 ವರ್ಷದ ಒಳಗೆ, ಹಾಗೂ16 ವರ್ಷದ ಮೇಲ್ಪಟ್ಟು ಹೀಗೆ ಮೂರು ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದ್ದು,53 ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಗುತ್ತದೆ. 8 ವರ್ಷ ವಯೋಮಿತಿ ಯ ಬಾಲಕರಿಗೆ 5 ಟ್ರೋಪಿ,ಬಾಲಕಿಯರಿಗೆ 5 ಟ್ರೋಪಿ,12 ವರ್ಷ ವಯೋಮಿತಿಯ ಬಾಲಕರಿಗೆ 5 ಟ್ರೋಪಿ,ಬಾಲಕಿಯರಿಗೆ 5 ಟ್ರೋಪಿ,14 ವರ್ಷ ವಯೋಮಿತಿ ಯ ಬಾಲಕರಿಗೆ
5ಟ್ರೋಪಿ, ಬಾಲಕಿಯರಿಗೆ 5 ಟ್ರೋಪಿ,
16 ವರ್ಷ ವಯೋಮಿತಿ ಯವರಿಗೆ 3 ಟ್ರೋಪಿ,
16 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಬಹುಮಾನ
2000+ಟ್ರೋಪಿ, ದ್ವಿತೀಯ ಬಹುಮಾನ
1500+ಟ್ರೋಪಿ,ತೃತೀಯ ಬಹುಮಾನ
1000+ಟ್ರೋಪಿ, ನಾಲ್ಕನೇ ಬಹುಮಾನ
750+ಟ್ರೋಪಿ, ಐದನೆಯ ಬಹುಮಾನ 500+ ಟ್ರೋಪಿ,
8 ವರ್ಷ ವಯೋಮಿತಿ ಯ ಉತ್ತಮ ಯಲ್ಲಾಪುರ ಟ್ರೋಪಿ,
10 ವರ್ಷ ವಯೋಮಿತಿಯ ಉತ್ತಮ ಯಲ್ಲಾಪುರ ಟ್ರೋಪಿ,
12ವರ್ಷ ವಯೋಮಿತಿಯ ಉತ್ತಮ ಯಲ್ಲಾಪುರ ಟ್ರೋಪಿ,
14 ವರ್ಷ ವಯೋಮಿತಿಯ ಉತ್ತಮ ಯಲ್ಲಾಪುರ ಬಹುಮಾನ ‌ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಮೆಡೆಲ್ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಪಂದ್ಯಾವಳಿಯ ಮಾಹಿತಿ ನೀಡಿದರು.

ಪ್ರವೇಶ ಶುಲ್ಕ ಮಾಹಿತಿ

ಮೊದಲ 150ಎಂಟ್ರಿಗಳಿಗೆ ಆದ್ಯತೆ ನೀಡಲಾಗುತ್ತದೆ.  ⏺ ಸೆಪ್ಟೆಂಬರ್‌ 28 ನೊಂದಣಿಗೆ ಕೊನೆಯ ದಿನಾಂಕ  ⏺350ರೂ ಪ್ರವೇಶ ಶುಲ್ಕ ವಾಗಿದೆ.
⏺ ಅದರ ನಂತರ ನೊಂದಣಿಗೆ 400 ರೂ ಶುಲ್ಕ ನೀಡ ಬೇಕಾಗುತ್ತದೆ. 
⏺ ಪಂದ್ಯಾವಳಿಯ ದಿನ ನೊಂದಣಿಗೆ ಅವಕಾಶ ಇಲ್ಲ.
⏺ ಪಂದ್ಯವು ಬೆಳಿಗ್ಗೆ 9.30ಕ್ಕೆ ಪ್ರಾರಂಭ ಆಗುತ್ತದೆ
ನೊಂದಣಿಗಾಗಿ ಆನಂದಸ್ವಾಮಿ 8762480128
ಸಂಪರ್ಕಿಸ ಬಹುದು.

.


        

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ “ಯೋಗಾಸನ ಸ್ಪರ್ಧೆ”ಯಲ್ಲಿ ಆಸ್ನಾ ಮತ್ತು ಶ್ರೀ ಲಕ್ಷ್ಮೀ ಪ್ರಥಮ.

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ‘ ಯೋಗ ಆಸನ ” ಸ್ಪರ್ಧೆಯಲ್ಲಿ ವಜ್ರಳ್ಳಿ ಶಾಲೆಯ ವಿದ್ಯಾರ್ಥಿನಿಯರಾದ …

Leave a Reply

Your email address will not be published. Required fields are marked *