
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ‘ ಯೋಗ ಆಸನ ” ಸ್ಪರ್ಧೆಯಲ್ಲಿ ವಜ್ರಳ್ಳಿ ಶಾಲೆಯ ವಿದ್ಯಾರ್ಥಿನಿಯರಾದ ಆಸ್ನಾ ಹುಸೇನ್ ಮುಲ್ಲಾ ಮತ್ತು ಶ್ರೀಲಕ್ಷ್ಮೀ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಈ ಸಾಧನೆಗೆ ವಿಶೇಷವಾಗಿ ಮೊಹರಂ ಕಮಿಟಿ ಕಾರ್ಯದರ್ಶಿ ಜಾಕಿರ್ ಮುಲ್ಲಾ ವಜ್ರಳ್ಳಿ ಹಾಗು ಶಾಲಾ ಆಡಳಿತ ಮಂಡಳಿ, ಭೋಧಕ ಭೋದಕೇತರ ವರ್ಗ, ಊರ ನಾಗರಿಕರು ಶಾಲಾ ವಿದ್ಯಾರ್ಥಿಗಳು, ಪೋಷಕರು ಸಂತಸದಿಂದ ಅಭಿನಂದನೆ ಸಲ್ಲುಸಿದ್ದಾರೆ.

ಯೋಗಾಸನ ಎಂಬುದು ಒಂದು ಹಂತದಲ್ಲಿ ಪುರಾತನ ಪರಂಪರೆ ಹೊಂದಿದ ಶಾಸ್ತ್ರೋಕ್ತವಾಗಿ ಕಲಿಯಬೇಕಾದ ವಿದ್ಯೆ, ಅದನ್ನು ಸವಾಲಾಗಿ ಸ್ವೀಕರಿಸಿದ ಮುಸ್ಲಿಂ ಸಮುದಾಯದ ಕುವರಿ ಆಸ್ನಾ ಹುಸೇನ್ ಮುಲ್ಲಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಕಠಿಣ ಪರಿಶ್ರಮದಿಂದ ಮಾಡಿದ ನಿಜವಾದ ಸಾಧನೆಯಾಗಿದೆ ಎನ್ನುತ್ತಾರೆ ಹಿರಿಯ ಯೋಗಾಸನ ಪಟುಗಳು.











Prathidvani Yellapura