
ಪ್ರತಿಧ್ವನಿ ಯಲ್ಲಾಪುರ : ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಕಾಯ,ವಾಚ,ಮನಸಾ ಪರಿಶುದ್ದರಾಗಿ ಆತ್ಮ ಒಪ್ಪುವಂತೆ ಸೇವೆ ಸಲ್ಲಿಸ ಬೇಕಿದೆ, ಸರ್ಕಾರ ಕಾಲಕಾಲಕ್ಕೆ ಆರೋಗ್ಯ ವಿಚಾರದಲ್ಲಿ ಇಲಾಖೆಯ ಮೂಲಕ ಹಮ್ಮಿಕೊಳ್ಳುವ ಜನಜಾಗೃತಿ ಮತ್ತು ಜನೋಪಯೋಗಿ ಆರೋಗ್ಯ ಕಾರ್ಯಕ್ರಮಗಳನ್ನು ಕ್ರಿಯಾಶೀಲವಾಗಿ ಅನುಷ್ಟಾನಕ್ಕೆ ತರಬೇಕಿದ್ದು ಎಲ್ಲರು ಸಂಘಟಿತರಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಉಪನಿರ್ದೇಶಕರು ರೇಡಿಯೋಲಜಿ ಸೇಫ್ಟಿ ಕಾರ್ಯಕ್ರಮ ಮತ್ತು ಶಿರಸಿ ವಿಭಾಗ ನೋಡಲ್ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಡಾ.ರಾಜಕುಮಾರ ಹೇಳಿದರು.

ಅವರು ಸೆ,18 ರಂದು ಯಲ್ಲಾಪುರದ ತಾಲೂಕ ಪಂಚಾಯತ್ ಸಭಾ ಭವನದಲ್ಲಿ ಹಮ್ಮಿಕೊಂಡ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ರಾಷ್ಟ್ರೀಯ ಅರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಡಾ. ಸಂಜಯ್ ದೊಡ್ಮನಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಪಸ್ಥಿತರಿದ್ದರು, ಉತ್ತರಕನ್ನಡ, ಜಿಲ್ಲೆಯ ವಿವಿಧ ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಮತ್ತು ಜಿಲ್ಲಾ ಮೇಲ್ವಿಚಾರಕರು, ಎಲ್ಲಾ ತಾಲೂಕ ಅರೋಗ್ಯ ಅಧಿಕಾರಿಗಳು, ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ತಾಲೂಕ ಮಟ್ಟದ ಮೇಲ್ವಿಚಾರಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಿರಿಯ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸೇರಿ ಒಟ್ಟು 140 ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿ ಪ್ರಗತಿ ಪರಿಶೀಲನಾ ಸಭೆಯನ್ನು ಯಶಶ್ವಿಗೊಳಿಸಿದರು.

ಸಭೆಯ ನಂತರ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಹಿರಿಯ ಅಧಿಕಾರಿ ಡಾ.ರಾಜಕುಮಾರ್ ಆಸ್ಪತ್ರೆ ವಾತಾವರಣ, ಶುಚಿತ್ವ,ಸಿಬ್ಬಂದಿಗಳ ಶಿಸ್ತು ಮತ್ತು ವೈದ್ಯರ ಸಾರ್ವಜನಿಕರೊಂದಿಗಿನ ಒಡನಾಟ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲೆ ಅತ್ಯಂತ ಸ್ವಚ್ಚತೆ ಹೊಂದಿರುವ ಆಸ್ಪತ್ರೆಗಳ ಸಾಲಿಗೆ ಯಲ್ಲಾಪುರ ಆಸ್ಪತ್ರಯು ಸೇರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಸ್ರೀ ರೋಗ ತಜ್ಞರು ಮತ್ತು ಅನಸ್ತೇಶಿಯ ತಜ್ಞರ ಕೊರತೆಯ ಕುರಿತು ಆಸ್ಪತ್ರೆ ವ್ಯದ್ಯಾಧಿಕಾರಿ ಡಾ,ನರೇಂದ್ರ ಪವಾರ್ ಅಧಿಕಾರಿಗಳ ಗಮನಕ್ಕೆ ತಂದರು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರವಾಗಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಅರ್. ಸಿ. ಎಚ್ ಅಧಿಕಾರಿಗಳಾದ ಡಾ.ನಟರಾಜ ಕೆ. ಸ್ವಾಗತಿಸಿದರು ಹಾಗೂ ಯಲ್ಲಾಪುರ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ನರೇಂದ್ರ ಪವಾರ್ ವಂದಿಸಿದರು.











Prathidvani Yellapura