
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮಂಜುನಾಥ ನಗರ ಶ್ರೀ ಸಾರ್ವಜನಿಕ ಗಜಾನನೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗುತ್ತಿದ್ದು ಸೋಮವಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಗಜಮುಖನ ದರ್ಶನ ಪಡೆದು ಸಮಿತಿಯವರು ನೀಡಿದ ಗೌರವ ಸ್ವೀಕರಿಸಿದರು.

ವಿಜ್ರಂಭಣೆಯಿಂದ ಜರುಗುತ್ತಿರುವ ಗಣೇಶೋತ್ಸವ ಆಚರಣೆಯಲ್ಲಿ ಹೋಮ, ಹವನ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡೆ ಮತ್ತು ಅನ್ನ ಪ್ರಸಾದ ಸೇವೆಯು ಪ್ರತಿ ವರ್ಷದಂತೆ ಈ ವರ್ಷವು ನಡೆಸಿದ್ದು ಮಂಗಳವಾರ ಗಣೇಶನ ವಿಸರ್ಜನ ಕಸರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯವರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪ್ರಮುಖ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸತೀಶ್ ಶಿವಾನಂದ ನಾಯ್ಕ, ಪತ್ನಿ ಅಕ್ಷತಾ ಸತೀಶ್ ನಾಯ್ಕ್, ಪುತ್ರಿ ಶೇಜಲ್ ಸತೀಶ್ ನಾಯ್ಕ್, ಸಮಿತಿ ಅಧ್ಯಕ್ಷ ಚೇತನ್, ಹಿರಿಯರಾದ ದುರ್ಗಪ್ಪ ಸಿಂಗನಳ್ಳಿ, ಹಾಗು ಲೋಹಿತ್ ಸಿಂಗನಳ್ಳಿ, ರಾಮ ಮರಾಠಿ, ನಾಗಪ್ಪ ಕೊಟಾರಕರ್,ರೇಣುಕಾ ಫಿರೋಜಿ, ಸಚಿನ್ ಫರ್ನಾಂಡೀಸ್ ಹಾಗು ಸ್ಥಳೀಯ ಯುವಕರು ನಾಗರಿಕರು ಉಪಸ್ಥಿತರಿದ್ದು ಶಾಸಕರನ್ನು ಗೌರವಿಸಿದರು.










Prathidvani Yellapura