Breaking News

ರಂಗ ಸಹ್ಯಾದ್ರಿ ಅಡಿಯಲ್ಲಿ 19 ನೆ ವರ್ಷದ ಬೇಸಿಗೆ ಶಿಭಿರ – ಒಂದು ತಿಂಗಳು ಸಂಸ್ಕಾರಯುತ ಜೀವನ ಕಲಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಅಡಿಯಲ್ಲಿ ಕಳೆದ 18 ವರ್ಷಗಳಿಂದ ಸಂಸ್ಕಾರಯುತ ಮತ್ತು ಸಾತ್ವಿಕವಾದ ಬೇಸಿಗೆ ಶಿಭಿರ ನಡೆಸುತ್ತಿದ್ದು ಈ ವರ್ಷವು ಏಪ್ರಿಲ್‌‌11 ರಿಂದ 19 ನೆ ವರ್ಷದ ಒಂದು ತಿಂಗಳ  ಮಕ್ಕಳ  ಬೇಸಿಗೆ ಶಿಭಿರ ನಡೆಸಲಾಗುತ್ತಿದ್ದು ಸರ್ವರು ಸಹಕರಿಸಬೇಕಿದೆ ಎಂದು ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಹೇಳಿದರು.


    ಅವರು ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಬೇಸಿಗೆ ಶಿಭಿರದ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
   ಶಾಲಾ ಸಂದರ್ಭದಲ್ಲಿ ಮಕ್ಕಳಿಗೆ  ಪಠ್ಯದ ವಿದ್ಯೆ ಕಲಿಸಲಾಗುತ್ತದೆ. ನಮ್ಮ ಬೇಸಿಗೆ ಶಿಭಿರದಲ್ಲಿ ಜೀವನ ಸಾಕ್ಷಾತ್ಕಾರಕ್ಕೆ ಬೇಕಾದ ಎಲ್ಲ ಮೌಲ್ಯಗಳನ್ನು ಕಲಿಸಲಾಗುತ್ತದೆ.ಭಗವದ್ಗೀತೆ, ಯೋಗ,ಸಂಗೀತ, ನೃತ್ಯ,ನಾಟಕ, ಚಿತ್ರಕಲೆ,ಕರಾಟೆ, ಕ್ರಾಫ್ಟ್, ಕಂಪ್ಯೂಟರ್ ಕಲಿಕೆ, ಇನ್ನಿತರ ವಿಶೇಷ ಕಲೆಗಳನ್ನು ಕಲಿಸಲಾಗುತ್ತದೆ ಎಂದು ವಿವರಿಸಿದರು.
    ಹೆಚ್ಚಿನ ಮಾಹಿತಿಗಾಗಿ ರಂಗ ಸಹ್ಯಾದ್ರಿ ಬಳಗದವರನ್ನು ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.
    ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ತಾಂಡುರಾಯನ್, ಸುಮಂಗಲಾ ಜೋಶಿ, ಕರಾಟೆ ಶಿಕ್ಷಕ ಪರಮೇಶ್ವರ ನಾಯ್ಕ್, ಪಾರ್ವತಿ ಕಟ್ಟೀಮನೆ, ಸುಬ್ರಾಯ್ ಇನ್ನಿತರರು ಉಪಸ್ಥಿತರಿದ್ದರು.

ಶಿಭಿರಕ್ಕೆ ಸೇರಲು ಹೆಸರು ನೊಂದಾಯಿಸಲು ಮಾಹಿತಿ ಪಡೆಯಲು ಕೆಳಗೆ ತೋರಿಸಿದ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *