




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ತಾಲೂಕಿನ 6 ಕಾಲೇಜುಗಳ ಪೈಕಿ ಅತ್ಯುತ್ತಮ ಫಲಿತಾಂಶ ಪಡೆದು ಸಂಸ್ಕಾರವಂತ ಯಶಸ್ವಿ ಉತ್ತಮ ದರ್ಜೆಯ ಶಿಕ್ಷಣಕ್ಕೆ ವೈ.ಟಿ.ಎಸ್.ಎಸ್ ಉತ್ತಮ ಆಯ್ಕೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

7 ದಶಕಗಳ ಸುದೀರ್ಘ ಇತಿಹಾಸವಿರುವ ಯಲ್ಲಾಪುರದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆ ರಾಜ್ಯಮಟ್ಟದಲ್ಲೂ ಉತ್ತಮ ಹೆಸರುಗಳಿಸಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ತಾಲೂಕು ಮತ್ತು ಅಕ್ಕಪಕ್ಕದ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿರುವುದಲ್ಲದೇ ಉತ್ತಮ ಸಂಸ್ಕಾರವಂತ ಪ್ರಜೆಗಳಾಗಿ ಮುಂದುವರೆಯುತ್ತಿದ್ದಾರೆ. ಇದಕ್ಕೆಲ್ಲಾ ಸಂಸ್ಥೆಯ ಮಾರ್ಗದರ್ಶನ, ಶಿಕ್ಷಣ ಪ್ರಮುಖ ಅಂಶವಾಗಿದೆ.

ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಆಂಗ್ಲಮಾಧ್ಯಮದಲ್ಲಿ ಬೇಬಿ ಸಿಟಿಂಗ್‌ನಿಂದ ಹಿಡಿದು ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಅದರೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿವೆ.

ಹೊರಬಿದ್ದಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗ 100 ಕ್ಕೆ 100 ಫಲಿತಾಂಶ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ 48 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದಾನೆ. ಕಲಾವಿಭಾಗದಲ್ಲಿ 26 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ 95% ದಾಖಲಾಗಿದೆ.

ನುರಿತ ಶಿಕ್ಷಕರು , ಕ್ರಿಯಾಶೀಲ ಆಡಳಿತ ಮಂಡಳಿ, ಊರ ನಾಗರೀಕರ ಸಂಸ್ಥೆಯ ಮೇಲಿನ ಅಭಿಮಾನ, ಪೋಷಕರ ಸಹಕಾರ , ವಿದ್ಯಾರ್ಥಿಗಳ ನಡವಳಿಕೆ, ರಾಷ್ಟ್ರಭಕ್ತಿ ಮತ್ತು ಸಂಸ್ಕಾರ ಒಳಗೊಂಡಿರುವುದರಿಂದ ವೈ.ಟಿ.ಎಸ್.ಎಸ್ ಇಂದಿಗೂ ಶಿಕ್ಷಣ ಪ್ರೇಮಿಗಳಿಗೆ ಅಚ್ಚುಮೆಚ್ಚು ಶಿಕ್ಷಣ ಸಂಸ್ಥೆಯಾಗಿದೆ.

ದೂರದ ಬೆಟ್ಟ ನುಣ್ಣಗೆ ಎಂಬಂತೆ ಮಂಗಳೂರು, ಬೆಂಗಳೂರು, ಧಾರವಾಡ, ಉಡುಪಿ ಇತರೆ ಕಡೆಗಳಿಗೆ ವಿದ್ಯೆಯನ್ನು ಅರಸಿ ಹೋದವರು ಒಮ್ಮೆ ಯಲ್ಲಾಫುರದ ವೈ.ಟಿ.ಎಸ್.ಎಸ್‌ನತ್ತ ತಿರುಗಿ ನೋಡುವಂತಹ ಫಲಿತಾಂಶ ನೀಡುತ್ತಾ ಬಂದಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ ವೈ.ಟಿ.ಎಸ್.ಎಸ್ ಉತ್ತಮ ಆಯ್ಕೆ ಎಂಬುದು ಪೋಷಕರ ಮತ್ತು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಉತ್ತಮ ಫಲಿತಾಂಶ ಬಂದ ಹಿನ್ನಲೆಯಲ್ಲಿ ತಮ್ಮ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರವೇಶಾತಿ ಪಡೆಯಲು ಪೋಷಕರ ದೃಷ್ಟಿ ವೈ.ಟಿ.ಎಸ್.ಎಸ್‌ನತ್ತ ನೆಟ್ಟಿದ್ದು ಈಗಾಗಲೇ ದೂರವಾಣಿ ಕರೆಗಳ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ನೀವು ಸಹ ತಡಮಾಡದೆ ಹೆಚ್ಚಿನ ಮಾಹಿತಿಯನ್ನು ವೈಟಿಎಸ್ಎಸ್ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿದೆ.


Prathidvani Yellapura