Breaking News

ಯಲ್ಲಾಪುರ ಸರ್ಕಾರಿ ಪದವಿಪೂರ್ವ ಕಾಲೇಜು 91.43% ಫಲಿತಾಂಶ ಪಡೆದಿದೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಲ್ಲಾಪುರ ಸ.ಪ.ಪೂ.ಕಾಲೇಜಿನ 296ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.91.43 ಫಲಿತಾಂಶ ಬಂದಿದೆ.

ಕಲಾ ವಿಭಾಗದ 115 ರಲ್ಲಿ 101 ವಿದ್ಯಾರ್ಥಿಗಳು (87.82%) ; ವಾಣಿಜ್ಯ ವಿಭಾಗದ 127 ರಲ್ಲಿ 114 ವಿದ್ಯಾರ್ಥಿಗಳು (89.76%) ; ವಿಜ್ಞಾನ ವಿಭಾಗದ 42 ರಲ್ಲಿ 41ವಿದ್ಯಾರ್ಥಿಗಳು (96.29%) ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದ ಜನಾಬಾಯಿ ಕೊಕರೆ 574 ಪ್ರಥಮ, ಸುಜಾತಾ ಸಿಂಧೆ 569 ದ್ವಿತೀಯ, ನತಾಲಿಯಾ ಲೊಬೊ 558  ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದ ಸ್ವಾತಿ ನಂದಿ 582 ಪ್ರಥಮ, ಜನ್ನಿ ಹುಂಬೆ 567 ದ್ವಿತೀಯ , ಆಕಾಶ ಪೂಜಾರಿ 554 ತೃತೀಯ ಸ್ಥಾನ ಪಡೆದಿದ್ದಾರೆ .

  ವಿಜ್ಞಾನ ವಿಭಾಗದ ಪ್ರೇಮಾ ಕುಣಬಿ 551 ಪ್ರಥಮ , ಪ್ರತಿಮಾ ಪಟಗಾರ 546 ದ್ವಿತೀಯ  , ವರ್ಷಾ ಮರಾಠಿ 538 ಅಂಕಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಎಸ್.ಟಿ.ವೈದ್ಯ ತಿಳಿಸಿದ್ದು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಮಂಡಳಿ , ಪ್ರಾಚಾರ್ಯರು, ಉಪನ್ಯಾಸಕರು, ಊರ ನಾಗರಿಕರು ಅಭಿನಂದಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *