Breaking News

ರಾಜ್ಯದಲ್ಲಿ ಕುಮಾರಸ್ವಾಮಿ ಆಡಳಿತದ ಸುವರ್ಣಕಾಲ ಮತ್ತೆ ಬರಲಿದೆ- ನಾಗೇಶ್ ನಾಯ್ಕ್ ಕಾಗಲ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ರಾಜ್ಯದ ಬಿಜೆಪಿ ಸರ್ಕಾರದ ನಿರಂತರ ಪ್ರಗತಿ ಶೂನ್ಯತೆಗೆ ಬೇಸತ್ತಿರುವ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ ರಾಜ್ಯದ ಜನತೆ ಹೆಚ್‌ಡಿ.ಕುಮಾರಸ್ವಾಮಿ ಆಡಳಿತದ ಸುವರ್ಣ ಕಾಲ ಮತ್ತೆ ಬಯಸುತ್ತಿದ್ದಾರೆ ಜಾತ್ಯಾತೀತ ಜನತಾ ದಳ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗೇಶ್ ನಾಯ್ಕ ಕಾಗಾಲ ಹೇಳಿದರು.


ಅವರು ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಮೇ ೪ರಂದು ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಿದ್ದರು.


ಯಾವ ಕಾರಣಕ್ಕೂ ಈ ಬಾರಿ ಅತಂತ್ರ ಸರ್ಕಾರದ ರಚನೆ ಜನರ ಬಯಕೆಯಾಗಿಲ್ಲ. ಬದಲಿಗೆ ಜೆಡಿಎಸ್ ಆಡಳಿತದ ಅಪೇಕ್ಷೆ ಜನರದ್ದಾಗಿದೆ ಎಂದ ಅವರು ಚುನಾವಣೆಯ ನಂತರವೂ ಮತದಾರರೊಂದಿಗೆ ಪರಸ್ಪರ ಸಂಬಂಧಗಳನ್ನು ಇರಿಸಿಕೊಳ್ಳುವ ಅಭಿಲಾಷೆ ನಮ್ಮದಾಗಿದ್ದು ಪಕ್ಷದ ಸರ್ವಾಧ್ಯಕ್ಷ ದೇವೇಗೌಡರ ಜನ್ಮದಿನವಾದ ಮೇ 18 ರಂದು ನಮ್ಮ ಪಕ್ಷದ ಸರ್ಕಾರವನ್ನು ರಚಿಸುವುದು ಖಚಿತವಾಗಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದ ಜನರ ಬದುಕು ಬದಲಾಯಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ನಮ್ಮ ಪಕ್ಷ ಚುನಾವಣಾ ಸಿದ್ಧತೆಯ ಹಿನ್ನಲೆಯಲ್ಲಿ ಕ್ಷೇತ್ರದ 41 ಗ್ರಾಮ ಪಂಚಾಯತ ವ್ಯಾಪ್ತಿಯ 231 ಬೂತ್‌ಗಳಲ್ಲಿ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಲಾಗಿದೆ.


ಅಲ್ಲದೇ ಪಕ್ಷದ ಯೋಜನೆಗಳಾದ ಜನತಾ ಜಲಧಾರೆ ರಥಯಾತ್ರೆ ಮತ್ತು ಪಂಚರತ್ನ ಯೋಜನೆಗಳ ವಿಸ್ತಾರವಾದ ಮಾಹಿತಿಗಳನ್ನು ಪ್ರತಿಯೋರ್ವ ಮತದಾರರಿಗೂ ತಲುಪಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಪ್ರಚಾರ ವಾಹನದಲ್ಲಿ ಎಲ್ಲ ಯೋಜನೆಗಳ ವಿಸ್ತಾರವಾದ ಮಾಹಿತಿಗಳನ್ನು ಎಲ್‌ಇಡಿ ಪರದೆಯ ಮೂಲಕ ಪ್ರಚುರ ಪಡಿಸಲಾಗುತ್ತಿದ್ದು ಮನೆಮನೆಗೆ ಎಲ್ಲ ಮಾಹಿತಿಗಳ ಮುದ್ರಿತ ಕರಪತ್ರಗಳನ್ನು ತಲುಪಿಸಲಾಗುತ್ತಿದೆ ಎಂದು ವಿವರಿಸಿದರು.
ಕ್ಷೇತ್ರದಲ್ಲಿರುವ ಸುಮಾರು 1.25ಲಕ್ಷ ಶ್ರಮಿಕ ವರ್ಗದ ಮತದಾರರು ಹಿಂದಿನ ಕುಮಾರಸ್ವಾಮಿ ಆಡಳಿತವನ್ನು ನೆನಪಿಸಿಕೊಂಡು ಅವರ ರಚನಾತ್ಮಕ ಹಾಗೂ ರೈತರ, ಬಡವರ ಪರವಾಗಿ ತೋರಿದ ಕಾಳಜಿಯನ್ನು ಮತ್ತೊಮ್ಮೆ ಬಯಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಈಗಾಗಲೇ ಆಡಳಿತ ನಡೆಸಿರುವ ರಾಷ್ಟ್ರೀಯ ಪಕ್ಷಗಳ ನಿಲುವಿನ ಕುರಿತು ತೀವ್ರ ಅತೃಪ್ತಿ ಮತ್ತು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ಅಲ್ಲದೇ ರಾಜ್ಯದ ವಿಪರೀತ ಭ್ರಷ್ಟಾಚಾರ, ಬೆಲೆ ಏರಿಕೆ ಕುರಿತು ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಆದ್ದರಿಂದ ಪ್ರತಿಯೋರ್ವ ಮತದಾರರು ಈ ಬಾರಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆಡಳಿತಕ್ಕೆ ಬರಲೇಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ಮತ್ತು ಮನೋಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ಮುನಾಫ್ ಮಿರ್ಜಾನಕರ, ತಾಲೂಕಾಧ್ಯಕ್ಷ ಬೆನಿತ್ ಸಿದ್ದಿ, ಪ್ರಮುಖರಾದ ಮಹಾದೇವ ಈಳಿಗೇರ್, ಪ್ರಕಾಶ ಸಿದ್ದಿ, ಜಾನ್ ಬಿಳಕೀಕರ್, ಸಾದಿಕ್ ಪಠಾಣ್, ಸಂದೇಶ ಬೋವಿವಡ್ಡರ್, ಅಶ್ಪಾಕ್ ಮುಲ್ಲಾ ಸುದ್ದಿಗೋಷ್ಠಿಯಲ್ಲಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *