
ಪ್ರತಿಧ್ವನಿ ಯಲ್ಲಾಪುರ :ಇತ್ತೀಚೆಗೆ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬಿಸಿಎ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಮಂಗಳವಾರ ಮುಕ್ತಾಯ ಕಂಡಿದೆ.


ಪಂದ್ಯಾವಲಿಯಲ್ಲಿ ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ 24 ಸಾವಿರ ನಗದು ಹಾಗು ವಿಶೇಷ ಪಾರಿತೋಷಕ ಬಹುಮಾನ ಪಡೆದರೆ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ 12 ಸಾವಿರ ನಗದು ಪಾರಿತೋಷಕ ಬಹುಮಾನ ಪಡೆದರು.
ಈ ಕ್ರೀಡಕೂಟದಲ್ಲಿ ಜಿಲ್ಲೆಯ 21 ತಂಡಗಳು ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಪ್ರಯೋಜಕ ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕ ನಾಯ್ಕ್ ವಿಶ್ವದರ್ಶನ ಬಿಸಿಎ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಭಟ್, ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ ಹೆಗಡೆ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಎಲ್. ಭಟ್ ಉಪಸ್ಥಿತರಿದ್ದರು.






Prathidvani Yellapura