Breaking News

ಜಿಟಿಜಿಟಿ ಮಳೆಗೆ ರೋಡಿಗೆ ಬಂದ ಜೋಡುಕೆರೆ ಮೊಸಳೆ- ಸ್ವಚ್ಚಂದ ಸಂಚಾರ – ಪಾದಚಾರಿಗಳಿಗೆ ಸಂಚಕಾರ.


ಪ್ರತಿಧ್ವನಿ ಯಲ್ಲಾಪುರ: ಪಟ್ಟಣದಲ್ಲಿ ಸೋಮವಾರ ಸಂಜೆ ಕೆಲ ಸಮಯ ಸಣ್ಣದಾಗಿ ಸುರಿದ ಮಳೆಗೆ ಜೋಡುಕೆರೆಯಲ್ಲಿ ಅಡಗಿರುವ ಮೊಸಳೆ ರಸ್ತೆ ಮೇಲೆ ಸಂಚರಿಸಿದೆ.
ಜಿಟಿಜಿಟಿ ಮಳೆಯ ನಡುವೆ ರಸ್ತೆ ಮೇಲೆ ಓಡಾಟ ನಡೆಸಿರುವುದು ಸ್ಥಳಿಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.
ದಿನದಿಂದ ದಿನಕ್ಕೆ ಮೊಸಳೆ ಸುದ್ದಿಯಾಗುತ್ತಿದ್ದು ಅರಣ್ಯ ಇಲಾಖೆ ಗಂಭೀರವಾಗಿ ಗಮನ ಹರಿಸಿ ಮೊಸಳೆ ಹಿಡಿಯುವ ಕಾರ್ಯವಾಗಬೇಕಿದೆ ಇಲ್ಲವಾದಲ್ಲಿ ಎರಡು ಕೆರೆಗಳಿಗು ಭದ್ರವಾದ ಫೆನ್ಸಿಂಗ್ ಅಳವಡಿಸಬೇಕಿದೆ.

ಆಗೊಮ್ಮೆ ಈಗೊಮ್ಮೆ ಮೊಸಳೆ ಸಾರ್ವಜನಿಕರಿಗೆ ಕಾಣಿಸುತ್ತಿದ್ದು ಈ ರಸ್ತೆಯಲ್ಲಿ ಓಡಾಟ ನಡೆಸುವ ಮಕ್ಕಳು,ಮಹಿಳೆಯರು, ವಯೋ ವೃದ್ದರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಇದನ್ನು ಲಘುವಾಗಿ ಪರಿಗಣಿಸಿದಂತೆ ಕಂಡು ಬರುತ್ತಿದ್ದು ಸಾರ್ವಜನಿಕರೆ ಕಾರ್ಯಾಚರಣೆ ನಡೆಸಿ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಈ ದಿನ ರಾತ್ರಿ “oppression jodkere crocodile “ ಗೆ ಮಂಜುನಾಥ ನಗರದ ಯುವ ಸಮೂಹ ಸಿದ್ದವಾಗಿದೆ. ದಾಂಡೇಲಿ ಮೂಲದ ಸ್ನೇಕ್ ಕ್ಯಾಚರ್ ಗಜಾನನ ಮುಳೆ ನೇತೃತ್ವದಲ್ಲಿ ಸ್ಥಳೀಯರ ತಂಡ ಕಾರ್ಯಾಚರಣೆಗಿಳಿಯಲಿದೆ ಎಂದು ಸ್ಥಳೀಯ ಪ್ರಮುಖ ಸತೀಶ್ ಶಿವಾನಂದ ನಾಯ್ಕ್ ಪ್ರತಿಧ್ವನಿ ಗೆ ಪ್ರತಿಕ್ರಯಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *