
ಪ್ರತಿಧ್ವನಿ ಯಲ್ಲಾಪುರ : ಶಾಲೆಯ ಸೌಂದರ್ಯ ಮೂಲಭೂತ ಸೌಕರ್ಯವೂ ಮಕ್ಕಳಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ್ ಹೇಳಿದರು.

ಅವರು ಹುತ್ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯ ಮಕ್ಕಳ ಬಿಳ್ಕೊಡುಗೆ ಹಾಗೂ ದಾನಿಗಳಿಗೆ ಅಭಿನಂದನಾ ಸಮಾರಂಭ ಉಧ್ಘಾಟಿಸಿ ಇಕೋ ಕ್ಲಬ್ ಹೊರತಂದ ವನಶ್ರೀ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು .
ಶಿಕ್ಷಕರು,ಪಾಲಕರು ಪೋಷಕರು ಮಾಜಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಸಹಭಾಗಿತ್ವ ಬೇಕು.ಈ ಮೂಲಕ ಇಲ್ಲಿಯ ಎಸ್ ಡಿ ಎಂಸಿ ಮಾದರಿಯಾಗಿ ಶಾಲೆಯನ್ನು ರೂಪುಗೊಳಿಸಿದೆ.ಮಕ್ಳ ಸಂಖ್ಯೆಯನ್ನು ಉಳಿಸಿಕೊಂಡು ಮತ್ರು ಹೆಚ್ಚಿಸಿಕೊಂಡು ಹೋಗುವ ಹೊಣೆ ಊರಿನ ಜನರ ಮೇಲಿದೆ ಎಂದರು.

ಇದೇ ವೇಳೆ ಶಾಲೆಯ ದಾಸ್ತಾನು ಕೊಠಡಿ ಮುಂಭಾಗ ಮತ್ತು ಒಳಭಾಗ ನೆಲಹಾಸು ನಿರ್ಮಿಸಲು ಸಹಕರಿಸಿದ ದಾನಿಗಳಾದ ಮಾಜಿ ವಿದ್ಯಾರ್ಥಿ ಎಂ.ಎಸ್.ಹೆಗಡೆ ಜಂಬೆಸಾಲ, ನಾಗೇಶ ಆರ್ ಭಟ್ಟ ಅಂಬುಳ್ಳಿ,ಕು.ಸಮರ್ಥ ಸಾತೊಡ್ಡಿ,ಮಾಬ್ಲೇಶ್ವರ ಸು ಭಟ್ಟ ಕಂಚನಳ್ಳಿ,ಸಂದೇಶ ಗಜಾನನ ಹೆಗಡೆ ಕಂಚನಳ್ಳಿ,ನಾಗೇಶ ಕೆ ಭಾಗ್ವತ್ ಜೇನಮೂಲೆ ಗೀತಾ ಗೋಪಾಲಕೃಷ್ಣ ಭಟ್ಟ ಎಲಿಗಿನಜಡ್ಡಿ,ಗ್ರಾಮ ಪಂಚಾಯತ ಚಂದ್ಗುಳಿ,ಇವರುಗಳನ್ನು ಅಭಿನಂದಿಸಲಾಯಿತು.

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಗ್ರಾ.ಪಂ ಮಾಜಿ ಸದಸ್ಯ ಆರ್.ಎಸ್.ಭಟ್ಟ ಮಾತನಾಡಿ,ಉತ್ತಮ ಎಸ್ಡಿಎಂಸಿ ತಂಡ ,ಶಿಕ್ಷಕರು ಪಾಲಕರು ಇದ್ದರೆ ಶಾಲೆ ಉತ್ತಮವಾಗಿಸಬಹುದು.ದುರ್ದೈವವೆಂದರೆ ಏನೆಲ್ಲ ಸವಲತ್ತುಗಳಿದ್ದರೂ ಮಕ್ಕಳನ್ನು ನಾವು ಯಾವುದೋ ವ್ಯಾಮೋಹಕ್ಕೆ ಒಳಗಾಗಿ ಬೇರೆಡೆಗೆ ಕಳಿಸುತ್ತಿರುವುದು ವಿಪರ್ಯಾಸ.ನಮ್ಮ ಮನೋಭಾವನೆ ಬದಲಾಗಬೇಕು ಎಂದರು.

ಶಿಕ್ಷಣ ಸಂಯೋಜಕ ಸುಧಾಕರ ನಾಯಕ ಮಾತನಾಡಿ,ಇಲ್ಲಿ ಶಿಕ್ಷಕರು ಎಸ್ಡಿಎಂಸಿಯವರು ಸೇರಿ ಶಾಲಾ ಪರಿಸರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ.ಸರಕಾರಿ ಶಾಲೆಯನ್ನು ತಮ್ಮದೆಂಬ ಭಾವನೆ ತಂದಿದ್ದಾರೆ.ಇಲ್ಲಿ ಕಲಿತು ಬಿಳ್ಕೊಡುತ್ತಿರುವ ಮಕ್ಕಳು ಸೌಭಾಗ್ಯವಂತರು ಎಂದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ನರಸಿಂಹ ಸಾತೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್,ಸಿ.ಆರ್.ಪಿ ದೀಪಾ ಶೆಟ್ಟಿ,ಹಿರಿಯರಾದ ಸುಬ್ರಾಯ ಭಟ್ ಕಂಚನಳ್ಳಿ ಸಹಶಿಕ್ಷಕರಾಸ ಶಾಲಿನಿ ನಾಯ್ಕ್, ವಿಜಯಲಕ್ಷ್ಮೀ ಹೆಗಡೆ, ನೇತ್ರಾವತಿ ಬಿ.ಎಂ, ಪಾಲಕರು ಪೋಷಕರು ಉಪಸ್ಥಿತರಿದ್ದರು.
ಬಿಇಓ ರೇಖಾ ನಾಯ್ಕ,ಪ್ರಕಾಶ ತಾರಿಕೊಪ್ಪ,ಪ್ರಶಾಂತ ಜಿ.ಎನ್,ದೀಪಾ ಶೆಟ್ಟಿ ಇವರುಗಳನ್ನು ಶಾಲಾ ವತಿಯಿಂದ ಗೌರವಿಸಲಾಯಿತು.ಏಳನೇ ತರಗತಿಯ ವಿದ್ಯಾರ್ಥಿಗಳು ತಮ್ಮಕೊಡುಗೆಯಾಗಿ ಶಾಲೆಗೆ ಕಪಾಟ (ಅಲಮಾರ್) ನ್ನು ನೀಡಿದರು.ಮುಖ್ಯಾಧ್ಯಾಪಕ ಸತೀಶ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕಗೈದು ಕಾರ್ಯಕ್ರಮ ನಿರ್ವಹಿಸಿದರು.





Prathidvani Yellapura