
ಪ್ರತಿಧ್ವನಿ ಯಲ್ಲಾಪುರ : ರಾಜ್ಯದ ವಿಧಾನಪರಿಷತ್ ಅತ್ಯುನ್ನತ ಸ್ಥಾನವಾದ ಸಭಾಪತಿ ಸ್ಥಾನ ಅಲಂಕರಿಸಿ ಕೆಲಕಾಲ ಸದನ ನಡೆಸುವ ಮೂಲಕ ಬುಡಕಟ್ಟು ಸಿದ್ದಿ ಸಮುದಾಯದ ಶಾಂತಾರಾಮ್ ಸಿದ್ದಿ ರಾಜ್ಯದ ವಿಧಾನಪರಿಷತ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ರಾಮ ಪುರ್ಲೆಮನೆ ನಿವಾಸಿಯಾದ. ಅತ್ಯಂತ ಸರಳ ಮತ್ತು ಬುಡಕಟ್ಟು ಸಿದ್ದಿ ಸಮುದಾಯದ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡು ವನವಾಸಿ ವಿಭಾಗದಲ್ಲಿ ಮತ್ತು ಸಂಘ ಪರಿವಾರದಲ್ಲಿ ಸೇವೆ ಸಲ್ಲಿಸುತ್ತಾ ಪಕ್ಷದ ಗಮನ ಸೆಳೆದು ವಿಧಾನಪರಿಷತ್ ಸ್ಥಾನ ಗಳಿಸಿ ಅದಾಗಲೆ ದಾಖಲೆ ಬರೆದ ಶಾಂತಾರಾಮ್ ಸಿದ್ದಿ ವಿಧಾನಪರಿಷತ್ ನಲ್ಲಿ ಹೊಸದೊಂದು ದಾಖಲೆ ಬರೆದಂತಾಗಿದೆ.

ವಿಧಾನಪರಿಷತ್ ನಲ್ಲಿ ಅತ್ಯುನ್ನತ ಸ್ಥಾನವೆಂದರೆ ಅದು ಸಭಾಪತಿ ಸ್ಥಾನವಾಗಿದೆ. ಸದ್ಯ ಸಭಾಪತಿಗಳಾಗಿ ಬಸವರಾಜ ಹೊರಟ್ಟಿ ಯವರು ನಿಭಾಯಿಸುತ್ತಿದ್ದು ಅದೃಷ್ಟವೆಂಬಂತೆ ಮಂಗಳವಾರ ಕೆಲಕಾಲ ಗೌರವಯುತ ಅತ್ಯುನ್ನತ ಸ್ಥಾನ ಶಾಂತಾರಾಮ್ ಸಿದ್ದಿ ಅವರಿಗೆ ಲಭಿಸಿ ಕೆಲಕಾಲ ಸದನ ನಡೆಸುವ ಮೂಲಕ ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸನ್ನಡತೆಗೆ ಕಾರಣವಾದ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಶಕ್ತಿ ಇದಕ್ಕೆ ಕಾರಣವಾದಂತಾಗಿದೆ.


ಒಟ್ಟಿನಲ್ಲಿ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಯಲ್ಲಾಪುರ ತಾಲೂಕಿನ ಕುಗ್ರಾಮದ ಅತ್ಯಂತ ಚಿಕ್ಕ ಬುಡಕಟ್ಟು ಸಿದ್ದಿ ಸಮುದಾಯದ ವ್ಯಕ್ತಿಒಬ್ಬರು ವಿಧಾನಪರಿಷತ್ ಸಭಾಪತಿ ಸ್ಥಾನ ಕೆಲಕಾಲ ಅಲಂಕರಿಸಿದರು ಅದು ಯಲ್ಲಾಪುರ ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ.





Prathidvani Yellapura