Breaking News

ಮನೆಮನೆಗೆ ಗಂಗೆ ಯೋಜನೆ ನೀರಿಲ್ಲದ ಮೇಲೆ ಇದ್ದರೇನು ಪ್ರಯೋಜನ? – ಸಮಸ್ಯೆ ಹೇಳಿ ವರ್ಷ ಕಳೆದರು ನಿಷ್ಪ್ರಯೋಜನ.!


ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರು ಪಂಚಾಯತ್ ಮತ್ತು ಕಿರವತ್ತಿ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆಗೆ ಗಂಗೆ ಜಲಜೀವನ್ ಮಿಷನ್ ಯೋಜನೆ ನಿಷ್ಪ್ರಯೋಜನವಾಗಿದೆ. ಅಲ್ಕೇರಿ ಗೌಳಿವಾಡ ಎಂಬಲ್ಲಿ  ಮನೆಮನೆಗೆ ಗಂಗೆ‌ ಎಂಬ ಕಲ್ಪನೆಯಲ್ಲಿ ನಿರ್ಮಿಸಿದ ಬೃಹತ್ ನೀರಿನ ಟ್ಯಾಂಕ್ ಕಟ್ಟಿದಂದಿನಿಂದ ಇಂದಿಗು ನೀರನ್ನೆ ಕಾಣದೆ ಖಾಲಿಖಾಲಿ ನಿಂತಿದೆ.ಅಂದಿ‌ನ ಕಾಲಕ್ಕೆ ಈ ಗ್ರಾಮ 82 ಮನೆಗಳಿಗೆ ನಳ ಕಲ್ಪಿಸುವ ಉದ್ದೇಶ ಹೊಂದಿತ್ತು ಇಂದಿಗು ನೀರು ಕೊಡದೆ ಅಪ್ರಯೋಜನವಾಗಿದೆ.


ಸುಮಾರು 30 ಲಕ್ಷದಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ ನೀರಿಲ್ಲದ ಮೇಲೆ ಪ್ರಯೋಜನವಿಲ್ಲದಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ಗಂಗೆ ಎನ್ನುತ್ತ ಇಂದಿಗು ಇಲ್ಲಿನ ಜನ ನೀರಿಗಾಗಿ ಹಾಹಾಕರ ಅನುಭವಿಸುತ್ತಿದ್ದಾರೆ.
ಇಲ್ಲಿನ ಶಾಲೆಯ ಕಾಂಪೌಂಡ್ ಒಳಗಿನ ಕೊಳವೆ ಬಾವಿಯಿಂದ ಒಂದು ಎರಡು ಕೊಡಪಾನ ಕುಡಿಯುವ ನೀರು ಪಡೆಯುವ ದಯನೀಯ ಪರಿಸ್ಥಿತಿ ಇದ್ದರು ಇಂದಿಗು ಜಲಜೀವನ್ ಮಿಷನ್ ಅಡಿ ನಿರ್ಮಿಸಿದ ಟ್ಯಾಂಕ್ ನಿಂದ ನೀರು ಹರಿಸದಿರುವುದು ವ್ಯವಸ್ಥೆಯ ವೈಪಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


ಇದು ಕೇವಲ ಅಲ್ಕೇರಿ ಗೌಳಿವಾಡ ಒಂದು ಗ್ರಾಮದ ಕಥೆಯಲ್ಲ  ಹುಣಸಗೇರಿ,ಮಂಗ್ಯಾನ ತಾವರಗೇರಿ ಯಲ್ಲೂ ಸೇರಿದಂತೆ ಇನ್ನೂ ಕೆಲವು ಇದೇಕಥೆ ಇದೇವ್ಯಥೆಯಲ್ಲಿದೆ. ಯಾವುದೆ ಯೋಜನೆಗಳು ಜನರ ಉಪಯೋಗಕ್ಕೆ ಬರುವಂತಿರಬೇಕು.  ಜನರ ತೆರಿಗೆ ಹಣ ಬಳಸಿ ನಿರುಪಯುಕ್ತ ಯೋಜನೆ ಅನುಷ್ಟಾನಕ್ಕೆ ಮುಂದಾಗುವುದನ್ನು ಇನ್ನಾದರು ನಿಲ್ಲಿಸಬೇಕಿದೆ.
ಸಂಬಂಧಿಸಿದ ಇಲಾಖೆ ತಕ್ಷಣ ಗಂಭೀರವಾಗಿ ಗಮನಹರಿಸಿ ಖಾಲಿ ಬಿದ್ದಿರುವ ಟ್ಯಾಂಕ್ ಗಳಿಗೆ ನೀರು ತಬಿಸುವ ಕಾರ್ಯ ಮಾಡಬೇಕಿದ್ದು ಜನರ ಆಕ್ರೋಶ ಬುಗಿಲೇಳುವ ಮುನ್ನ ಅವ್ಯವಸ್ಥೆ ಸರಿಪಡಿಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಸಮಸ್ಯೆ ಕುರಿತು ಸರಿಯಾಗಿ ಇಂದಿಗೆ ಒಂದು ವರ್ಷದ ಹಿಂದೆ ಜಯ ಕರ್ನಾಟಕ ಸಂಘಟನೆಯ ಅಡಿಯಲ್ಲಿ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿ ಪರಿಸ್ಥಿತಿ ಗಂಭೀರತೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಆದರೆ ಇದಾವುದನ್ನು ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದು ಇಂದಿಗೆ ವರ್ಷ ಕಳೆದರು ಸಮಸ್ಯೆ ಬಗೆ ಹರಿಸಿಲ್ಲ ಸಾರ್ವಜನಿಕರು ಬೆವರುಸುರಿಸಿ ದುಡಿದ ಹಣದಲ್ಲಿ ಸರ್ಕಾರಕ್ಕೆ ವಿವಿಧ ರೂಪದಲ್ಲಿ ತೆರಿಗೆ ಭರಣ ಮಾಡುವ ಉದ್ದೇಶ ಮೂಲಭೂತ ಸೌಕರ್ಯಗಳನ್ನು ಅನುಷ್ಟಾನ ಗೊಳಿಸಲಿ ಎಂದು ಆದರೆ ಜನರಿಗೆ ಯೋಜನೆಗಳು ಉಪಯೋಗಕ್ಕೆ ಬರದ ಮೇಲೆ ಪ್ರಯೋಜನವೇನು.ಇನ್ನಾದರು ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಇಲ್ಲವಾದಲ್ಲಿ ಜಯಕರ್ನಾಟಕ ಸಂಘಟನೆ ಅಡಿಯಲ್ಲಿ ಜಲಜೀವನ್ ಮಿಷನ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
ವಿಲ್ಸನ್ ಫರ್ನಾಂಡೀಸ್, ಜಯಕರ್ನಾಟಕ ಸಂಘಟನೆ
ಕಿರವತ್ತಿ.

ಯೋಜನೆ ರೂಪುಗೊಂಡಿರುವುದು ಮಾತ್ರ ಬಡ ಕುಟುಂಬಗಳ ನೀರಿನ ದಾಹ ನೀಗಲು. ಇಂದಿಗು ಅಲ್ಕೇರಿ ಗೌಳಿವಾಡದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ಟ್ಯಾಂಕ್ ಕಟ್ಟಿದ ಮೇಲೆ ನೀರಿನ ಮೂಲ ಹುಡುಕಿ ಕೊಳವೆ ಬಾವಿ ಕೊರೆಸಿದರು ಅದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಿ ನೀರು ಹರಿಸದೆ ಹಾಗೆ ಬಿಟ್ಟಿರುವುದು  ದುರಂತವಾಗಿದೆ. ಇದರಿಂದ ಯಾವುದೆ ಜನಪರ ಯೋಜನೆಗಳ ಮೇಲೆ ಜನರಿಗೆ ನಂಬಿಕೆ ಇಲ್ಲದಾಗಿ ಖಾಲಿ ಹೊಡೆಯುತ್ತಿರುವ ಬೃಹತ್ ನೀರಿನ ಟ್ಯಾಂಕ್ ನಗೆಪಾಟಲಿಗೆ ಗುರಿಯಾಗಿದೆ.
ಜಿಮ್ಮು ಬಾಬು ಜೋರೆ, ಸ್ಥಳೀಯ ನಿವಾಸಿ, ಜಯ ಕರ್ನಾಟಕ ಸಂಘಟನೆ ಸ್ಥಳೀಯ ಪ್ರಮುಖ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *