Breaking News

ಕಿರವತ್ತಿ ದೊಡ್ಲ ಡೈರಿಯಲ್ಲಿ ” ಸುರಕ್ಷತೆಗೆ ಸಂಬಂಧಿಸಿದ ಜಾಗೃತಿ ಮತ್ತು ಸ್ಪರ್ಧೆಗಳು..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪದ ದೊಡ್ಲಾ ಹಾಲಿನ ಡೈರಿ ಘಟಕದಲ್ಲಿ ಸುರಕ್ಷತೆಗೆ ಸಂಬಂದಿಸಿದಂತೆ ವಿವಿಧ ಸ್ಪರ್ಧೆಗಳು ಹಾಗು ಜಾಗೃತಿ ಕಾರ್ಯಕ್ರಮ ಜರುಗಿತು.

55ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ 2026 ಅಂಗವಾಗಿ ಡೋಡ್ಲಾ ಡೈರಿ ಲಿಮಿಟೆಡ್, ಕಿರವಟ್ಟಿ ಘಟಕ ವತಿಯಿಂದ ಎಲ್ಲಾ ಉದ್ಯೋಗಿಗಳು ಹಾಗೂ ಗುತ್ತಿಗೆ ಆಧಾರದ ಕಾರ್ಮಿಕರಿಗಾಗಿ ವಿವಿಧ ಸುರಕ್ಷತಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.  ಸ್ಪರ್ಧೆಗಳಲ್ಲಿ ಸುರಕ್ಷತಾ ಕ್ವಿಜ್, ಚಿತ್ರಕಲೆ, ಘೋಷವಾಕ್ಯ ಬರವಣಿಗೆ ಹಾಗೂ ರೋಲ್ ಪ್ಲೇ ಸ್ಕಿಟ್ ಒಳಗೊಂಡಿತ್ತು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕಾರ್ಮಿಕರಲ್ಲಿ ಕಾರ್ಯಸ್ಥಳದ ಸುರಕ್ಷತೆ ಹಾಗೂ ದೈನಂದಿನ ಜೀವನದಲ್ಲಿ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಆಗಿತ್ತು.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕೆಎಸ್‌ಪಿಸಿಬಿ ಕಾರವಾರದ ಪರಿಸರ ಅಧಿಕಾರಿ ಸಂತೋಷ್ ಬಿ.ಕೆ.ಟ್ರೋಫಿಗಳನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಪರಿಸರ ಸಂರಕ್ಷಣೆ ಹಾಗೂ ಕಾರ್ಯಸ್ಥಳದ ಸುರಕ್ಷತೆ ಅತ್ಯಂತ ಮಹತ್ವವಾದದ್ದು ಮತ್ತು ಅದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಳಹರಿ ಪಿ – ಪ್ಲಾಂಟ್ ಮ್ಯಾನೇಜರ್,  ಪ್ರಕಾಶ್ ಡಿ – ಅಸಿಸ್ಟೆಂಟ್ ಮ್ಯಾನೇಜರ್ HR & Admin ಸೇರಿದಂತೆ ಡೋಡ್ಲಾ ಡೈರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮವು ಕಾರ್ಮಿಕರು ಹಾಗೂ ಸ್ಥಳೀಯ ಸಮುದಾಯದಲ್ಲಿ ಸುರಕ್ಷತಾ ಜಾಗೃತಿ ಮೂಡಿಸಲು ಡೋಡ್ಲಾ ಡೈರಿ ಕೈಗೊಂಡ ಒಂದು ಮಹತ್ವದ ಪ್ರಯತ್ನವಾಗಿದೆ. 

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ತೋಟಗಾರಿಕ ಇಲಾಖೆ ಪರಿಸರದಲ್ಲಿ ಮಕರಂದ ಕ್ರೂಡಿಕರಣ – ನೂರಾರು ಜೇನಿನ ಪೆಟ್ಟಿಗೆಗಳ ಅನಾವರಣ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನಾಯ್ಕನ ಕೆರೆ ಬಳಿ ಇರುವ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ,ಮಾವಿನ ತೋಟದ ನಡುವೆ ನೂರಾರು ಸಂಖ್ಯೆಯಲ್ಲಿ …

Leave a Reply

Your email address will not be published. Required fields are marked *