
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ,ಯಲ್ಲಾಪುರ : ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಜಾತ್ರೆಯು ಜುಲೈ ತಿಂಗಳ 5 ರಂದು ರವಿವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಲಿದೆ ಎಂದು ಸಮಾಜ ಸೇವಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಪ್ರತಿಧ್ವನಿ ಗೆ ಮಾಹಿತಿ ನೀಡಿದ್ದಾರೆ.

ತಮ್ಮ ಪೂರ್ವಜರ ಕಾಲದಲ್ಲಿ ಯುದ್ದದಲ್ಲಿ ವೀರ ಮರಣವನಪ್ಪಿದ ಕಾಳುಘಾಡಿ ಮತ್ತು ಬಾಳು ಘಾಡಿ ಅವರ ಪಾರ್ಥಿವ ಶರೀರವನ್ನು ಇದೇ ಕೋಳಿಕೇರಿ ಅರಣ್ಯ ಪರಿಸರದಲ್ಲಿ ಸಂಸ್ಕಾರ ಮಾಡಿದ್ದು ಈ ಪರಿಸರವು ದಿವ್ಯ ಶಕ್ತಿಯನ್ನು ತುಬಿಕೊಂಡಿದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಸಹಸ್ರಾರು ಭಕ್ತರು ದೈವಾಂಶ ಸಂಭೂತರಾದ ಕಾಳು ಘಾಡಿ – ಬಾಳು ಘಾಡಿ ದರ್ಶನ ಪಡೆದು ಇಷ್ಟಾಥಗಳನ್ನು ಬೇಡಿ ಕೊಳ್ಳುತ್ತಾರೆ.

ಪ್ರಸಕ್ತ ಸಾಲಿನ ಜಾತ್ರೋತ್ಸವವನ್ನು ವಿಜಯ್ ವಿ ಮಿರಾಶಿ, ವಿನೋದ್ ಎಚ್ ಮಿರಾಶಿ, ಸುಭಾಷ್ ಮಿರಾಶಿ, ಆನಂದ ಮಿರಾಶಿ ಹಾಗೂ ಮಿರಾಶಿ ಬಂಧುಗಳು ಆಪ್ತರ ನೇತೃತ್ವದಲ್ಲಿ ಜಾತ್ರೋತ್ಸವದ ಸಕಲ ಸಿದ್ಧತೆಗಳು ಪ್ರಾರಂಭವಾಗಿದ್ದು ಭಕ್ತರಿಗೆ ಪೂಜಾ ವ್ಯವಸ್ಥೆ ಮತ್ತು ಪ್ರಸಾದ ವಿನಿಯೋಗ ನೆರವೇರಿಸಲಿದ್ದಾರೆ.




Prathidvani Yellapura