Breaking News

ಮಳೆಗಾಲದಲ್ಲಿ ನದಿ ಮಿನಿನ ಭರಾಟೆ ಯಲ್ಲಾಪುರ ಮಾರುಕಟ್ಟೆಯಲ್ಲಿ ಕಾಟ್ಲ ಮೀನುಗಳ ಸುಗ್ಗಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ



ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯಲ್ಲಿ  ಕಾಟ್ಲ ಮೀನುಗಳ‌ ಸುಗ್ಗಿಯಾಗಿದೆ. ಕಳೆದ ಕೆಲವು ದಿನಗಳಿಂದ ಯತೇಚ್ಚವಾಗಿ ನದಿ ಮೀನುಗಳು ಮಾರಾಟಕ್ಕೆ ಲಗ್ಗೆ ಇಡುತ್ತಿದ್ದು ಹೆಚ್ಚಿನ ತೂಕದ ಕಾಟ್ಲ,ಕನ್ನಡಿ, ರವು ಮೀನುಗಳು ಗ್ರಾಹಕರನ್ನು ಸೆಳೆಯುತ್ತಿದೆ.
     ವರ್ಷಪೂರ್ತಿ ವಿವಿಧ ಜಾತಿಯ ಸಮುದ್ರ ಮೀನು ಮಾರುಕಟ್ಟೆ ಆವರಿಸಿದ್ದರೆ ಯಲ್ಲಾಪುರದ ಮಾರುಕಟ್ಟೆಯಲ್ಲಿ ಮಳೆಗಾಲದಲ್ಲಿ ನದಿ ಮೀನುಗಳ ರಾಜ್ಯಭಾರ ಹೆಚ್ಚು.


     ಈ ಬಾರಿ ಕಳೆದೆರಡು ದಿನಗಳಿಂದ ಹೆಚ್ಚಿನ ತೂಕದ ಕಾಟ್ಲ ಮೀನುಗಳು ಮಾರಾಟಕ್ಕೆ ಬಂದಿದ್ದು ರವಿವಾರ 36 ಕೆ.ಜಿ ತೂಕದ ಮೀನು ಮಾರುಕಟ್ಟೆಗೆ ಬಂದಿದ್ದು ಇದು ಭಾಗವತಿ ಡ್ಯಾಮ್ ನಿಂದ ತಂದದಾಗಿತ್ತು ಬಸವರಾಜ್ ಮತ್ತು ಮುಷ್ತಾಕ್ ಅವರ ತಂಡ ಈ ಮೀನಿನ ವ್ಯಾಪಾರ ನಡೆಸಿದ್ದರು ಅಪರೂಪದ ಹೆಚ್ಚು ತೂಕದ ಮೀನಾದ್ದರಿಂದ ಕ್ಷಣ ಮಾತ್ರದಲ್ಲಿ ಗ್ರಾಹಕರು ಮುಗಿಬಿದ್ದು ಖರೀದಿಸಿದ್ದರು.

        ಬುಧವಾರ ಮಾರುಕಟ್ಟೆಗೆ 30 ಕೆಜಿಗು ಅಧಿಕ ತೂಕದ ಉತ್ತಮ ಕಾಟ್ಲ ಮೀನು ಮಾರುಕಟ್ಟೆಗೆ ವ್ಯಾಪಾರಕ್ಕೆ ಬಂದಿತ್ತು. ಜ್ಞಾನೇಶ್ವರ ಮತ್ತು ಬಶೀರ್ ಮೀನಿನ ವ್ಯಾಪಾರ ನಡೆಸಿದ್ದರು. ಕಾಟ್ಲ ಪ್ರಿಯರು ಸಂತಸದಿಂದ ಮೀನನ್ನು ಕೊಂಡು ಹೋದರು.

        ಒಟ್ಟಿನಲ್ಲಿ ಪ್ರಸಕ್ತ ವರ್ಷದ ಮಳೆಗಾಲದಲ್ಲಿ ನದಿ ಮೀನು ಸೇವಿಸುವ ಪ್ರಿಯರಿಗೆ ಕಾಟ್ಲ ಮೀನುಗಳ ಸುಗ್ಗಿಯಾಗಿದೆ. ಗ್ರಾಹಕರು ತಮಗಿಷ್ಟವಾದ ದೊಡ್ಡ ಗಾತ್ರದ ಮೀನನ್ನು ಖರೀದಿಸುತ್ತಿದ್ದು ಬೆಲೆ ಕೆಜಿಗೆ 300 ಆಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *