

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೆಂಗಿನಗೇರಿ ಕಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರೆ ಇಲ್ಲದಿದ್ದರು ಅತಿಥಿ ಶಿಕ್ಷಕರ ಶ್ರಮ ಮತ್ತು ಅಲ್ಕೇರಿ ಗೌಳಿವಾಡ ಶಾಲೆಯ ಶಿಕ್ಷಕ ಗಂಗಾಧರ ಲಮಾಣಿ ಅವರ ಪರಿಶ್ರಮದಲ್ಲಿ 44 ಮಕ್ಕಳಿಂದ ತುಂಬಿ ಕಳಕಳೆಯಾಡುತ್ತಿದೆ ಸರ್ಕಾರಿ ಶಾಲೆ. ಇದೀಗ ಊರ ನಾಗರಿಕರ ಪರಿಶ್ರಮದಲ್ಲಿ ನೂತನ ಕೊಠಡಿ ಉದ್ಘಾಟನೆಯಾಯಿತು.

ಕನ್ನಡ ಶಾಲೆಗಳು ಪ್ರಗತಿ ಪಥದತ್ತ ಸಾಗುತ್ತಿರುವ ಸಂದರ್ಭಗಳು ನೋಡುವುದೆ ಒಂದು ಸೌಭಾಗ್ಯ. ಮಕ್ಕಳ ಶಿಕ್ಷಣಕ್ಕಾಗಿ ಕೊಠಡಿ ಕಟ್ಟಿಸಿ ಅವಿರತ ಪರಿಶ್ರಮದಲ್ಲಿ ಮಕ್ಕಳ ಭವಿಷ್ಯಕ್ಕೆ ಶಿಕ್ಷಣದ ಬುನಾದಿ ಹಾಕುತ್ತಿರುವುದು ಶ್ಲಾಘನೀಯ ಕಾರ್ಯ. ಈ ದಿಸೆಯಲ್ಲಿ ಏನು ಇಲ್ಲಗಳ ನಡುವೆ ಏನೊ ಸಾಧನೆ ಇದೆ ಎಂಬ ಪ್ರತ್ನದ ಫಲ ತೆಂಗಿನಗೇರಿ ಶಾಲೆಯಲ್ಲಿ ಕಂಡುಬರುತ್ತಿದೆ.
ಖಾಯಂ ಶಕ್ಷಕರಿಲ್ಲದೆ ಕೇವಲ ಅತಿಥಿ ಶಿಕ್ಷಕರ ಶ್ರಮದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಗಂಗಾಧರ ಲಮಾಣಿ ಅವರ ಪ್ರಯತ್ನ ಅಭಿನಂದನೀಯ ಕಾರ್ಯ ಎಂದು ಕೊಠಡಿ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಸಿದ್ದಪಡಿಸಿದ ಹಸ್ತಪ್ರತಿ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

ಸಮೀಪದಲ್ಲೆ ಇರುವ ಕಂಚನಳ್ಳಿ ಶಾಲೆ ಒಂದು ವರೆ ಕಿಲೋಮೀಟರ್ ದೂರದಲ್ಲಿದೆ ಇದಕ್ಕೆ ಪುಟ್ಟ ಮಕ್ಕಳು ಕಾಡುದಾರಿಯಲ್ಲಿ ಕೆರೆಯ ದಂಡೆಯಲ್ಲಿ ನಡೆದು ಸಾಗುವುದು ಕಂಡು ನಮ್ಮಲ್ಲೆ ಶಾಲೆ ತೆರೆಯಬೇಕೆಂಬ ಬಹುವರ್ಷಗಳ ಕನಸು ಹಂತಹಂತವಾಗಿ ಸಾಧಿಸುತ್ತ ಇಂದು ಸ್ವಂತ ಕಟ್ಟಡ ನಿರ್ಮಾಣವಾಗಿದೆ ಮುಂದೆಯು ಶಿಕ್ಷಣಕ್ಕಾಗಿ ಏನು ಬೇಕೊ ಎಲ್ಲವನ್ನು ನಾಗರಿಕರು ಸಹಕರಿಸುತ್ತಾಬರುತ್ತೇವೆ ಇಲಾಖೆಯ ಸಹಕಾರವು ಇರಲಿ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗರಾಂ ಪಾಟೀಲ ಅಧ್ಯಕ್ಷಿಯ ಮಾತುಗಳನ್ನಾಡಿದರು.

ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಬರುವ ಎಲ್ಲಾ ಮಕ್ಕಳು ಗೌಳಿ ಸಮುದಾಯದ ಮಕ್ಕಳೆ ಆಗಿದ್ದು ಪೋಷಕರು ವಿದ್ಯಾಬ್ಯಾಸದಲ್ಲಿ ಹಿಂದುಳಿದವರಾದರು ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ತೆಂಗಿನಗೇರಿಯಲ್ಲಿ ಖಾಸಗಿ ಮನೆಯೊಂದರಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಪ್ರಾರಂಭವಾಗಿ ಮತ್ತೆ ಕೆಲವು ಕಾರಣಾಂತರದಿಂದ ಸ್ಥಗಿತಗೊಳಿಸಲಾಗಿತ್ತು. ಪುನಃ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಇಚ್ಚಾಶಕ್ತಿ ಊರನಾಗರಿಕರ ಸಹಕಾರ ವಿಶೇಷವಾಗಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಜವಬ್ದಾರಿಹೊತ್ತ ಗಂಗಾಧರ ಲಮಾಣಿ ಅವರ ಅವಿರತ ಶ್ರಮದಿಂದ ನೂತನ ಶಾಲಾ ಕೊಠಡಿ ನಿರ್ಮಿಸಿ ಮಕ್ಕಳ ವಿದ್ಯಾಬ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಅವರ ನಿಸ್ವಾರ್ಥ ಶಿಕ್ಷಣ ಸೇವೆಗೆ ಅಭಿನಂದನೆಗಳು ಎಂದು ಪ್ರಮುಖರಾದ ಸಂತೋಷ್ ಜಿಗಳೂರ್, ಸತೀಶ್ ನಾಯ್ಕ್, ಪ್ರಭಾ ಜಯರಾಜ್, ದಿಲೀಪ್ ದೊಡ್ಮನಿ, ಕೇಬಲ್ ನಾಗೇಶ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಾಲಾ ಕೊಠಡಿಯ ಗೋಡೆ ಮೇಲೆ ಜಾಗೃತ ಮತ್ತು ಮಾಹಿತಿ ಬರಹ ಬರೆದ ಭರತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂತೋಷ್ ಜಿಗಳೂರ್, ವೆಂಕಟ್ರಾಯ, ದಿಲೀಪ್ ದೊಡ್ಮನಿ, ಸತೀಶ್ ನಾಯ್ಕ,ಎಮ್.ಎ ಬಾಗೇವಾಡಿ , ಗಂಗು ದೊಂಡು ಪಾಟಿಲ್, ಸಂಗೀತ ಪಾಟೀಲ, ಸೋನು, ರಾಮು ಬಾಬು ಶಿಂದೇ, ಶಾಮು ಶಿಂಧೆ, ಜಾನು ಸಾಹು ಪಟಕಾರೆ, ರಾಮು ವಿಠ್ಠು ಶಿಂದೆ, ಜಿಮ್ಮು, ಜಾಹು ಬಾಹು ಪಟಕಾರೆ, ರಾಮು ವಿಠ್ಠು ದೊಂಡು ಕೊಕರೆ ಸ್ಥಳೀಯ ಮಹಿಳಾ ಸಂಘದವರು ಹಿರಿಯರು ಉಪಸ್ಥಿತರಿದ್ದರು.



Prathidvani Yellapura